More

    ಶಿಕ್ಷಣ, ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ- ಶಾಸಕ ಡಾ.ಜಾಧವ್​

    ಚಿಂಚೋಳಿ: ಉತ್ತಮ ಆರೋಗ್ಯ ಮತ್ತು ಗುಣಮಟ್ಟದ ಶಿಕ್ಷಣದಿಂದ ಮಾತ್ರ ಸದೃಢ ರಾಷ್ಟç ಕಟ್ಟಲು ಸಾಧ್ಯ. ಈ ನಿಟ್ಟಿನಲ್ಲಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಶಾಸಕ ಡಾ.ಅವಿನಾಶ ಜಾಧವ್ ಹೇಳಿದರು.

    ಬಂಜಾರ ಭವನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರ ಸಂಘದ ಸಹಯೋಗದಡಿ ಶನಿವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನ, ನಿವೃತ್ತ ಮತ್ತು ಉತ್ತಮ ಶಿಕ್ಷಕರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಕರ ಕೊರತೆ ಮಧ್ಯೆಯೂ ಕ್ಷೇತ್ರದ ಶಿಕ್ಷಣ ವಲಯ ಪ್ರಗತಿಯತ್ತ ಸಾಗುತ್ತಿದೆ. ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಬಣ್ಣಿಸಿದರು.

    ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತ ಬಿ.ರಾಠೋಡ್ ಮಾತನಾಡಿ, ಕ್ಷೇತ್ರದಲ್ಲಿ ಶಿಕ್ಷಕರ ಕೊರತೆ ನೀಗಿಸಲು ಅತಿಥಿ ಶಿಕ್ಷಕರ ನೇಮಕ ಮಾಡಲಾಗಿದೆ. ವಲಸೆ ಪ್ರಮಾಣ ಹೆಚ್ಚಾಗಿದ್ದು, ಶಾಲೆಯಲ್ಲಿ ಹಾಜರಿ ಕುಂಠಿತವಾಗುತ್ತಿದೆ. ವರ್ಷಪೂರ್ತಿ ವಿವಿಧ ಕಾರ್ಯಾಗಾರ ಆಯೋಜಿಸುವ ಮೂಲಕ ಮಕ್ಕಳಲ್ಲಿ ಕಲಿಕಾ ಸಾಮಾರ್ಥ್ಯ ಹೆಚ್ಚಿಸಲು ಶ್ರಮಿಸಲಾಗುತ್ತಿದೆ. ಕುಂಚಾವರA ಭಾಗದಲ್ಲಿ ತೆಲುಗು ಪ್ರಭಾವ ಇದ್ದುದರಿಂದ ಶಾಲೆಗಳಲ್ಲಿ ಅತಿಥಿ ಶಿಕ್ಷಕರು ಸಿಗದಂತಾಗಿದೆ. ಪರ್ಯಾಯ ವ್ಯವಸ್ಥೆ ಮಾಡುವುದಾಗಿ ಹೇಳಿದರು.

    ಯಾದಗಿರಿ, ರಾಯಚೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಪಿ.ವೇಣಗೋಪಾಲ ಮಾತನಾಡಿದರು. ಪುರಸಭೆ ಮುಖ್ಯಾಧಿಕಾರಿ ಕಾಶೀನಾಥ ಧನ್ನಿ, ಪ್ರಮುಖರಾದ ನಾಗಶೆಟ್ಟಿ ಭದ್ರಶೆಟ್ಟಿ, ದೇವಿಂದ್ರಪ್ಪ ಹೊಳ್ಕರ್, ಖುರ್ಷಿದ್‌ಮಿಯಾ, ಸುರೇಶ ಕೊರವಿ, ಮಾರುತಿ ಪತಂಗೆ, ಶಾಮರಾವ ಮೋಘಾ, ಮಾಣಿಕಪ್ಪ ಪೋಲಾ, ಮಕ್ಸೂದ್ ಅಲಿ, ನಾಗಶೆಟ್ಟಿ ಎಂ., ರಾಜಶೇಖರ ಮುಸ್ತಾರಿ, ಜಯಶ್ರೀ, ಅಶೋಕ ಹೂವಿನಬಾವಿ, ಜಯಪ್ಪ ಚಾಪಲ್, ನಾಗೇಂದ್ರಪ್ಪ, ಗೋಪಾಲರಾವ ಕಟ್ಟಿಮನಿ, ಕೆ.ಎಂ. ಬಾರಿ, ಪ್ರೇಮಸಿಂಗ್ ಜಾಧವ್, ರಾಜು ಪವಾರ್, ಅಮರ ಲೊಡ್ಡನೂರ, ಹಣಮಂತ ಬಂಕಲಗಿ, ಶ್ರೀಶೈಲ್ ನಾಗಾವಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts