More

    ಮೋದಿಜಿ ಜನ್ಮ ದಿನಾಚರಣೆ

    ವಿಜಯವಾಣಿ ಸುದ್ದಿಜಾಲ ಹಾನಗಲ್ಲ

    ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ ಅಂಗವಾಗಿ ಬಿಜೆಪಿ ಕಾರ್ಯಕರ್ತರು ತಾಲೂಕಿನಾದ್ಯಂತ ಸಸಿ ನೆಡುವ, ಕರೊನಾ ಸೇನಾನಿಗಳನ್ನು ಗೌರವಿಸುವ ಕಾರ್ಯಕ್ರಮಗಳನ್ನು ಕೈಗೊಂಡರು.

    ಎಸ್​ಸಿ ಮೋರ್ಚಾ ಹಾಗೂ ರೈತ ಮೋರ್ಚಾ ಪದಾಧಿಕಾರಿಗಳು ಸಸಿ ನೆಡುವ ಕಾರ್ಯಕ್ರಮ ಆಯೋ ಜಿಸಿದ್ದರು. ಯುವ ಮೋರ್ಚಾ ಪದಾಧಿಕಾರಿಗಳು ಕರೊನಾ ಸೇನಾನಿಗಳನ್ನು ಸನ್ಮಾನಿಸಿ ಗೌರವಿಸಿದರು.

    ತಹಸೀಲ್ದಾರ್ ಪಿ.ಎಸ್. ಎರ್ರಿಸ್ವಾಮಿ, ಸಿಪಿಐ ಶಿವಶಂಕರ ಗಣಾಚಾರಿ, ಪಿಎಸ್​ಐ ಶ್ರೀಶೈಲ ಪಟ್ಟಣಶೆಟ್ಟಿ ಹಾಗೂ ಪಟ್ಟಣದ ಸರ್ಕಾರಿ ಆಸ್ಪತ್ರೆಯ ವೈದ್ಯರಾದ ಡಾ.ಎನ್.ಸಿ. ರೋಹಿತ್, ಡಾ.ಕೆ. ಕಿರಣ, ಡಾ.ವೈಷ್ಣವಿ ಚಿಕ್ಕಣ್ಣನವರ, ಡಾ.ವೆಂಕಟೇಶ, ಡಾ.ಲೋಹಿತಕುಮಾರ, ಸಹಾಯಕ ಆಡಳಿತಾಧಿಕಾರಿ ಸುಭಾಸ ಚೊಗಚಿಕೊಪ್ಪ, ಶುಷ್ರೂಷಕಿ ಸ್ಮೀತಾ ನಾಯಕ, ಎಂ.ಸಲ್ಮಾ ಹಾಗೂ ತಾಲೂಕಿನ ಪತ್ರಕರ್ತರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಿದ್ದನಗೌಡ ಪಾಟೀಲ, ಉಪಾಧ್ಯಕ್ಷರಾದ ಪ್ರವೀಣ ಸುಲಾಖೆ, ಮಹೇಶ ಕಮಡೊಳ್ಳಿ, ವಿಜಯಕುಮಾರ ಜಿಗಳಿಕೊಪ್ಪ, ಪ್ರಧಾನ ಕಾರ್ಯದರ್ಶಿ ಪ್ರಸಾದ ಪಾವಲಿ, ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಭೋಜರಾಜ ಕರೂದಿ, ಭಾಜಪ ತಾಲೂಕು ಅಧ್ಯಕ್ಷ ರಾಜು ಗೌಳಿ, ಜಿಲ್ಲಾ ಎಸ್​ಸಿ ಮೋರ್ಚಾ ಉಪಾಧ್ಯಕ್ಷ ಚಂದ್ರಣ್ಣ ಹರಿಜನ, ತಾಲೂಕು ಅಧ್ಯಕ್ಷ ಮಹೇಶ ಹರಿಜನ, ಯುವಮೋರ್ಚಾ ಜಿಲ್ಲಾ ಕಾರ್ಯದರ್ಶಿ ಶಿವಯೋಗಿ ಪಾಟೀಲ, ಸಂತೋಷ ಟೀಕೋಜಿ, ಅಜಯ ರೂಗಿಶೆಟ್ಟರ ಇತರರು ಇದ್ದರು.

    ಅಕ್ಕಿಆಲೂರ ವರದಿ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ ಪ್ರಯುಕ್ತ ಗುರುವಾರ ಪಟ್ಟಣದ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಖಾಸಗಿ ನರ್ಸಿಂಗ್ ಹೋಂ ರೋಗಿಗಳಿಗೆ ಹಾಲು, ಹಣ್ಣುಗಳ ಕಿಟ್ ವಿತರಿಸಿದರು.

    ಯುವ ಘಟಕದ ಪದಾಧಿಕಾರಿಗಳು ಸ್ಥಳೀಯ ಮುತ್ತಿನಕಂತಿಮಠದ ಆವರಣದಲ್ಲಿ ಸಸಿ ನೆಟ್ಟು ಮೋದಿ ಹುಟ್ಟುಹಬ್ಬ ಆಚರಿಸಿದರು.

    ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸ್ವಾಮಿತ್ವ ಸ್ವೀಕರಿಸಿ ದೇವಾತ್ಮರಾದವರಿಗೆ ವಿಶೇಷ ಸಿದ್ಧಿ ಇರುತ್ತದೆ. ಎಲ್ಲ ಇಂದ್ರಿಯಗಳ ನಿಯಂತ್ರಣ, ಎಲ್ಲವನ್ನು ಸಾಧಿಸಬಲ್ಲ ಸಾಮರ್ಥ್ಯ ಸ್ವಾಮಿಗಳು ಹೊಂದಿರುತ್ತಾರೆ. ಆದರೆ, ನರೇಂದ್ರ ಮೋದಿ ಅವರು ಖಾವಿ ತೊಡದೇ ಎಲ್ಲ ದೈವಾಂಶ ಹೊಂದಿದ ಯುಗ ಪುರುಷ. 4 ಬಾರಿ ಮುಖ್ಯಮಂತ್ರಿ, 2 ಬಾರಿ ಪ್ರಧಾನಿಯಾಗಿ ಒಂದೇ ಒಂದು ರಜೆ ತೆಗೆದುಕೊಳ್ಳದೆ, ಸದಾ ಹಸನ್ಮುಖಿಯಾಗಿರುವ ಪ್ರಧಾನಿ ಮೋದಿ ವಿಶ್ವದ ಆದರ್ಶ ವ್ಯಕ್ತಿಯಾಗಿದ್ದಾರೆ ಎಂದು ಶ್ಲಾಘಿಸಿದರು.

    ಸಂಜೆ ಸಿದ್ದಾರ್ಥ ಮೊಬೈಲ್ಸ್​ನ ಹರ್ಷಾ ಪಸಾರದ ಬಸ್ ನಿಲ್ದಾಣದಲ್ಲಿ ಚಹಾ ವಿತರಿಸಿ ಮೋದಿ ಜನ್ಮದಿನ ಆಚರಿಸಿದರು. ಕಾವ್ಯ ಬೆಲ್ಲದ, ಸುಜಾತ ಪಸಾರದ, ನೇತ್ರಾ ಸಿಂಧೂರ, ಮಾಲಾ ವಿರಪಣ್ಣನವರ, ವಿನೋದ ಪಸಾರದ, ಲತಾ ಪಾಟೀಲ, ಲತಾ ದುರ್ಗದ, ನಿರ್ಮಲಾ ಪಾಟೀಲ, ಯುವ ಮೋರ್ಚಾದ ಪ್ರವೀಣ ಗೌಳಿ, ಹರೀಶ ಹಾನಗಲ್ಲ, ಹರ್ಷಾ ಪಸಾರದ, ಕೃಷ್ಣ ಕೊರಚರ, ಶಿವು ಪಾಟೀಲ, ಪ್ರಭು ಮುಷ್ಠಿ, ಮಂಜುನಾಥ ಪಾವಲಿ, ಗುರುರಾಜ ಧಾರವಾಡ, ವಿರೇಶ ಕಾಳೇರ, ಪ್ರಸಾದ ಪಾವಲಿ, ಅರುಣ ಮುಚ್ಚಂಡಿ, ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts