More

    ಕರೊನಾ ವೈರಸ್​ ಸೋಂಕು ಪತ್ತೆಗೆ ಖಾಸಗಿ ಪ್ರಯೋಗಾಲಯಗಳು ಶುಲ್ಕ ವಿಧಿಸಬಾರದು: ಸುಪ್ರೀಂ ಕೋರ್ಟ್​ ಸೂಚನೆ

    ನವದೆಹಲಿ: ಕರೊನಾ ವೈರಸ್​ ಸೋಂಕು ಪತ್ತೆಗೆ ಖಾಸಗಿ ಪ್ರಯೋಗಾಲಯಗಳು ಶುಲ್ಕ ವಿಧಿಸಬಾರದು ಎಂದು ಸುಪ್ರೀಂ ಕೊರ್ಟ್​ ಸೂಚಿಸಿದೆ.

    ದೇಶ ಕರೊನಾ ಸೋಂಕಿನಿಂದ ಬಳಲುತ್ತಿರುವ ವೇಳೆ ಖಾಸಗಿ ಪ್ರಯೋಗಾಲಯಗಳು ಪರೀಕ್ಷೆಗೆ ಅಧಿಕ ಶುಲ್ಕ ಪಡೆಯುವ ಅಪಾಯ ಇದೆ. ಹೀಗಾಗಿ ಸರ್ಕಾರ ಉಚಿತವಾಗಿ ಪರೀಕ್ಷೆ ನಡೆಸುವಂತೆ ನಿಯಮ ರೂಪಿಸಬೇಕು. ಖಾಸಗಿ ಪ್ರಯೋಗಾಲಯಗಳು ನಡೆಸಿದ ಪರೀಕ್ಷೆಗೆ ಸರ್ಕಾರವೇ ಹಣ ತುಂಬೇಕು ಎಂದು ಕೋರ್ಟ್​ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

    ಕರೊನಾ ವೈರಸ್​ ಸೋಂಕು ಪತ್ತೆಗೆ ನಡೆಸುವ ಪರೀಕ್ಷೆಗೆ ಯಾವುದೇ ಶುಲ್ಕ ವಿಧಿಸದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಬೇಕು ಎಂದು ವಕೀಲ ಶಶಾಂಕ್​ ಡಿಯೊ ಸುಧಿ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

    ಅಶೋಕ್​ ಭೂಷಣ್​ ಹಾಗೂ ರವೀಂದ್ರ ಭಟ್​ ಅವರನ್ನು ಒಳಗೊಂಡ ಪೀಠ ಅರ್ಜಿ ವಿಚಾರಣೆ ನಡೆಸಿತು.

    ರಾಷ್ಟ್ರದಲ್ಲಿ 118 ಪ್ರಯೋಗಾಲಯಗಳನ್ನು ಕೇಂದ್ರ ಸರ್ಕಾರ ಸ್ಥಾಪಿಸಿದೆ. ಇಲ್ಲಿ ಪ್ರತಿ ದಿನ 15 ಸಾವಿರ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಪ್ರಯೋಗಾಲಯವನ್ನು ಹೆಚ್ಚಿಸುವ ದೃಷ್ಟಿಯಿಂದ 47 ಖಾಸಗಿ ಪ್ರಯೋಗಾಲಯಗಳಿಗೆ ಸರ್ಕಾರ ಅನುಮತಿ ನೀಡಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್​ಗೆ ಮಾಹಿತಿ ನೀಡಿದೆ.

    ಕರೊನಾ ವೈರಸ್​ ಸೋಂಕು ಪತ್ತೆಗೆ ಖಾಸಗಿ ಪ್ರಯೋಗಾಲಯಗಳು 4,500 ರೂಪಾಯಿ ದರ ವಿಧಿಸುತ್ತಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಪರೀಕ್ಷೆ ನಡೆಸಿದರೂ ಕೆಲವರಿಗೆ ಈ ಸೌಲಭ್ಯ ಸಿಗದೆ ಖಾಸಗಿ ಪ್ರಯೋಗಾಲಯಗಳತ್ತ ಮುಖ ಮಾಡುತ್ತಿದ್ದಾರೆ. ಲಾಕ್​ಡೌನ್​ನಿಂದ ಜನರ ಆರ್ಥಿಕ ಸ್ಥಿತಿ ಕುಸಿದಿದೆ. ಇಂತ ಸಮಯದಲ್ಲಿ ಹಣ ನೀಡಿ ಪರೀಕ್ಷೆ ಮಾಡಿಸಿಕೊಳ್ಳಲು ತೊಂದರೆಯಾಗುತ್ತದೆ ಎಂದು ವಕೀಲರು ವಾದಿಸಿದ್ದರು. (ಏಜೆನ್ಸೀಸ್​)

    ಪಡಿತರ ಚೀಟಿ ಇಲ್ಲದಿದ್ದರೂ ಸಾರ್ವಜನಿಕರಿಗೆ ಪಡಿತರ ನೀಡುವಂತೆ ಸಿಎಂ ಸೂಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts