More

    ಪ್ರಿಯಾಂಕಾ ಗಾಂಧಿಯ ಮತ್ತೊಂದು ವಿಡಿಯೋ ವೈರಲ್​; ಗೆಸ್ಟ್​ ಹೌಸ್​​ನಲ್ಲಿ ಸ್ವತಃ ಪೊರಕೆ ಹಿಡಿದು ರೂಮ್​ ಗುಡಿಸಿದ ನಾಯಕಿ..!

    ಉತ್ತರಪ್ರದೇಶ: ಲಾಖಿಂಪುರ ಖೇರಿಯಲ್ಲಿನ ಘರ್ಷಣೆ ಹಾಗೂ ಸಾವಿನ ಪ್ರಕರಣ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ಭೇಟಿ ನೀಡಲು ಯತ್ನಿಸಿದ್ದ ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿಯನ್ನು ಪೊಲೀಸರು ನಿನ್ನೆ ರಾತ್ರಿ ಬಂಧಿಸಿದ್ದಾರೆ. ಈ ವೇಳೆ ಅವರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದ ವಿಡಿಯೋ ವೈರಲ್ ಆಗಿದ್ದು, ಈಗ ಅವರ ಮತ್ತೊಂದು ವಿಡಿಯೋ ವೈರಲ್​ ಆಗಿದೆ.

    ಪ್ರಿಯಾಂಕಾ ಗಾಂಧಿಯನ್ನು ವಶಕ್ಕೆ ಪಡೆದ ಬಳಿಕ ಪೊಲೀಸರು ಅವರನ್ನು ಉತ್ತರಪ್ರದೇಶದ ಪ್ರೊವಿನ್ಸಿಯಲ್​ ಆರ್ಮ್ಸ್​ ಕಾನ್​ಸ್ಟ್ಯಾಬುಲರಿ ಗೆಸ್ಟ್​ ಹೌಸ್​​ನಲ್ಲಿ ನಿನ್ನೆ ರಾತ್ರಿ ಇರಿಸಿದ್ದರು. ತಮ್ಮ ನಾಯಕಿಯನ್ನು ಹೀಗೆ ಬಂಧನದಲ್ಲಿ ಇರಿಸಿದ ಬಗ್ಗೆ ಕಾಂಗ್ರೆಸ್ ವ್ಯಾಪಕವಾಗಿ ಖಂಡಿಸಿದ್ದು, ಬಹಳಷ್ಟು ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಸೀರೆ ನೋಡಿ ಹೆಂಡತಿ ಬೈಯದಿದ್ರೆ ಸಾಕು!: ಸಿಎಂ ಬಸವರಾಜ ಬೊಮ್ಮಾಯಿ

    ಈ ನಡುವೆ ತಮ್ಮನ್ನು ಪೊಲೀಸರು ಇರಿಸಿದ್ದ ಕೋಣೆಯನ್ನು ಪ್ರಿಯಾಂಕಾ ಸ್ವತಃ ಪೊರಕೆ ಹಿಡಿದು ಸ್ವಚ್ಛಗೊಳಿಸಿದ್ದಾರೆ. ವಶದಲ್ಲಿ ಇರಿಸಲಾದ ಕೋಣೆ ಅಷ್ಟೊಂದು ಸ್ವಚ್ಛವಾಗಿರದ ಕಾರಣ ಪ್ರಿಯಾಂಕಾ ತಾವೇ ಅದನ್ನು ಸ್ವಚ್ಛಗೊಳಿಸಿಕೊಂಡಿದ್ದಾರೆ. ಈ ಸಂದರ್ಭದ ದೃಶ್ಯಾವಳಿಯ ವಿಡಿಯೋ ಇದೀಗ ವೈರಲ್​ ಆಗಿದೆ. (ಏಜೆನ್ಸೀಸ್)

    ರಾಜ್ಯದಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ; ನೇಣಿಗೆ ಕೊರಳೊಡ್ಡಿದ ಸಹಾಯಕ ಸಬ್​ ಇನ್​​ಸ್ಪೆಕ್ಟರ್!​

    ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು; ಮಾವ-ಸೊಸೆ ಸ್ಥಳದಲ್ಲೇ ಸಾವು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts