More

    ‘ಸಂಸಿದ್ಧಿ ಅಕಾಡೆಮಿ’ಯಿಂದ ಕೌಶಲಾಭಿವೃದ್ಧಿಗೆ ಆದ್ಯತೆ: ಡಾ.ನಾರಾಯಣ ಕಾಯರ್‌ಕಟ್ಟೆ

    ಗುರುಪುರ: ಎಲ್ಲ ಕಾಲದಲ್ಲೂ ಹೊಸಹೊಸ ಐಡಿಯಾಗಳಿಗೆ ಸಾಕಷ್ಟು ಬೇಡಿಕೆ ಇರುತ್ತದೆ. ಕೌಶಲಾಭಿವೃದ್ಧಿಗೆ ಆದ್ಯತೆ ನೀಡುವ ಇಂತಹ ಶಿಕ್ಷಣ ಸಂಸ್ಥೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಸ್ವ-ಸಾಧನೆಯ(ಸ್ವ-ಉದ್ಯೋಗ) ಆಸಕ್ತಿ ಹುಟ್ಟಿಸಲು ಸಾಧ್ಯವಾಗುತ್ತದೆ. ಗ್ರಾಮೀಣ ಭಾಗದಲ್ಲಿ ಹುಟ್ಟಿಕೊಂಡ ಈ ಸಂಸ್ಥೆ ನೂರಾರು ವಿದ್ಯಾರ್ಥಿಗಳಿಗೆ ಆಶಾಕಿರಣವಾಗಲಿ ಎಂದು ಮಂಗಳೂರಿನ ತೃಷಾ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್‌ನ ಶೈಕ್ಷಣಿಕ ಸಲಹೆಗಾರ ಡಾ.ನಾರಾಯಣ ಕಾಯರ್‌ಕಟ್ಟೆ ಹೇಳಿದರು.

    ನೀರುಮಾರ್ಗ ಜಂಕ್ಷನ್‌ನಲ್ಲಿ ಹೊಸದಾಗಿ ಸ್ಥಾಪಿಸಲಾದ ಕಂಪ್ಯೂಟರ್ ತರಬೇತಿ, ಉದ್ಯಮಶೀಲತೆ ಮತ್ತು ಕೌಶಲಾಭಿವೃದ್ಧಿ ಶಿಕ್ಷಣ ನೀಡುವ ಸಂಸ್ಥೆ ‘ಸಂಸಿದ್ಧಿ ಅಕಾಡೆಮಿ’ಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.

    ಮಂಗಳೂರಿನ ಸ್ವಸ್ತಿಕ್ ನ್ಯಾಶನಲ್ ಬಿಜಿನೆಸ್ ಸ್ಕೂಲ್‌ನ ಅಧ್ಯಕ್ಷ ಡಾ.ರಾಘವೇಂದ್ರ ಹೊಳ್ಳ ಎನ್. ಮಾತನಾಡಿ, ಶಿಕ್ಷಣ ಮತ್ತು ಕಂಪ್ಯೂಟರ್ ಉದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಅನುಭವವುಳ್ಳ ಕುಟುಂಬದಿಂದ ಇಲ್ಲೊಂದು ಕಂಪ್ಯೂಟರ್ ಶಿಕ್ಷಣ ಸಂಸ್ಥೆ ತೆರೆದುಕೊಂಡಿದೆ. ಆರಂಭದಲ್ಲಿ ಏನೇ ಕಷ್ಟಗಳು ಬಂದರೂ, ಎದೆಗುಂದದೆ ಮುಂದಡಿ ಇಟ್ಟಲ್ಲಿ ಭವಿಷ್ಯದಲ್ಲಿ ಈ ಸಂಸ್ಥೆ ಒಂದು ಕಾಲೇಜು ಸಂಸ್ಥೆಯಾಗಿ ಬೆಳೆಯುವುದರಲ್ಲಿ ಸಂದೇಹವಿಲ್ಲ ಎಂದರು.

    ಬ್ಯಾಂಕ್ ಅಧಿಕಾರಿ ಬಿನಿತಾ ಶರ್ಮ ಕಂಪ್ಯೂಟರ್ ಲ್ಯಾಬ್ ಉದ್ಘಾಟಿಸಿದರು. ಸಂಸಿದ್ಧಿ ಅಕಾಡೆಮಿ ನಿರ್ದೇಶಕಿ ದೀಪಲಕ್ಷ್ಮೀ ಪ್ರಸ್ತಾವಿಸಿದರು. ಆದಾಯ ತೆರಿಗೆ ನಿವೃತ್ತ ಅಧಿಕಾರಿ ಪಿ.ವಾಸುದೇವ ಭಟ್, ಉದ್ಯಮಿ ರಾಬರ್ಟ್ ಲ್ಯಾನ್ಸಿ ಪಾಯಸ್, ಕಾರ್ಪೊರೇಶನ್ ಬ್ಯಾಂಕ್‌ನ ನಿವೃತ್ತ ಅಧಿಕಾರಿ ಯು.ಸುರೇಶ್ ಶೆಣೈ ನೂತನ ಸಂಸ್ಥೆಗೆ ಶುಭ ಹಾರೈಸಿದರು. ರೂಪಲಕ್ಷ್ಮೀ ಪೆದಮಲೆ ಮತ್ತು ಸಂಹಿತಾ ಭಟ್ ಪ್ರಾರ್ಥಿಸಿದರು. ಹೀರಾ ವಿ.ಭಟ್ ಹಾಗೂ ಅಕಾಡೆಮಿ ಸಿಬ್ಬಂದಿ ಉಪಸ್ಥಿತರಿದ್ದರು. ಖಾಸಗಿ ಚಾನೆಲ್‌ನ ನಿರೂಪಕಿ ಡಾ.ಪ್ರಿಯಾ ಆರ್. ಸ್ವಾಗತಿಸಿ ನಿರೂಪಿಸಿದರು.


    ಉದ್ಯಮಶೀಲತೆ ತರಬೇತಿ

    ನೂತನ ಶಿಕ್ಷಣ ಸಂಸ್ಥೆಯಲ್ಲಿ ಕಂಪ್ಯೂಟರ್‌ಗೆ ಸಂಬಂಧಿಸಿದ ಅತ್ಯಾಧುನಿಕ ಕೋರ್ಸ್‌ಗಳು ಇವೆ. ಹಣಕಾಸು, ಮಾರುಕಟ್ಟೆ, ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಇನ್ನಿತರ ಉದ್ಯಮಶೀಲತೆ ಬಗ್ಗೆ ತರಬೇತಿ ಮತ್ತು ಕೌಶಲಾಭಿವೃದ್ಧಿಗೆ ಸಂಬಂಧಿಸಿದ ಫಾರೆಕ್ಸ್ ಟ್ರೇಡಿಂಗ್, ಸರ್ವೇ ತಂತ್ರಜ್ಞಾನ ತರಬೇತಿ ಲಭ್ಯವಿದೆ. ಜತೆಗೆ ಸಿಬಿಎಸ್‌ಇ ಮತ್ತು ಕರ್ನಾಟಕ ರಾಜ್ಯ ಮಂಡಳಿಯ 5ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಕೋಚಿಂಗ್ ಕ್ಲಾಸ್ ಮತ್ತು ಸಿವಿ ಲರ್ನಿಂಗ್ ಕಾನ್‌ಸೆಪ್ಟ್ ಅಳವಡಿಸಲಾಗಿದೆ ಎಂದು ಸಂಸ್ಥೆಯ ನಿರ್ದೇಶಕಿ ದೀಪಲಕ್ಷ್ಮೀತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts