More

    ತತ್ವಪದಗಳಿಂದ ಬದುಕು ಪರಿಶುದ್ಧ: ಹಿರಿಯೂರು ತಾಪಂ ಅಧ್ಯಕ್ಷೆ ಲಕ್ಷ್ಮೀದೇವಿ ಹೇಳಿಕೆ

    ಹಿರಿಯೂರು: ವಚನ, ಕೀರ್ತನೆ, ದಾಸಪದ ಹಾಗೂ ತತ್ವಪದಗಳಿಂದ ಬದುಕು ಪರಿಶುದ್ಧವಾಗುತ್ತದೆ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀದೇವಿ ಹೇಳಿದರು.

    ತಾಲೂಕಿನ ಬ್ಯಾರಮಡು ಗ್ರಾಮದ ಶ್ರೀ ಶನೈಶ್ಚರಸ್ವಾಮಿ ದೇವಸ್ಥಾನದ ಆವರಣದಲ್ಲಿ ಗುರುವಾರ ಅಮೃತವರ್ಷಿಣಿ ಕಲಾಸಂಘ, ಶ್ರೀ ಗುರು ರಾಘವೇಂದ್ರ ಸಾಂಸ್ಕೃತಿಕ ಕಲಾಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀ ಶನೈಶ್ಚರಸ್ವಾಮಿ ಕಲಾಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ಸಂಗೀತ ಗಾಯನ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು.

    ಮೂಢನಂಬಿಕೆ, ಕಂದಾಚಾರ, ಅಸಮಾನತೆ, ಲಿಂಗ ತಾರತಮ್ಯ ಹೋಗಲಾಡಿಸಲು ವಚನಗಳು, ದಾಸರ ಪದಗಳು, ಕೀರ್ತನೆಗಳು, ತತ್ವಪದಗಳು ಪ್ರೇರಣೆಯಾಗಿವೆ. ಬಸವಾದಿ ಶರಣರ ವಚನಗಳ ಅಧ್ಯಯನದಿಂದ ಬದುಕಿನಲ್ಲಿ ಶಿಸ್ತು ಏಕತೆ ಮೂಡಿ, ಸಮ ಸಮಾಜ ನಿರ್ಮಾಣಕ್ಕೆ ಅನುವು ಮಾಡಿಕೊಡುತ್ತದೆ ಎಂದು ಅಭಿಪ್ರಾಯಪಟ್ಟರು.

    ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷ ಎಸ್.ಜಿ.ರಂಗಸ್ವಾಮಿ ಸಕ್ಕರ ಮಾತನಾಡಿ, ಸಂಗೀತ ಒಂದು ಜಾತಿ, ವರ್ಗ, ಸಮಾಜಕ್ಕೆ ಸೀಮಿತವಾಗಿಲ್ಲ. ಅದು ನಾಡಿನ ಜೀವಂತ ಕಲೆಯಾಗಿದೆ. ಸಂಗೀತ ಹಾಡುವುದು, ಕೇಳುವುದರಿಂದ ನೆಮ್ಮದಿ ಸಿಗುತ್ತದೆ. ದುಃಖ, ಸಂಕಟ, ವೇದನೆ ದೂರ ಮಾಡಿ ಮನಸ್ಸನ್ನು ಹಗುರ ಮಾಡುತ್ತದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts