More

    ಸಮಸ್ಯೆ ಬಗ್ಗೆ ಗಮನ ಹರಿಸಿದರೆ ಸಾಧನೆ ಅಸಾಧ್ಯ

    ಮುದಗಲ್: ಸಾಧಿಸುವ ಮನಸ್ಸಿಗೆ ಹಲವಾರು ಸಮಸ್ಯೆಗಳು ಅಡ್ಡಿ ಬರುವುದು ಸಹಜ. ಆದರ ಬಗ್ಗೆ ಗಮನಹರಿಸಿದರೆ ಸಾಧಿಸುವುದು ಅಸಾಧ್ಯ ಎಂದು ಬಾಗಲಕೋಟೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡಿಡಿ.ಅಮರೇಶ ಹಾವಿನ್ ಹೇಳಿದರು.

    ಇದನ್ನೂ ಓದಿ: ಸಮಸ್ಯೆಗಳಿಗೆ ಪರಿಹಾರ ಒದಗಿಸಿ

    ಸಮೀಪದ ಕಿಲಾರಹಟ್ಟಿಯಲ್ಲಿ ಶಿಕ್ಷಕ ವೃತ್ತಿಗೆ ಆಯ್ಕೆಯಾದವರಿಗೆ ಮತ್ತು ಸರ್ಕಾರಿ ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕರ ಬಿಳ್ಕೊಡುಗೆ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.

    ಕೇವಲ 1000-1200 ಜನಸಂಖ್ಯೆ ಇರುವ ಮತ್ತು ಮೂಲ ಸೌಕರ್ಯದಿಂದ ವಂಚಿತವಾಗಿರುವ ಕುಗ್ರಾಮದಲ್ಲಿ ಸುಮಾರು 60ಕ್ಕೂ ಹೆಚ್ಚು ಯುವಕರು ಸರ್ಕಾರಿ ನೌಕರಿ ಪಡೆದಿದ್ದು, ಒಂದೇ ಗ್ರಾಮದಲ್ಲಿ 6 ಜನರು ಶಿಕ್ಷಕರಾಗಿ ಆಯ್ಕೆಯಾಗಿರುವುದು ಸಾಧನೆಗೆ ಸಾಕ್ಷಿಯಾಗಿದೆ.

    ಕಳೆದ ಹತ್ತು ವರ್ಷಕ್ಕೆ ಹೋಲಿಕೆ ಮಾಡಿದರೆ ಯುವಕರಲ್ಲಿ ಶಿಕ್ಷಣದ ಮಹತ್ವದ ಬಗ್ಗೆ ಅರಿವು ಮೂಡಿದ್ದು ನಿರಂತರ ಪರಿಶ್ರಮದ ಮೂಲಕ ಉತ್ತಮ ಸಾಧನೆ ಮಾಡುವತ್ತ ಗಮನ ಹರಿಸಿ ಎಂದರು.

    ಶಿಕ್ಷಕ ಸೂಗರಯ್ಯ ಹಿರೇಮಠ ಮಾತನಾಡಿ, ಸರ್ಕಾರಿ ಶಾಲೆ ಬಗ್ಗೆ ಗ್ರಾಮಸ್ಥರು ಹೆಚ್ಚಿನ ಕಾಳಜಿ ವಹಿಸಿಕೊಂಡಿದ್ದರಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವದಕ್ಕೆ ಪ್ರೇರಣೆಯಾಗಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಸೌಲಭ್ಯಕ್ಕಾಗಿಯೇ ಕಾಯದೆ ಕಿಲಾರಹಟ್ಟಿಯಲ್ಲಿ ಪ್ರತಿಯೊಬ್ಬ ಪಾಲಕರು ಸರ್ಕರಿ ಶಾಲೆಗೆ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸುತ್ತಿರುವುದು ಮಾದರಿ ಎಂದರು.

    13 ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಕವಿತ, ಸೂಗರಯ್ಯ, ಅರುಂಧತಿ, ಶ್ರೀದೇವಿಯವರಿಗೆ ಬಿಳ್ಕೊಡುಗೆ ಮತ್ತು ನೂತನವಾಗಿ ಶಿಕ್ಷಕ ವೃತ್ತಿಗೆ ಆಯ್ಕೆಯಾದ ಕಿಲಾರಹಟ್ಟಿ ಗ್ರಾಮದ ಪೂಜಾ ಸೋಮನಗೌಡ ಮಾಲಿಪಾಟೀಲ್, ಯಲ್ಲಮ್ಮ ಎಸ್.ಆದಾಪುರು, ಸಂಗಪ್ಪ ಆದಪುರು, ಶಂಕ್ರಮ್ಮ ನಾಗರಾಜ ಕಮತರ್, ರವಿಚಂದ್ರ ಅಯ್ಯನಗುಡಿ, ಪರಶುರಾಮ ಅಯ್ಯನಗುಡಿವರಿಗೆ ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು.

    ಕಳ್ಳಿಲಿಂಗಸುಗೂರು ಶ್ರೀರೇವಣ ಸಿದ್ದೇಶ್ವರ ಮಠದ ಶ್ರೀ ಬಾಲಯ್ಯ ಸ್ವಾಮಿ, ಅಕ್ಷರ ದಾಸೊಹ ತಾಲೂಕ ಅಧಿಕಾರಿ ನಾಗನಗೌಡ ಬಯ್ಯಪುರು, ಗ್ರಾಪಂ.ಉಪಾಧ್ಯಕ್ಷ ಅಮರೇಶ ಗೊರೆಬಾಳ, ಸದಸ್ಯ ಲಾಲಪ್ಪ ರಾಠೋಡ್, ಎಸ್ಡಿಎಂಸಿ.ಅಧ್ಯಕ್ಷ ಲಕ್ಷ್ಮೀಪುತ್ರ ಹಾವಿನ್,ಮುಖ್ಯ ಶಿಕ್ಷಕರಾದ ನಾರಾಯಣ ಜಾದವ್, ಹನುಮನಗೌಡ, ಸೋಮನಗೌಡ ಮಾಲಿಪಾಟೀಲ್ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts