More

    ಸುರೇಶ್ ರೈನಾ ಭಾರತ ಪರ ಪದಾರ್ಪಣೆ ಮಾಡಿದಾಗ 5 ವರ್ಷದ ಬಾಲಕ, ಈಗ ಅವರಿಗೆ ನಾಯಕ!

    ಬೆಂಗಳೂರು: ಎಡಗೈ ಬ್ಯಾಟ್ಸ್‌ಮನ್ ಸುರೇಶ್ ರೈನಾ ಅವರು 2005ರಲ್ಲಿ ಭಾರತ ತಂಡದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟಾಗ 5 ವರ್ಷದ ಬಾಲಕನಾಗಿದ್ದ ಕ್ರಿಕೆಟಿಗ ಈಗ ರೈನಾ ಅವರನ್ನು ಒಳಗೊಂಡ ಉತ್ತರ ಪ್ರದೇಶ ತಂಡಕ್ಕೆ ನಾಯಕರಾಗಿ ನೇಮಕಗೊಂಡಿದ್ದಾರೆ. ಅವರೇ ಪ್ರಿಯಂ ಗಾರ್ಗ್.

    ಕಳೆದ ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ತಂಡದ ಪರ ಆಡಿದ್ದ 20 ವರ್ಷದ ಬ್ಯಾಟ್ಸ್‌ಮನ್ ಪ್ರಿಯಂ ಗಾರ್ಗ್, ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ರಾಜ್ಯ ತಂಡವನ್ನು ಮುನ್ನಡೆಸುವ ಅವಕಾಶ ಪಡೆದುಕೊಂಡಿದ್ದಾರೆ. ಪ್ರಿಯಂ ಗಾರ್ಗ್ ಈ ಹಿಂದೆ 19 ವಯೋಮಿತಿ ವಿಶ್ವಕಪ್‌ನಲ್ಲಿ ಭಾರತ ತಂಡವನ್ನೂ ಮುನ್ನಡೆಸಿದ ಅನುಭವ ಹೊಂದಿದ್ದಾರೆ.

    ಇದನ್ನೂ ಓದಿ: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಕರ್ನಾಟಕದ ಖ್ಯಾತ ಹೃದಯ ತಜ್ಞರಿಂದ ಚಿಕಿತ್ಸೆ

    34 ವರ್ಷದ ಸುರೇಶ್ ರೈನಾ ಕಳೆದ ಆಗಸ್ಟ್‌ನಲ್ಲಿ ಎಂಎಸ್ ಧೋನಿ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರೂ, ಈ ಬಾರಿ ದೇಶೀಯ ಕ್ರಿಕೆಟ್ ಋತುವಿನಲ್ಲಿ ಆಡಲಿದ್ದಾರೆ. ಈ ಮೂಲಕ ಮುಂಬರುವ ಐಪಿಎಲ್‌ನಲ್ಲಿ ಮತ್ತೆ ಚೆನ್ನೈ ಸೂಪರ್‌ಕಿಂಗ್ಸ್ ತಂಡದ ಪರ ಆಡಲು ಸಿದ್ಧತೆ ನಡೆಸಲಿದ್ದಾರೆ.

    ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಗೆ ಹಾಲಿ ಚಾಂಪಿಯನ್ ಕರ್ನಾಟಕ ತಂಡವನ್ನು ಒಳಗೊಂಡ ಎ ಗುಂಪಿನಲ್ಲಿರುವ ಉತ್ತರ ಪ್ರದೇಶ ತಂಡ ಬೆಂಗಳೂರು ಹೊರವಲಯದ ಆಲೂರಿನಲ್ಲಿ ಪಂದ್ಯಗಳನ್ನು ಆಡಲಿದೆ.

    ಉತ್ತರ ಪ್ರದೇಶ ತಂಡದಲ್ಲಿ ಒಟ್ಟು 7 ಐಪಿಎಲ್ ತಾರೆಯರು ಸ್ಥಾನ ಪಡೆದಿದ್ದಾರೆ. ಅವರೆಂದರೆ ಸುರೇಶ್ ರೈನಾ, ಕರ್ಣ್ ಶರ್ಮ (ಸಿಎಸ್‌ಕೆ), ಪ್ರಿಯಂ ಗಾರ್ಗ್, ಭುವನೇಶ್ವರ್ (ಸನ್‌ರೈಸರ್ಸ್‌), ಅಂಕಿತ್ ರಜಪೂತ್ (ರಾಜಸ್ಥಾನ ರಾಯಲ್ಸ್), ಶಿವಂ ಮಾವಿ, ರಿಂಕು ಸಿಂಗ್ (ಕೆಕೆಆರ್).

    ವಿದ್ಯುತ್ ಉತ್ಪಾದಿಸುತ್ತಿರುವ ಕರ್ನಾಟಕದ ರೈತನಿಗೆ ವಿವಿಎಸ್ ಲಕ್ಷ್ಮಣ್ ಮೆಚ್ಚುಗೆ

    ಮಗುವಿನ ಆಟಿಕೆ ಖರೀದಿಗಾಗಿ ಬಯೋ-ಬಬಲ್ ಬ್ರೇಕ್ ಮಾಡಿದ್ದರೇ ಕೊಹ್ಲಿ, ಪಾಂಡ್ಯ?

    ಬಯೋ-ಬಬಲ್ ಬ್ರೇಕ್ ಬೆನ್ನಲ್ಲೇ ಟೀಮ್ ಇಂಡಿಯಾವನ್ನು ಕಾಡುತ್ತಿದೆ ಬೀಫ್​ ವಿವಾದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts