More

    ವಿಶೇಷ ನ್ಯಾಯಾಲಯದಲ್ಲಿ ತನಿಖೆ: ಯು.ಟಿ.ಖಾದರ್ ಆಗ್ರಹ

    ಮಂಗಳೂರು: ಕೋಮು ಸಂಘರ್ಷದಲ್ಲಿ ಮೂವರು ಹತರಾದ ಪ್ರಕರಣದಲ್ಲಿ ಸರ್ಕಾರ ಒಂದರ ತನಿಖೆಯನ್ನು ಮಾತ್ರ ಎನ್‌ಐಎಗೆ ವಹಿಸಿದೆ. ಸರ್ಕಾರಕ್ಕೆ ನಿಜವಾದ ಕಾಳಜಿಯಿದ್ದರೆ ಹೈಕೋರ್ಟ್‌ನಲ್ಲಿ ವಿಶೇಷ ನ್ಯಾಯಾಲಯ ಸ್ಥಾಪಿಸಿ ತನಿಖೆ ಮೂಲಕ ಪ್ರಕರಣದ ಸತ್ಯಾಸತ್ಯತೆ ಬಯಲಿಗೆಳೆದು, ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ವಿಧಾನಸಭೆ ಪ್ರತಿಪಕ್ಷ ಉಪನಾಯಕ ಯು.ಟಿ.ಖಾದರ್ ಆಗ್ರಹಿಸಿದ್ದಾರೆ.


    ಒಂದು ಪ್ರಕರಣದಲ್ಲಿ ಮಾತ್ರ ಪರಿಹಾರ ವಿತರಿಸಿ ಇಲ್ಲೂ ತಾರತಮ್ಯ ಮಾಡಿದೆ. ಹತ್ಯೆಯಾದ ಇನ್ನಿಬ್ಬರು ಯುವಕರ ತಾಯಂದಿರು ಸರ್ಕಾರಕ್ಕೆ ಕಾಣಿಸಿಲ್ಲ. ಈ ರೀತಿಯ ರಾಜಕೀಯ ಪ್ರೇರಿತ ಕ್ರಮ ಸರಿಯಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಕ್ಷೇಪಿಸಿದರು.


    ಜಿಲ್ಲೆಯಲ್ಲಿ ಕೋಮು ಸಂಘರ್ಷವನ್ನು ನಿಯಂತ್ರಿಬೇಕೆಂಬ ಇಚ್ಛೆ ಸರ್ಕಾರಕ್ಕಿದ್ದರೆ ಸುಗ್ರೀವಾಜ್ಞೆ ಮೂಲಕ ಕೋಮು ಗಲಭೆ ನಿಯಂತ್ರಣ ಕಾಯ್ದೆ ಜಾರಿಗೆ ತರಲಿ. ಸಾರ್ವಜನಿಕರು ಪರಸ್ಪರ ಅನ್ಯೋನ್ಯದಿಂದ ಸಾಮರಸ್ಯದ ಬದುಕುವುದು ಅಗತ್ಯವಾಗಿದೆ. ಅಭಿವೃದ್ಧಿ, ಸುರಕ್ಷೆ ದೃಷ್ಟಿಯಿಂದಲೂ ಕಾಯ್ದೆಯ ಅಗತ್ಯವಿದೆ ಎಂದರು.


    ಮಹಮ್ಮದ್ ಕುಂಜತ್ತಬೈಲ್, ಟಿ.ಕೆ.ಸುಧೀರ್, ಸಲೀಂ ಪಾಂಡೇಶ್ವರ, ಯಾಜ್ ಅಮ್ಮೆಮ್ಮಾರ್, ಇಸ್ಮಾಯಿಲ್, ಯಶವಂತ ಪ್ರಭು, ರಾಬಿನ್ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts