More

    ಸಚಿವಾಲಯದಿಂದ ಸಹಕಾರ ಕ್ಷೇತ್ರ ಬಲವರ್ಧನೆ: ಬಿ.ಡಿ.ಭೂಕಾಂತ್

    ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರದಲ್ಲಿ ನೂತನ ಸಹಕಾರಿ ಸಚಿವಾಲಯ ರಚಿಸಿರುವುದು ದೇಶಾದ್ಯಂತ ಸಹಕಾರಿ ವಲಯದಲ್ಲಿ ಮಹತ್ತರ ಬದಲಾವಣೆಗೆ ನಾಂದಿ ಆಗಲಿದೆ ಎಂದು ರಾಜ್ಯ ಸಹಕಾರ ತೋಟಗಾರಿಕಾ ಮಹಾಮಂಡಳದ ಅಧ್ಯಕ್ಷ ಡಾ. ಬಿ.ಡಿ.ಭೂಕಾಂತ್ ತಿಳಿಸಿದ್ದಾರೆ.
    ಸಹಕಾರದಿಂದ ಸಮೃದ್ಧಿ ಎಂಬ ತತ್ವಕ್ಕೆ ಬದ್ಧವಾಗಿರುವ ಕೇಂದ್ರ ಸರ್ಕಾರದ ಕ್ರಮ ಮಾದರಿ ಹೆಜ್ಜೆಯಾಗಿದೆ. ದೇಶದ ಇಡೀ ವ್ಯವಸ್ಥೆಯು ಸಹಕಾರಿ ತತ್ವದಡಿಯಲ್ಲೇ ಬೆಳೆದುಬಂದಿದೆ. ಸಹಕಾರ ವ್ಯವಸ್ಥೆ ಹಾಗೂ ರೈತಾಪಿ ವರ್ಗಕ್ಕೆ ನೇರ ಹಾಗೂ ಅವಿನಾಭಾವ ಸಂಬಂಧವಿದೆ. ಅದಕ್ಕೆ ಅಮಿತ್ ಶಾ ಅವರು ಸಚಿವರಾಗಿರುವುದು ಅಭಿನಂದನಾರ್ಹ ಎಂದಿದ್ದಾರೆ.
    ಸಹಕಾರ ಸಚಿವಾಲಯ ಸ್ಥಾಪನೆಯಿಂದ ಅನೇಕ ಉಪಯೋಗಗಳು ಸಾಧ್ಯವಾಗಲಿದೆ. ಸಹಕಾರ ರಂಗಕ್ಕಷ್ಟೇ ಅಲ್ಲದೆ, ಜನಸಾಮಾನ್ಯರಿಗೂ ಇದರಿಂದ ಸಾಕಷ್ಟು ಪ್ರಯೋಜನಗಳಿವೆ. ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಈ ನಡೆಯಿಂದ ಮತ್ತಷ್ಟು ಬಲ ಬಂದಂತಾಗಿದೆ. ಅಲ್ಲದೇ ದೇಶಾದ್ಯಂತ ಮಹಿಳಾ ಸ್ವಸಹಾಯ ಗುಂಪುಗಳಿದ್ದು, ಕೇಂದ್ರ ಸರ್ಕಾರದ ಈ ನಿರ್ಣಯವು ಮಹಿಳಾ ವರ್ಗದ ಅಭಿವೃದ್ಧಿ ಮತ್ತು ಸಬಲೀಕರಣಕ್ಕೆ ದಾರಿ ಮಾಡಿಕೊಡಲಿದೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts