More

    ನಮ್ಮ ದಶ ಪ್ರಶ್ನೆಗಳಿಗೆ ಪ್ರಧಾನಿಗಳೇ ಉತ್ತರಿಸಿ

    ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭಾ ಚುನಾವಣಾ ಪ್ರಚಾರ ಸಭೆಗಾಗಿ ಮಾ.18ರಂದು ಶಿವಮೊಗ್ಗಕ್ಕೆ ಆಗಮಿಸಲಿದ್ದು, ಸಮಾವೇಶಕ್ಕೆ ಬಿಜೆಪಿ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ. ಈ ನಡುವೆ ವಿವಿಧ ಪಕ್ಷಗಳ, ಸಂಘಟನೆಗಳ ಮುಖಂಡರು ಪ್ರಧಾನಿ ಮೋದಿ ವಿರುದ್ಧ ಪ್ರಶ್ನೆಗಳ ಮೂಲಕ ಟೀಕಾಸ್ತ್ರ ಮುಂದುವರಿಸಿದ್ದು, ಕಳೆದ ಬಾರಿ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಗಳ ಕಥೆ ಏನಾಯ್ತು ಎಂಬುದಕ್ಕೆ ಉತ್ತರ ಕೊಡುವಂತೆ ಒತ್ತಾಯಿಸಿದ್ದಾರೆ.

    ಶಿವಮೊಗ್ಗಕ್ಕೆ ಪ್ರಧಾನಿ ಮೋದಿ ಬರುವ ಹಿನ್ನೆಲೆಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅವರ 10 ವರ್ಷದ ಆಡಳಿತಕ್ಕೆ ಸಂಬಂಧಪಟ್ಟಂತೆ ದಶ ಪ್ರಶ್ನೆಗಳನ್ನು ಕೇಳಿದೆ. ಹತ್ತು ವರ್ಷದಲ್ಲಿ ಪ್ರಧಾನಿ ಮೋದಿ ಕೊಟ್ಟ ಭರವಸೆಗಳೆಲ್ಲ ಹುಸಿಯಾಗಿವೆ. ನಾವು ಕೇಳುವ ಹತ್ತು ಪ್ರಶ್ನೆಗಳಿಗೆ ಉತ್ತರ ಕೊಡಲಿ ಎಂದು ಪ್ರಶ್ನೆಗಳ ಕರಪತ್ರಗಳನ್ನು ಬಿಡುಗಡೆ ಮಾಡಿದರು.
    ದಶ ಪ್ರಶ್ನೆಗಳಿರುವ ಕರಪತ್ರವನ್ನು ಮನೆ ಮನೆಗೂ ನಾವು ತಲುಪಿಸುತ್ತೇವೆ. ಪ್ರಧಾನಿ ಮೋದಿ ಅವರಿಗೂ ತಲುಪಿಸುತ್ತೇವೆ ಎಂದು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಪಿ.ಗಿರೀಶ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಪ್ರಮುಖರಾದ ಎಂ.ಪ್ರವೀಣ್‌ಕುಮಾರ್, ಕೆ.ರಂಗನಾಥ್, ಲೋಕೇಶ್, ಎಂ.ರಾಹುಲ್, ಎಸ್.ಕುಮರೇಶ್, ಟಿ.ವಿ.ರಂಜಿತ್, ನಾಗರಾಜ್ ನಾಯಕ, ಪುಷ್ಪಕ್ ಕುಮಾರ್, ಮೊಹಮ್ಮದ್ ಇಕ್ಬಾಲ್ ಇದ್ದರು.

    ದಶ ಪ್ರಶ್ನೆಗಳು ಯಾವುವು?
    ವರ್ಷಕ್ಕೆ 2 ಕೋಟಿಯಂತೆ 10 ವರ್ಷದಲ್ಲಿ ಎಷ್ಟು ಉದ್ಯೋಗ ಸೃಷ್ಟಿ ಆಗಿದೆ?, * ರೈತರಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ನಿಮ್ಮ ಭರವಸೆ ಏನಾಯ್ತು?, * ಪ್ರತಿಯೊಬ್ಬರ ಖಾತೆಗೆ ಹಾಕುವುದಾಗಿ ಹೇಳಿದ್ದ 15 ಲಕ್ಷ ರೂ. ಎಲ್ಲಿ?, * ಉದ್ಯೋಗ ನಷ್ಟ ಮಾಡಿದ ನೋಟ್ ಬ್ಯಾನ್ ಅನ್ನು ಹೇಗೆ ಸಮರ್ಥಿಸುವಿರಿ?, * ಪೆಟ್ರೋಲ್, ಡಿಸೇಲ್ ದರ ಏಕೆ ಕಡಿಮೆ ಮಾಡುತ್ತಿಲ್ಲ?, * ಪೋಟೋ ಪ್ರಚಾರಕ್ಕಾಗಿ ಲಕ್ಷಾಂತರ ಕೋಟಿ ರೂ. ವೆಚ್ಚ ಮಾಡಿದ್ದು ಏಕೆ?, * ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಕಾನೂನು ಏಕೆ ಮಾಡಲಿಲ್ಲ?, * ನೀವು ಹೇಳಿದ್ದ ಸ್ಮಾರ್ಟ್‌ಸಿಟಿ, ಬುಲೆಟ್ ಟ್ರೈನ್ ಎಲ್ಲಿ?, * ಕರ್ನಾಟಕದ ಯುವಕರಿಗೆ ಕೇಂದ್ರದ ಪರೀಕ್ಷೆಗಳಲ್ಲಿ ಸಮಾನ ಅವಕಾಶ ಕಿತ್ತುಕೊಂಡಿದ್ದು ಏಕೆ?,* ರಾಜ್ಯಕ್ಕೆ ತೆರಿಗೆ ಹಣ ಏಕೆ ಕೊಡಲಿಲ್ಲ?, ಕಾವೇರಿ, ಮಹದಾಯಿ ಹಾಗೂ ಬರ ಪರಿಹಾರ ನಿಧಿ ಏಕೆ ಕೊಟ್ಟಿಲ್ಲ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts