More

    ಇಂದಿರಾ ಗಾಂಧಿ ಮೊಮ್ಮಗಳೇ ಸರ್ಕಾರಿ ಬಂಗ್ಲೆ ಖಾಲಿ ಮಾಡಮ್ಮಾ…

    ನವದೆಹಲಿ: ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ನವದೆಹಲಿಯಲ್ಲಿ ಕೊಡಲಾಗಿದ್ದ ಸರ್ಕಾರಿ ಬಂಗ್ಲೆಯನ್ನು ತೆರವುಗೊಳಿಸುವಂತೆ ಸೂಚಿಸಿ ಕೇಂದ್ರ ಸರ್ಕಾರ ಬುಧವಾರ ನೋಟಿಸ್​ ಜಾರಿ ಮಾಡಿದೆ. ಎಸ್​ಪಿಜಿ ಭದ್ರತೆಯನ್ನು ಹಿಂಪಡೆದಿರುವ ಕಾರಣ, ಈ ಬಂಗ್ಲೆಯನ್ನು ಆಗಸ್ಟ್​ 1ರೊಳಗೆ ಖಾಲಿ ಮಾಡುವಂತೆ ಅವರಿಗೆ ಸೂಚಿಸಲಾಗಿದೆ.

    ಪ್ರಿಯಾಂಕಾ ಅವರಿಗೆ ಒದಗಿಸಲಾಗಿದ್ದ ವೈಯಕ್ತಿಕ ಭದ್ರತೆಯನ್ನು Z+ ದರ್ಜೆಗೆ ಇಳಿಸಿ, ದೇಶಾದ್ಯಂತ ಸಿಆರ್​ಪಿಎಫ್​ ಯೋಧರ ಭದ್ರತೆಯನ್ನು ಒದಗಿಸಲು ಸರ್ಕಾರ ನಿರ್ಧರಿಸಿದೆ. ಹಾಗಾಗಿ ಅವರು 6B ಮಾದರಿಯ ಬಂಗ್ಲೆಯನ್ನು ಪಡೆದುಕೊಳ್ಳಲು ಅರ್ಹರಿಲ್ಲ. ಹಾಗಾಗಿ ಸರ್ಕಾರಿ ಬಂಗ್ಲೆಯನ್ನು ತೆರವುಗೊಳಿಸುವಂತೆ ಸೂಚಿಸಿರುವುದಾಗಿ ಕೇಂದ್ರ ವಸತಿ ಮತ್ತು ನಗರಾಡಳಿತ ವ್ಯವಹಾರಗಳ ಸಚಿವಾಲಯ ಹೇಳಿದೆ.

    ಪ್ರಿಯಾಂಕ ಗಾಂಧಿ ಅವರು ಸದ್ಯ ಲೋಧಿ ರಸ್ತೆಯಲ್ಲಿರುವ 6B ಮಾದರಿಯ ಬಂಗ್ಲೆಯನ್ನು ಹೊಂದಿದ್ದಾರೆ. ಈ ಬಂಗ್ಲೆಯನ್ನು ಆಗಸ್ಟ್​ 1ರೊಳಗೆ ತೆರವುಗೊಳಿಸದಿದ್ದರೆ ಅವರು ನಿಯಮಾನುಸಾರ ಜುಲ್ಮಾನೆ ರೂಪದಲ್ಲಿ ಬಾಡಿಗೆ ಪಾವತಿಸಬೇಕಾಗುತ್ತದೆ. 2020ರ ಜೂನ್​ 30ರವರೆಗೆ ಅವರು ಬಂಗ್ಲೆಯ ಖರ್ಚುವೆಚ್ಚ 3,46,677 ರೂ.ಗಳನ್ನು ಬಾಕಿ ಉಳಿಸಿಕೊಂಡಿದ್ದಾರೆ. ಬಂಗ್ಲೆ ತೆರವುಗೊಳಿಸುವ ಮೊದಲು ಈ ಎಲ್ಲ ಬಾಕಿಗಳನ್ನು ತೀರಿಸುವಂತೆ ಅವರಿಗೆ ಸೂಚಿಸಲಾಗಿದೆ.

    ರೋಗ ಪ್ರತಿರೋಧಕ ಶಕ್ತಿ ಕುಂದಿದವರಿಗೂ ಆಕ್ಸ್​ಫರ್ಡ್​ ಕರೊನಾ ಲಸಿಕೆ ಸುರಕ್ಷಿತ; ಫಲಿತಾಂಶ ಪ್ರಕಟಿಸಿದ ತಜ್ಞರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts