More

    ಕೈದಿಗಳು ಆತ್ಮಹತ್ಯೆಗೆ ಯತ್ನ, ತಡವಾಗಿ ಕೇಸ್ ಕೊಟ್ಟ ಜೈಲಾಧಿಕಾರಿಗಳು..?

    ಬೆಂಗಳೂರು : ಪರಪ್ಪನ ಅಗ್ರಹಾರ ಜೈಲಿನಲ್ಲಿ ಇಬ್ಬರು ಕೈದಿಗಳು ಸ್ನಾನಗೃಹದಲ್ಲಿ ಆತ್ಮಹತ್ಯೆಗೆ ಯತ್ನಿಸಿರುವ ಬಗ್ಗೆ ತಡವಾಗಿ ಪ್ರಕರಣ ದಾಖಲಾಗಿದ್ದು, ಅನುಮಾನಕ್ಕೆ ಎಡೆಮಾಡಿಕೊಟ್ಟಿವೆ.

    ಜೂ. 29ರ ಸಂಜೆ ವಿಚಾರಣಾಧೀನ ಕೈದಿ ಎಸ್. ಮಧುಸೂದನ್, ಸ್ನಾನಗೃಹದಲ್ಲಿ ನೈಟ್ ಪ್ಯಾಂಟ್ ದಾರದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಕರ್ತವ್ಯನಿರತ ಮುಖ್ಯ ವೀಕ್ಷಕ ಯು.ಡಿ. ಮಣಿಕಂಠ ಮತ್ತು ಸಜಾ ಕೈದಿಗಳು ನೋಡಿಕೊಂಡು ನೇಣು ಕುಣಿಕೆಯಿಂದ ರಕ್ಷಣೆ ಮಾಡಿ ಮಧುಸೂದನ್‌ನ್ನು ಜೈಲು ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ವಿಕ್ಟೋರಿಯಾಗೆ ಸ್ಥಳಾಂತರ ಮಾಡಿದ್ದಾರೆ.

    20 ದಿನಗಳ ಬಳಿಕ ಜು. 18ಕ್ಕೆ ಪ್ರಕರಣ ದಾಖಲಿಸಲಾಗಿದೆ. ಜು.11ರ ರಾತ್ರಿ ವಿಚಾರಣಾಧೀನ ಕೈದಿ ಅಲೋಕ ರಂಜನ್ ಸುಂಡಿ ಎಂಬಾತ ಸ್ನಾಹಗೃಹದಲ್ಲಿ ಪ್ಯಾಂಟ್ ದಾರದಲ್ಲಿ ನೇಣು ಬಿಗಿದುಕೊಂಡಿದ್ದ.

    ಕರ್ತವ್ಯನಿರತ ಸಿಬ್ಬಂದಿ ನೋಡಿಕೊಂಡು ರಕ್ಷಣೆ ಮಾಡಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಜು. 18ಕ್ಕೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts