More

    ಪ್ರಿಯಾಂಕಾರ ಆತ್ಮಚರಿತ್ರೆಯಲ್ಲಿದೆ … ‘ಪ್ಲಾಸ್ಟಿಕ್ ಚೋಪ್ರಾ’ ಆದ ಗುಟ್ಟು !

    ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾರ ಆತ್ಮಚರಿತ್ರೆ ಇದೀಗ ಬಿಡುಗಡೆ ಆಗಿದೆ. ಮಿಸ್ ವರ್ಲ್ಡ್​ನಿಂದ ಬಾಲಿವುಡ್ ಸ್ಟಾರ್ ಆಗಿದ್ದು, ನಂತರ ಹಾಲಿವುಡ್​ಗೆ ಕಾಲಿಟ್ಟಿದ್ದು… ಹೀಗೆ ತಮ್ಮ ಜೀವನಯಾತ್ರೆಯನ್ನು ಚೋಪ್ರಾ ಈ ಪುಸ್ತಕದಲ್ಲಿ ಹೆಣೆದಿಟ್ಟಿದ್ದಾರೆ. ರಾಕ್ ಸ್ಟಾರ್ ನಿಕ್​ ಜೋನಸ್​ನ ಮಡದಿಯಾಗಿರುವ ಚೋಪ್ರಾ, ಇನ್ನೂ ಎಷ್ಟೋ ಮೈಲಿಗಲ್ಲುಗಳನ್ನು ಸಾಧಿಸಲು ಉತ್ಸುಕರಾಗಿದ್ದಾರೆ. ಅದಕ್ಕಾಗೇ ಅವರ ಆತ್ಮಚರಿತ್ರೆಗೆ “ಅನ್​ಫಿನಿಶ್ಡ್​” ಎಂದು ನಾಮಕರಣ ಮಾಡಿದ್ದಾರೆ.

    ಈ ಪುಸ್ತಕದಲ್ಲಿ ತಾವು ಬಾಲಿವುಡ್​ಗೆ ಅದಾಗ ತಾನೇ ಕಾಲಿಟ್ಟಾಗ ‘ಪ್ಲಾಸ್ಟಿಕ್ ಚೋಪ್ರಾ’ ಎಂದು ಕರೆಸಿಕೊಳ್ಳಬೇಕಾಗಿ ಬಂದುದರ ಹಿನ್ನೆಲೆಯನ್ನು ವಿವರಿಸಿದ್ದಾರೆ. ತಮ್ಮ ಬದಲಾದ ಮೂಗು ಖುದ್ದಾಗಿ ಆಸೆಪಟ್ಟದ್ದಲ್ಲ, ಬದಲಿಗೆ ತಪ್ಪಾಗಿ ಪರಿಣಮಿಸಿದ ಶಸ್ತ್ರಚಿಕಿತ್ಸೆಯ ಫಲಿತಾಂಶ ಎಂದು ಸತ್ಯ ಬಿಚ್ಚಿಟ್ಟಿದ್ದಾರೆ.

    ಇದನ್ನೂ ಓದಿ: ‘ಸಾರಿ ಲವ್​, ಊಟ ತಿಂದುಬಿಟ್ಟೆ!’ ಡೆಲಿವರಿ ಬಾಯ್​ ಕಳುಹಿಸಿದ್ದ ಮೆಸೇಜ್​ ನೋಡಿ ಶಾಕ್​ ಆದ ಯುವತಿ!

    ಸುಮಾರು ಇಪ್ಪತ್ತು ವರ್ಷಗಳ ಹಿಂದೆ.. 2001 ರಲ್ಲಿ… ಪ್ರಿಯಾಂಕಾ ಬಾಲಿವುಡ್​ ಪ್ರವೇಶಿಸಿದ್ದರು. ಅವರಿಗೆ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡು, ಮೂಗಿನ ಹೊಳ್ಳೆಯಲ್ಲಿ ಒಂದು ಪಾಲಿಪ್ (ಸಣ್ಣ ಪ್ರಮಾಣದ ಗೆಡ್ಡೆ) ಬೆಳೆದಿರುವುದು ಗೊತ್ತಾಯಿತು. ಇದನ್ನು ಸಣ್ಣ ಶಸ್ತ್ರಚಿಕಿತ್ಸೆಯ ಮೂಲಕ ತೆಗೆಸಿಕೊಳ್ಳಲು ಮುಂದಾದರು. “ಪಾಲಿಪ್​ಅನ್ನು ಶೇವ್ ಮಾಡುವಾಗ, ವೈದ್ಯರು ನನ್ನ ನೋಸ್ ಬ್ರಿಡ್ಜ್​ಅನ್ನೂ ತಪ್ಪಾಗಿ ಶೇವ್ ಮಾಡಿದರು. ಅದರಿಂದಾಗಿ ಅದು ಕೆಳಗೆ ಜಾರಿತ್ತು. ಬ್ಯಾಂಡೇಜ್ ತೆಗೆದು ನನ್ನ ಮೂಗಿನ ಸ್ಥಿತಿ ಬಯಲಾದಾಗ ನಾನು ಮತ್ತು ನನ್ನ ಅಮ್ಮ ಗಾಬರಿಯಾದೆವು. ನನ್ನ ಒರಿಜಿನಲ್ ಮೂಗು ಮಾಯವಾಗಿತ್ತು. ನನ್ನ ಮುಖ ಸಂಪೂರ್ಣವಾಗಿ ಬೇರೆಯೇ ಆಗಿ ಕಾಣುತ್ತಿತ್ತು. ನಾನು ನಾನಾಗಿರಲಿಲ್ಲ. ನನ್ನ ಸೆಲ್ಫ್ ಎಸ್ಟೀಮ್ ಈ ಹೊಡೆತದಿಂದ ಚೇತರಿಸಿಕೊಳ್ಳುತ್ತದೆ ಅಂತ ನಾನಾಗ ಭಾವಿಸಿರಲಿಲ್ಲ” ಎಂದು ಚೋಪ್ರಾ ಬರೆದಿದ್ದಾರೆ.

    ಈ ‘ಬಾಚ್​-ಅಪ್​ ಸರ್ಜರಿ’ಯಿಂದಾಗಿ ಮಾಧ್ಯಮದವರು ತಮ್ಮನ್ನು ಪ್ಲಾಸ್ಟಿಕ್ ಚೋಪ್ರಾ ಎಂದು ಕರೆದರು. ಆದರೆ, ತಾವು ಆಗ ಪ್ರತಿಕ್ರಿಯಿಸದ ನಿರ್ಧಾರ ಕೈಗೊಂಡಿದ್ದಾಗಿ ಈಗ ಹೇಳಿಕೊಂಡಿದ್ದಾರೆ. “ನಾನು ನನ್ನ ಬದುಕಿನಲ್ಲಿ ಒಂದು ಗೆರೆ ಎಳೆಯಬೇಕೆಂದು ನಿರ್ಧಾರ ಮಾಡಿದೆ. ನಾನು ಪಬ್ಲಿಕ್ ಪರ್ಸನ್​ ಆಗಿರುವ ಕಾರಣಕ್ಕೆ ನನ್ನ ಬದುಕಿನ ಎಲ್ಲ ವಿಷಯಗಳೂ ಪಬ್ಲಿಕ್ ಆಗಬೇಕೆಂದಿಲ್ಲ. ಏನನ್ನು ಯಾವಾಗ ಶೇರ್ ಮಾಡಬೇಕೆಂಬುದನ್ನು ನಾನು ನಿರ್ಧರಿಸುತ್ತೇನೆ” ಎಂದಿರುವ ಚೋಪ್ರಾ, “ಸ್ವಲ್ಪ ವರ್ಷ ಕನ್ನಡಿ ನೋಡಿದಾಗ ಯಾರೋ ಅಪರಿಚಿತರನ್ನು ನೋಡಿದ ಹಾಗನಿಸುತ್ತಿತ್ತು. ಆದರೆ ಈಗ ಈ ಮುಖಕ್ಕೆ ನಾನು ಅಕಸ್ಟಮ್ ಆಗಿದ್ದೇನೆ. ಸ್ವಲ್ಪ ಭಿನ್ನವಾಗಿ ಕಾಣುವ ನನ್ನನ್ನು ನಾನೇ ಒಪ್ಪಿಕೊಂಡಿದ್ದೇನೆ” ಎಂದು ಬರೆದಿದ್ದಾರೆ.(ಏಜೆನ್ಸೀಸ್)

    VIDEO | “ವೆಲ್​ಕಮ್​ ಟು ದ ಕ್ಲಬ್, ಅಮೆರಿಕ…!”

    ಅಪ್ಪ ಹಾಕಿದ ಲವ್​ ಜಿಹಾದ್​​ ಕೇಸ್​- ಪುತ್ರಿ ಎಂದಳು ನಮ್ದು ಪ್ಯೂರ್​ ಲವ್​: ಹೈಕೋರ್ಟ್​ ಏನು ಹೇಳ್ತು ನೋಡಿ…

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts