More

    Video | ಏನೇ ಆದ್ರೂ ಹತ್ರಾಸ್​​ಗೆ ಹೋಗೇ ಹೋಗ್ತೀನಿ: ಪ್ರಿಯಾಂಕಾ ಗಾಂಧಿ ವಾದ್ರಾ ಸವಾಲ್​

    ನವದೆಹಲಿ: ‘ಏನೇ ಆಗಲಿ.. ನಾನು ಹತ್ರಾಸ್​ಗೆ ಭೇಟಿ ಕೊಟ್ಟು, ಸಂತ್ರಸ್ತೆಯ ಕುಟುಂಬದ ಜತೆ ಮಾತನಾಡಿಯೇ ಬಿಡುತ್ತೇನೆ. ಪೊಲೀಸರು ತಡೆದರೂ ಸಂತ್ರಸ್ತೆಯ ಕುಟುಂಬವನ್ನು ನಾನು ಭೇಟಿಯಾಗುವುದು ಖಚಿತ’ ಎಂಬುದಾಗಿ ಕಾಂಗ್ರೆಸ್​ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸವಾಲೆಸೆದಿದ್ದಾರೆ.

    ಗುರುವಾರ ರಾಹುಲ್​ ಗಾಂಧಿ ಜತೆ ಹತ್ರಾಸ್​ಗೆ ಭೇಟಿ ಕೊಡುವ ಯತ್ನವನ್ನು ಉತ್ತರ ಪ್ರದೇಶದ ಪೊಲೀಸರು ವಿಫಲಗೊಳಿಸಿದ್ದರೂ, ಪ್ರಿಯಾಂಕಾ ಇದೀಗ ಮತ್ತೊಮ್ಮೆ ರಾಹುಲ್​ ಜತೆ ಅಲ್ಲಿಗೆ ಹೊರಟಿದ್ದಾರೆ. ಅವರೊಂದಿಗೆ ಸಂಸದ ಶಶಿ ತರೂರ್​ ಸೇರಿ ಹತ್ತಾರು ನಾಯಕರೂ ಜತೆಯಾಗಿದ್ದಾರೆ.

    ಅದೊಂದು ಭೀಕರ ಘಟನೆ. ಇಂಥ ಸಂದರ್ಭದಲ್ಲಿ ನಾವು ಆ ಯುವತಿಗೆ ಗೌರವ ಸಲ್ಲಿಸಬೇಕಾಗಿದೆ. ಈಗ ಸಂಭವಿಸಿದ್ದಕ್ಕಿಂತ ಕೆಟ್ಟದ್ದು ಇನ್ನೇನೂ ಸಂಭವಿಸಲು ಸಾಧ್ಯವಿಲ್ಲ. ಅಷ್ಟೊಂದು ಬರ್ಬರ ಘಟನೆ ಅದು ಎಂಬುದಾಗಿ ಶಶಿ ತರೂರ್​ ಅಭಿಪ್ರಾಯ ಪಟ್ಟಿದ್ದಾರೆ.

    ಕಾಂಗ್ರೆಸ್​ ನಾಯಕರ ಪ್ರಯಾಣದ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಪೊಲೀಸರು ಚುರುಕಾಗಿದ್ದು, ದೆಹಲಿ-ನೋಯ್ಡಾ-ಡೈರೆಕ್ಟ್​ವೇನಲ್ಲಿ ಸೂಕ್ತ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್​ ನಾಯಕರನ್ನು ತಡೆಯಲು ಬೆಳಗಿನಿಂದಲೇ ಪೊಲೀಸ್​ ಬಂದೋಬಸ್ತ್​ ಏರ್ಪಡಿಸಲಾಗಿದೆ. ಕಳೆದೆರಡು ದಿನಗಳಿಂದ ಮಾಧ್ಯಮದವರು ಹತ್ರಾಸ್​​ಗೆ ಪ್ರವೇಶಿಸದಂತೆ ಉತ್ತರ ಪ್ರದೇಶ ಸರ್ಕಾರ ನಿರ್ಬಂಧ ಹೇರಿದ್ದು, ಈಗ ಪ್ರಿಯಾಂಕಾ-ರಾಹುಲ್​ ಅಲ್ಲಿಗೆ ಭೇಟಿ ಕೊಡಲಿರುವ ಕಾರಣ ಮತ್ತಷ್ಟು ಕುತೂಹಲ ಮೂಡಿದೆ. (ಏಜೆನ್ಸೀಸ್​)

    ಹತ್ರಾಸ್​​ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾಗುವ ಪಣತೊಟ್ಟು ಸ್ವತಃ ಟಾಟಾ ಸಫಾರಿ ವಾಹನ ಚಲಾಯಿಸಿಕೊಂಡು…

    Posted by Vijayavani on Saturday, October 3, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts