More

    ಮುದ್ರಣ ವಲಯಕ್ಕೆ ಸರ್ಕಾರದ ಬೆಂಬಲ ಅಗತ್ಯ: ವಸಂತ ಕುಮಾರ್

    ಶಿವಮೊಗ್ಗ: ಇಂದು ಬಹುತೇಕ ರಂಗಗಳಲ್ಲಿ ತಂತ್ರಜ್ಞಾನದ ಪ್ರವೇಶವಾಗಿದೆ. ಮುದ್ರಣ ರಂಗವೂ ಇದಕ್ಕೆ ಹೊರತಗಿಲ್ಲ. ಡಿಜಿಟಲ್ ಮುದ್ರಣ ವ್ಯವಸ್ಥೆಯಿಂದ ಸಾಂಪ್ರದಾಯಿಕ ಮುದ್ರಣಕ್ಕೆ ಇಲ್ಲವೇ ಹಿಂದಿನ ಯಂತ್ರೋಪಕರಣಗಳಿಗೆ ತೀವ್ರ ಹಿನ್ನಡೆಯಾಗಿದೆ ಎಂದು ಲೆಕ್ಕಪರಿಶೋಧಕ ಕೆ.ವಿ.ವಸಂತ ಕುಮಾರ್ ಆತಂಕ ವ್ಯಕ್ತಪಡಿಸಿದರು.

    ಮಲೆನಾಡು ಮುದ್ರಕರ ಸಂಘದಿಂದ ಭಾನುವಾರ ಏರ್ಪಡಿಸಿದ್ದ ಮುದ್ರಕರ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದು ಮುದ್ರಣ ವಲಯಕ್ಕೆ ಸರ್ಕಾರದಿಂದ ಸೂಕ್ತ ಬೆಂಬಲದ ಅಗತ್ಯವಿದೆ. ದುಬಾರಿ ವೆಚ್ಚದ ನೂತನ ಯಂತ್ರೋಪಕರಣಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಗದ ಮುದ್ರಕರಿಗೆ ಸರ್ಕಾರದ ಸಹಾಯ ಹಸ್ತ ಅವಶ್ಯ ಎಂದು ಹೇಳಿದರು.
    ವಿಜ್ಞಾನ, ತಂತ್ರಜ್ಞಾನ ಬದಲಾದಂತೆ ನಾವು ಅದಕ್ಕೆ ಹೊಂದಿಕೊಳ್ಳಬೇಕಾದ್ದು, ನೂತನ ವ್ಯವಸ್ಥೆಯನ್ನು ನಮ್ಮದಾಗಿಸಿಕೊಳ್ಳಬೇಕಾದ್ದು ಅವಶ್ಯ. ಹೀಗೆ ಬದಲಾದಲ್ಲಿ ಮಾತ್ರ ಉದ್ಯಮವನ್ನು ಉಳಿಸಿ ಮುಂದಕ್ಕೆ ಕೊಂಡೊಯ್ಯಲು ಸಾಧ್ಯ. ಬದಲಾಗದೇ ಇದ್ದರೆ ನಷ್ಟ ಇಲ್ಲವೇ ಉದ್ಯಮವನ್ನೇ ಮುಚ್ಚಬೇಕಾದ ಸ್ಥಿತಿ ನಿರ್ಮಾಣವಾಗಲಿದೆ ಎಂದು ಎಚ್ಚರಿಸಿದರು.
    ಜಗತ್ತಿನಲ್ಲಿ ದೊಡ್ಡ ಬದಲಾವಣೆ ತಂದಿದ್ದು ಮುದ್ರಣ ವ್ಯವಸ್ಥೆ. ಜಾನ್ ಹಿಡನ್ ಬರ್ಗ್ ಮುದ್ರಣ ಯಂತ್ರವನ್ನು ಆವಿಷ್ಕಾರ ಮಾಡಿದ ಬಳಿಕ ವಿಶ್ವದಲ್ಲಿ ಸಾಕಷ್ಟು ಬದಲಾವಣೆಯಾಗಿತ್ತು. ಇಂದಿಗೆ ಅಂದಿನ ತಂತ್ರಜ್ಞಾನ ತುಂಬಾ ಹಳೆಯದು. ಇಂದು ಹೊಸ ತಂತ್ರಜ್ಞಾನದಿಂದ ತ್ರರಿತವಾಗಿ ಕೆಲಸ ಆಗುತ್ತಿರುವುದೇನೋ ನಿಜ. ಆದರೆ ಮುದ್ರಣ ವೆಚ್ಚದಲ್ಲೂ ಹೆಚ್ಚಳವಾಗಿದೆ ಎಂದು ಹೇಳಿದರು.
    ಮುದ್ರಕರ ಕುಟುಂಬದವರಿಗೆ ಏರ್ಪಡಿಸಿದ್ದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ನಿವೃತ್ತ ಪ್ರಾಧ್ಯಾಪಕ ಪ್ರೊ.ಕೆ.ಜಿ.ವೆಂಕಟೇಶ್, ನಾನು ಶಿಕ್ಷಕನಾಗುವುದಕ್ಕೂ ಮುನ್ನ ಮುದ್ರಣ ಕಚೇರಿಯಲ್ಲಿ ಕಾರ್ಯನಿರ್ವಹಿಸಿದ್ದೆ. ಹೀಗಾಗಿ ಮುದ್ರಣ ವಲಯದಲ್ಲಿನ ಕಷ್ಟಗಳೇನು ಎಂಬುದರ ಅರಿವು ನನಗಿದೆ. ವರ್ಷವಿಡೀ ಕಾರ್ಯದೊತ್ತಡದಲ್ಲಿರುವ ಮುದ್ರಕರು ಒಂದು ದಿನದ ಮಟ್ಟಿಗೆ ಬಿಡುವು ಮಾಡಿಕೊಂಡು ಕೀಡಾಕೂಟದಲ್ಲಿ ತೊಡಗುವುದು ಖುಷಿಯ ವಿಚಾರ ಎಂದರು.
    ಮಲೆನಾಡು ಮುದ್ರಕರಣ ಸಂಘದ ಅಧ್ಯಕ್ಷ ಎಂ.ಮಾಧವಾಚಾರ್, ಪ್ರಧಾನ ಕಾರ್ಯದರ್ಶಿ ಗಣೇಶ್ ಬೀಳಗಿ, ಪ್ರಮುಖರಾದ ಅ.ನ.ವಿಜಯೇಂದ್ರರಾವ್, ನಾಗರತ್ನಾ ಶಂಕರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts