More

    ಪ್ರ್ರೊ ಕಬಡ್ಡಿ: ಪ್ರದೀಪ್ ನರ್ವಾಲ್ ಬಳಗದ ಎದುರು ಬುಲ್ಸ್‌ಗೆ ವೀರೋಚಿತ ಸೋಲು

    ನೋಯ್ಡ: ಸ್ಟಾರ್ ರೈಡರ್ ಪ್ರದೀಪ್ ನರ್ವಾಲ್ (10) ಆಟದ ಎದುರು ಮಂಕಾದ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಯಲ್ಲಿ ಯುಪಿ ಯೋಧಾಸ್ ಎದುರು 33-34 ಅಂತರದಿಂದ ವೀರೋಚಿತ ಸೋಲು ಅನುಭವಿಸಿದೆ. ಈ ಮೂಲಕ ಯುಪಿ ಯೋಧಾಸ್ ತವರಿನಲ್ಲಿ ಶುಭಾರಂಭ ಕಂಡಿದೆ.

    ನೋಯ್ಡ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭಗೊಂಡ ಚರಣದ 2ನೇ ಪಂದ್ಯದಲ್ಲಿ ಮೊದಲಾರ್ಧದ 19 ನಿಮಿಷದವರೆಗೂ ಉಭಯ ತಂಡಗಳು ಸಮಬಲದ ಹೋರಾಟ ಪ್ರದರ್ಶಿಸಿದವು. ಅಂತಿಮ ನಿಮಿಷದಲ್ಲಿ ಪ್ರದೀಪ್ ನರ್ವಾಲ್‌ಗೆ 2 ಅಂಕ ನೀಡಿದ ಬುಲ್ಸ್ ಆಲೌಟ್ ಭೀತಿ ಎದುರಿಸಿತು. ಮೊದಲಾರ್ಧದಲ್ಲಿ ಬುಲ್ಸ್ 13-15ರಿಂದ ಹಿನ್ನಡೆ ಕಂಡಿತು. ದ್ವಿತಿಯಾರ್ಧದಲ್ಲಿ 2 ಬಾರಿ ಆಲೌಟ್ ಆಗುವ ಮೂಲಕ ಬುಲ್ಸ್ ಸೋಲಿನತ್ತ ಸಾಗಿತು. ಅಂತಿಮ ನಿಮಿಷದಲ್ಲಿ ಬುಲ್ಸ್ ತಿರುಗೇಟು ನೀಡಿದರೂ ಸೋಲಿನಿಂದ ಪಾರಾಗಲಿಲ್ಲ. ಬುಲ್ಸ್ ಪರ ಭರತ್, ಸುಶೀಲ್ ತಲಾ 8 ಅಂಕ ಕಲೆಹಾಕಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts