More

    LIVE| ಹೊಸ ಸಂಸತ್​ ಭವನದ ಭೂಮಿ ಪೂಜೆ ನೆರವೇರಿಸಿದ ಪ್ರಧಾನಿ ಮೋದಿ ಐತಿಹಾಸಿಕ ಭಾಷಣ

    ನವದೆಹಲಿ: ಹೊಸದಾಗಿ ನಿರ್ಮಾಣವಾಗಲಿರುವ ಸಂಸತ್​ ಭವನಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು ಭೂಮಿ ಪೂಜೆ ನೇರವೇರಿಸಿದರು. ಶಿಲಾನ್ಯಾಸ ಕಾರ್ಯಕ್ರಮದ ನೇರಪ್ರಸಾರವನ್ನು ಮೇಲಿನ ವಿಡಿಯೋದಲ್ಲಿ ವೀಕ್ಷಿಸಬಹುದಾಗಿದೆ. ಇಂದಿನಿಂದ ನಿರ್ಮಾಣ ಕೆಲಸ ಆರಂಭವಾಗಲಿದ್ದು, 2021ರ ಆಗಸ್ಟ್​ 15ರ ವೇಳೆಗೆ ನೂತನ ಸಂಸತ್​ ಭವನ ಸಿದ್ಧವಿರಲಿದೆ. ಇಂದು ನಡೆಯುತ್ತಿರುವ ಧಾರ್ವಿುಕ ವಿಧಿವಿಧಾನಗಳ ಸಂಪೂರ್ಣ ಜವಾಬ್ದಾರಿಗಳನ್ನು ಕರ್ನಾಟಕದ ಶೃಂಗೇರಿ ಮಠಕ್ಕೆ ವಹಿಸಿರುವುದು ನಮ್ಮ ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ.

    ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಟಾಟಾ ಕಂಪನಿ ಚೇರ್​ಮನ್​ ರತನ್​ ಟಾಟಾ, ಗೃಹ ಸಚಿವ ಅಮಿತ್​ ಷಾ, ರಕ್ಷಣಾ ಸಚಿವ ರಾಜನಾಥ್​ ಸಿಂಗ್​, ಕೇಂದ್ರ ಸಚಿವರಾದ ಎಸ್​.ಎಸ್​. ಪುರಿ, ರವಿಶಂಕರ್​ ಪ್ರಸಾದ್​ ಹಾಗೂ ಲೋಕಸಭಾ ಸ್ಪೀಕರ್​ ಓಂ ಬಿರ್ಲಾ ಸೇರಿದಂತೆ ವಿವಿಧ ಧಾರ್ಮಿಕ ಮುಖಂಡರು ಭಾಗವಹಿಸಿದ್ದಾರೆ.

    ಹೇಗಿರಲಿದೆ ನೂನತ ಸಂಸತ್​ ಭವನ
    ಹೊಸ ಸಂಸತ್​ ಭವನವು ಈಗಿರುವ ಸಂಸತ್​ ಭವನಕ್ಕಿಂತ 17 ಸಾವಿರ ಚದರ ಮೀಟರ್​ ದೊಡ್ಡದಾಗಿರಲಿದೆ. ಒಟ್ಟು 64,500 ಚದರ ಮೀಟರ್​ನಲ್ಲಿ ಸಂಸತ್​ ನಿರ್ಮಿಸಲಾಗುತ್ತಿದೆ. ಲೋಕಸಭೆಯಲ್ಲಿ 888 ಸದಸ್ಯರಿಗೆ ಸೀಟುಗಳನ್ನು ಅಳವಡಿಸಲಾಗುವುದು. ರಾಜ್ಯಸಭೆಯಲ್ಲಿ 326 ಸೀಟುಗಳಿರಲಿವೆ. ಜಂಟಿ ಅಧಿವೇಶನ ನಡೆಯುವ ಸಮಯದಲ್ಲಿ ಲೋಕಸಭೆಯೊಂದರಲ್ಲೇ 1224 ಜನರಿಗೆ ಕೂರುವ ಅವಕಾಶವಿರಲಿದೆ. ಇದು ಭೂಕಂಪ ನಿರೋಧಕ ಕಟ್ಟಡವಾಗಿರಲಿದೆ. 2000 ಕಾರ್ಮಿಕರು ನಿರ್ಮಾಣ ಕೆಲಸದಲ್ಲಿ ತೊಡಗಿಸಿಕೊಳ್ಳಲಿದ್ದು, ಒಟ್ಟು 971 ಕೋಟಿ ರೂಪಾಯಿ ವೆಚ್ಚದಲ್ಲಿ ಸಂಸತ್​ ಭವನ ನಿರ್ಮಾಣವಾಗುತ್ತಿದೆ. (ಏಜೆನ್ಸೀಸ್​)

    ಸಂಸತ್ ಶಿಲಾನ್ಯಾಸಕ್ಕೆ ಶೃಂಗೇರಿ ಮಠದ ಪೌರೋಹಿತ್ಯ! : ಧಾರ್ವಿುಕ ಕಾರ್ಯಕ್ರಮದ ಜವಾಬ್ದಾರಿ ಸಚಿವ ಪ್ರಲ್ಹಾದ್ ಜೋಶಿಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts