More

    ಸಮಾಜಕ್ಕೆ ಹಳಕಟ್ಟಿ ಕೊಡುಗೆ ಅಪಾರ

    ವಿಜಯಪುರ: ವಚನಪಿತಾಮಹ ಡಾ. ಫ.ಗು. ಹಳಕಟ್ಟಿ ವ್ಯಕ್ತಿತ್ವ ಅಗಾಧವಾದದ್ದು, ಅವರು ಸಮಾಜಕ್ಕೆ ನೀಡಿದ ಕೊಡುಗೆ ಅನನ್ಯವಾಗಿದೆ ಎಂದು ಸಿದ್ದೇಶ್ವರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಪ್ರಕಾಶ ಬಗಲಿ ಹೇಳಿದರು.

    ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಡಾ. ಫ.ಗು. ಹಳಕಟ್ಟಿಯವರ 143ನೇ ಜನ್ಮದಿನಾಚರಣೆ ಅಂಗವಾಗಿ ಪ್ರಿಂಟಿಂಗ್ ಪ್ರೆಸ್ ಮತ್ತು ವರ್ಕಸ್ ಅಶೋಸಿಯೇಶನ್ ವತಿಯಿಂದ ಇತ್ತೀಚಿಗೆ ಹಮ್ಮಿಕೊಂಡಿದ್ದ ಮುದ್ರಣ ಸಾಧಕರಿಗೆ ಮುದ್ರೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

    ಡಾ. ಫ.ಗು. ಹಳಕಟ್ಟಿಯವರ ಆರ್ಶಿವಾದದಿಂದ ಸಿದ್ದೇಶ್ವರ ಬ್ಯಾಂಕ್ ಬೆಳೆಯಲು ಕಾರಣವಾಗಿದೆ. ಫ.ಗು. ಹಳಕಟ್ಟಿ ಸೈಕಲ್‌ನಲ್ಲಿ ಸುತ್ತಾಡಿ ಬಿಎಲ್‌ಡಿಇ ಸೇರಿದಂತೆ ಅನೇಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಅವರ ಪರಿಶ್ರಮ ಅಪಾರವಾದದ್ದು ಎಂದರು.

    ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ಮಾತನಾಡಿ, ವಚನ ಪಿತಾಮಹ ಜನ್ಮದಿನವನ್ನು ವಿಶೇಷವಾಗಿ ಆಚರಿಸುತ್ತಿರುವಿರಿ. ಅವರು ಇಡೀ ಜಗತ್ತಿಗೆ ಚಿರಪರಿಚಿತರಾಗಿದ್ದಾರೆ. ಡಿಜಿಟಲ್ ಮಾಧ್ಯಮ ಬಂದಿದೆ. ಈಗ ಎಲ್ಲರಿಗೂ ಸರಳವಾಗಿದೆ. ನಿಮ್ಮನ್ನು ಬಳಸಿಕೊಳ್ಳದ ಯಾರೂ ಇಲ್ಲ. ಪ್ರಿಂಟಿಂಗ್ ಪ್ರೆಸ್ ಕೆಲಸ ಶ್ರೇಷ್ಠ ಕಾಯಕವಾಗಿದೆ. ಕಾಯಕ ಮಾಡಿದವರಿಗೆ ಮುದ್ರೋದ್ಯಮ ಪ್ರಶಸ್ತಿ ನೀಡಿರುವುದು ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದರು.

    ಖ್ಯಾತ ವಾಗ್ಮಿ ವಿಷ್ಣು ಶಿಂಧೆ ಉಪನ್ಯಾಸ ನೀಡಿ ಮಾತನಾಡಿ, ನನಗೂ ಕೂಡಾ ಮುದ್ರಣ ಮಾಧ್ಯಮದ ಅನುಭವ ಇದೆ. ಇಂದು ನಾವು ಮುದ್ರಣ ಮಾಧ್ಯಮ ಅವಲಂಬಿಸಿದ್ದೇವೆ. ನಮ್ಮ ಹಿರಿಯರು ರಾಜ್ಯರ ಕಾಲದಲ್ಲಿ ಕಲ್ಲಿನ ಮೇಲೆ ಶಾಸನಗಳನ್ನು ಬರೆಯುತ್ತಿದ್ದರು. ನಂತರ ತಾಮ್ರದ ಪತ್ರ ಆದ ನಂತರ ಬಂದಿದ್ದು ಕಾಗದ ಮೇಲೆ ಮುದ್ರಿಸುವುದು. ಈಗ ಮೊಬೈಲ್ ಬಂದ ಮೇಲೆ ಇಂದು ಎಲ್ಲರೂ ಮುದ್ರಕರು ಮತ್ತು ೆಟೋಗ್ರಾರ್ ಆಗಿದ್ದಾರೆ. ಇಂದು ಮುದ್ರಣ ಮಾಧ್ಯಮ ಬಹಳಷ್ಟು ವಿಶಾಲವಾಗಿ ಬೆಳೆದಿದೆ ಎಂದರು.

    ಗುಲಬುರ್ಗಾ ವಿಭಾಗ ಸಂಚಾಲಕ ರವಿ ಮುಕ್ಕಾ, ವಿಜಯಪುರ ಪ್ರಿಂಟಿಂಗ್ ಪ್ರೆಸ್ ಮತ್ತು ವರ್ಕಸ್ ಅಸೋಶಿಯೇಷನ್ ಸಂಘದ ಅಧ್ಯಕ್ಷ ಚಿದಾನಂದ ವಾಲಿ, ಗೌರವಾಧ್ಯಕ್ಷ ಚಂದ್ರಶೇಖರ ಬುರಾಣಪುರ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಉಮೇಶ ವಂದಾಲ, ಪ್ರಭು ಮಲ್ಲಿಕಾರ್ಜುನಮಠ, ಎಚ್.ಎಂ. ಬಾಗವಾನ, ವೆಂಕಟೇಶ ಕಪಾಳೆ, ಮಹ್ಮದ್‌ಹನೀಫ್ ಮುಲ್ಲಾ, ಮೃತ್ಯುಂಜಯ ಶಾಸಿ, ಜಗದೀಶ ಶಹಾಪುರ, ನಾಗರಾಜ ಬಿಸನಾಳ, ಬಸವರಾಜ ಹಾವಿನಾಳ, ದೀಪಕ ಜಾಧವ, ಉಮೇಶ ಶಿವಶರಣ, ನಬಿಲಾಲ ಮಕಾನದಾರ, ಮಂಜುನಾಥ ರೂಗಿ, ಸುರೇಶ ಗೊಳಸಂಗಿ, ಶ್ರೀಮಂತ ಬೂದಿಹಾಳ, ತೇಜಸ್ವಿನಿ ಕುಲಕರ್ಣಿ ಹಾಗೂ ಲಾಯಪ್ಪ ಇಂಗಳೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts