More

    ತೀರ್ಥಹಳ್ಳಿ ಬಿಜೆಪಿ ಘಟಕದಲ್ಲಿ ಎಲ್ಲ ಸಮುದಾಯಗಳಿಗೆ ಆದ್ಯತೆ

    ತೀರ್ಥಹಳ್ಳಿ: ಸಾಮಾಜಿಕ ನ್ಯಾಯದ ಆಧಾರದಲ್ಲಿ ತೀರ್ಥಹಳ್ಳಿ ಮಂಡಲ ಬಿಜೆಪಿಗೆ ನೂತನ ಸಮಿತಿಯನ್ನು ರಚಿಸಲಾಗಿದ್ದು, ಎಲ್ಲ ಸಮುದಾಯಗಳಿಗೂ ಆದ್ಯತೆಯನ್ನು ನೀಡಲಾಗಿದೆ ಎಂದು ಮಂಡಲದ ನೂತನ ಅಧ್ಯಕ್ಷ ಹೆದ್ದೂರು ನವೀನ್ ಹೇಳಿದರು.

    ಉಪಾಧ್ಯಕ್ಷರನ್ನಾಗಿ ಕವಿರಾಜ್ ಬೇಗುವಳ್ಳಿ, ನಂಬಳ ಮುರುಳಿ, ಗೀತಾಶೆಟ್ಟಿ, ಸುಮಾ ರಾಮಚಂದ್ರ, ಭಾರತಿ ಸುರೇಶ್, ಹಸಿರುಮನೆ ನಂದನ್, ಕಾರ್ಯದರ್ಶಿಯಾಗಿ ರಕ್ಷಿತ್ ಮೇಗರವಳ್ಳಿ, ಮೋಹನ್ ಕುಮಾರ್, ಟಿ.ಮಂಜುನಾಥ್, ಕಾಸರವಳ್ಳಿ ಶ್ರೀನಿವಾಸ್, ಪದ್ಮಾ ನವೀನ್, ಸುರೇಶ್ ನಾಯ್ಕ, ಮಧುರಾಜ ಹೆಗ್ಡೆ, ಕವಿತಾ ರಮೇಶ್ ಅವರನ್ನು ಆಯ್ಕೆ ಮಾಡಲಾಗಿದೆ. ಮಂಜುನಾಥ ಜೆ ಶೆಟ್ಟಿ ಖಜಾಂಚಿಯಾಗಿ ಚುನಾಯಿತರಾಗಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಮಹಿಳಾ ಮೋರ್ಚಾದ ಅಧ್ಯಕ್ಷರಾಗಿ ಯಶೋದಾ ಮಂಜುನಾಥ್, ಎಸ್‌ಸಿ ಮೋರ್ಚಾಗೆ ಪಡುವಳ್ಳಿ ಗಿರೀಶ್, ರೈತ ಮೋರ್ಚಾಗೆ ಬಿ.ಆರ್.ಮೋಹನ್, ಹಿಂದುಳಿದ ವರ್ಗಗಳ ಮೋರ್ಚಾಗೆ ರಾಘವೇಂದ್ರ ಆಚಾರ್ಯ, ಎಸ್‌ಟಿ ಮೋರ್ಚಾ ಅಧ್ಯಕ್ಷರಾಗಿ ರಮೇಶ್ ಹೊದಲ, ಯುವಮೋರ್ಚಾ ಅಧ್ಯಕ್ಷರಾಗಿ ಸಂತೋಷ್ ದೇವಾಡಿಗ ಅವರನ್ನು ಆಯ್ಕೆ ಮಾಡಲಾಗಿದೆ. ಅಲ್ಪಸಂಖ್ಯಾತರ ಮೋರ್ಚಾದ ಪದಾಧಿಕಾರಿಗಳ ಆಯ್ಕೆ ಆಗಬೇಕಿದೆ ಎಂದರು.
    ಆರಗ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಚಂದ್ರಶೇಖರ್ ಮರಹಳ್ಳಿ, ಕುಪ್ಪಳಿಗೆ ವಾಸುದೇವ ಹಾರೋಗುಳಿಗೆ, ಮಂಡಗದ್ದೆಗೆ ತಳಲೆ ಪ್ರಸಾದ್ ಶೆಟ್ಟಿ, ಮೇಗರವಳ್ಳಿಗೆ ಹೊಸಳ್ಳಿ ಸುಧಾಕರ್, ತೀರ್ಥಹಳ್ಳಿಗೆ ಸೊಪ್ಪುಗುಡ್ಡೆ ರಾಘವೇಂದ್ರ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.
    ಪ್ರಮುಖರಾದ ಕೆ.ನಾಗರಾಜ ಶೆಟ್ಟಿ, ಅಶೋಕಮೂರ್ತಿ, ಬೇಗುವಳ್ಳಿ ಕವಿರಾಜ್, ಮಧುರಾಜ ಹೆಗ್ಡೆ, ಪ್ರಶಾಂತ್ ಕುಕ್ಕೆ, ಮೋಹನ್ ಕುಮಾರ್, ರಕ್ಷಿತ್ ಮೇಗರವಳ್ಳಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts