More

    ನಮೋ 2.0 ಸಂಪುಟ ವಿಸ್ತರಣೆ: ಮೋದಿ ಸಂಪುಟದಲ್ಲಿ 11 ಮಹಿಳೆಯರಿಗೆ ಸ್ಥಾನ

    ನವದೆಹಲಿ: ಕೇಂದ್ರದಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ಮೋದಿ ನೇತೃತ್ವದ ಎನ್​ಡಿಎ ಸರ್ಕಾರವು ಸಚಿವ ಸಂಪುಟಕ್ಕೆ ಮೆಗಾ ಸರ್ಜರಿ ಮಾಡಿದ್ದು, ಜಾತಿ, ವಲಯ ಮತ್ತು ಅನುಭವವನ್ನು ಅಳೆದು ತೂಗಿ ಸಚಿವ ಸಂಪುಟ ಪುನರಚನೆ ಮಾಡಿದೆ. ವಿಶೇಷವೆಂದರೆ ಈ ಬಾರಿ 11 ಮಹಿಳಾ ಮಂತ್ರಿಗಳು ಮೋದಿ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ.

    ಇಂದು 7 ಮಹಿಳೆಯರು ಸೇರಿದಂತೆ ಹೊಸದಾಗಿ 43 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಉತ್ತರ ಪ್ರದೇಶದ ಮಿರ್ಜಾಪುರ್​ ಕ್ಷೇತ್ರದ ಸಂಸದೆ ಅನುಪ್ರಿಯಾ ಸಿಂಗ್​ ಪಟೇಲ್​, ಕರ್ನಾಟಕದ ಉಡುಪಿ ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ, ಗುಜರಾತಿನ ಸೂರತ್​ ಕ್ಷೇತ್ರದ ಸಂಸದೆ ದರ್ಶನ ವಿಕ್ರಮ್​ ಜರ್ದೋಶ್​, ದೆಹಲಿ ಸಂಸದೆ ಮೀನಾಕ್ಷಿ ಲೇಖಿ, ಜಾರ್ಖಂಡ್​ನ ಉತ್ತರ ಛೋಟಾನಾಗ್ಪುರ್​ ಕ್ಷೇತ್ರದ ಸಂಸದೆ ಅನ್ನಪೂರ್ಣ ದೇವಿ, ತ್ರಿಪುರಾದ ಅಗರ್ತಲಾ ಕ್ಷೇತ್ರದ ಸಂಸದೆ ಸುಶ್ರಿ ಪ್ರತಿಮಾ ಭೌಮಿಕ್​ ಮತ್ತು ಮಹಾರಾಷ್ಟ್ರದ ಖಾಂದೇಶ್​ ಕ್ಷೇತ್ರದ ಸಂಸದೆ ಭಾರತಿ ಪ್ರವೀನ್​ ಪವಾರ್ ಅವರು​ ಮೋದಿ ಸಂಪುಟದಲ್ಲಿ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ.

    ಉಳಿದಂತೆ ನಿರ್ಮಾಲಾ ಸೀತಾರಾಮನ್​, ಸ್ಮೃತಿ ಇರಾನಿ, ರೇಣುಕಾ ಸಿಂಗ್​ ಮತ್ತು ಸಾದ್ವಿ ನಿರಂಜನ್​ ಜ್ಯೋತಿ ಮಂತ್ರಿಗಳಾಗಿದ್ದಾರೆ.

    ಪ್ರಧಾನಿ ಮೋದಿ ನೇತೃತ್ವದ ಹೊಸ ಸಚಿವ ಸಂಪುಟದಲ್ಲಿ 50 ವರ್ಷಕ್ಕಿಂತ ಕಡಿಮೆ ವಯಸ್ಸಿನ 14 ಮಂತ್ರಿಗಳಿದ್ದಾರೆ. ವಿಶೇಷವಾಗಿ 13 ವಕೀಲರು, ಐವರು ಇಂಜಿನಿಯರ್ಸ್​, ಆರು ವೈದ್ಯರು, ಏಳು ಮಾಜಿ ಸರ್ಕಾರಿ ಅಧಿಕಾರಿಗಳು ಮಂತ್ರಿ ಸ್ಥಾನಗಳನ್ನು ಪಡೆದಿದ್ದಾರೆ.

    ಒಂಬತ್ತು ರಾಜ್ಯಗಳ 11 ಮಹಿಳಾ ಮಂತ್ರಿಗಳು ಹೊಸ ಸಂಪುಟದಲ್ಲಿ ಇರಲಿದ್ದಾರೆ. ಬಿಹಾರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಕರ್ನಾಟಕ, ರಾಜಸ್ಥಾನ ಮತ್ತು ತಮಿಳುನಾಡು ಸೇರಿದ ಎಂಟು ರಾಜ್ಯಗಳಿಂದ ಬಂದ 12 ಮಂದಿ ಪರಿಶಿಷ್ಟ ಜಾತಿಯ ಮಂತ್ರಿಗಳಿದ್ದು, ಇಬ್ಬರು ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ನೂತನ ಮಂತ್ರಿಗಳಲ್ಲಿ 27 ಮಂದಿ ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದು, ಅವರಲ್ಲಿ ಐದು ಮಂದಿ ಸಂಪುಟದಲ್ಲಿರುತ್ತಾರೆ.

    ದಾಖಲೆಯ ಎಂಟು ಮಂತ್ರಿಗಳು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದು, ಅವರಲ್ಲಿ ಮೂವರು ಸಂಪುಟದಲ್ಲಿ ಇರಲಿದ್ದಾರೆ. ಅವರೆಲ್ಲ ಅರುಣಾಚಲ ಪ್ರದೇಶ, ಜಾರ್ಖಂಡ್, ಛತ್ತೀಸ್​ಗಢ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ ಮತ್ತು ಅಸ್ಸಾಂನಿಂದ ಬಂದವರಾಗಿದ್ದಾರೆ. (ಏಜೆನ್ಸೀಸ್​)

    ಪ್ರಧಾನಿ ಮೋದಿ ನೂತನ ಸಚಿವ ಸಂಪುಟದಲ್ಲಿ 27 ಒಬಿಸಿ ಮಂತ್ರಿಗಳು

    ಇಂದು ಪ್ರಮಾಣ ವಚನ ಸ್ವೀಕರಿಸುವ ಸಚಿವರ ಪಟ್ಟಿ ಬಿಡುಗಡೆ; ಕರ್ನಾಟಕದ ನಾಲ್ವರಿಗೆ ಮಂತ್ರಿಗಿರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts