More

    ಪ್ರಧಾನಿ ಮೋದಿ ಆಡಳಿತಕ್ಕೆ ಜಗತ್ತೇ ನಿಬ್ಬೆರಗು

    ಕೊಕಟನೂರ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪಾರದರ್ಶಕ ಹಾಗೂ ಚಾಣಾಕ್ಷ ಆಡಳಿತ ವಿಶ್ವದ ನಾಯಕರನ್ನು ನಿಬ್ಬೆರಗುಗೊಳಿಸಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು. ಅಥಣಿ ತಾಲೂಕಿನ ನದಿ ಇಂಗಳಗಾಂವ ಗ್ರಾಮದ ಪೇರಲ್ ತೋಟದ ವಸತಿ ಬಳಿ ಕೃಷ್ಣಾ ನದಿ ಹಿನ್ನೀರಿನ ತೀರ್ಥ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ನೀರಾವರಿ ಇಲಾಖೆ ವತಿಯಿಂದ 2.25 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ಸೇತುವೆ ಕಾಮಗಾರಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿದ ಅವರು, 50 ವರ್ಷದಿಂದ ಆಗದ ಅಭಿವೃದ್ಧಿಗೆ ಇಂದು ನಾಗಾಲೋಟ ಸಿಕ್ಕಿದೆ. ಈ ವೇಗಕ್ಕೆ ಮೋದಿ ಅವರ ದೇಶಪರ ಚಿಂತನೆಗಳೇ ಕಾರಣ ಎಂದರು.

    ಅಧಿಕಾರ ಇಂದು ಬರುತ್ತದೆ, ನಾಳೆ ಹೋಗುತ್ತದೆ. ಆದರೆ, ನಾವು ಮಾಡುವ ಕೆಲಸಗಳು ಶಾಶ್ವತವಾಗುತ್ತವೆ. ಸಾಮಾನ್ಯ ಕಾರ್ಯಕರ್ತನಿಗೆ ಮಣೆ ಹಾಕಿ ಅಧಿಕಾರ ಕೊಡಲು ಜಿಜೆಪಿ ಪಕ್ಷದಿಂದ ಮಾತ್ರ ಸಾಧ್ಯ. ಇಂತಹ ಪಕ್ಷದ ಕಾರ್ಯಕರ್ತನೆಂದು ಹೇಳಿಕೊಳ್ಳಲು ನಾವು ಹೆಮ್ಮೆ ಪಡಬೇಕು. ದೇಶ ನನಗೇನು ಕೊಟ್ಟಿದೆ ಎನ್ನುವುದಕ್ಕಿಂತ ದೇಶಕ್ಕಾಗಿ ನನ್ನ ಕೊಡುಗೆ ಏನು ಎಂಬುದನ್ನು ಅರಿತುಕೊಂಡು ನಡೆಯಬೇಕು ಎಂದ ಅವರು, ಮುಂಬರುವ ದಿನಗಳಲ್ಲಿ ಅಥಣಿ ತಾಲೂಕಿನಲ್ಲಿ ಇನ್ನಷ್ಟು ಸೇತುವೆ ನಿರ್ಮಾಣ ಮಾಡಿ ಸಂಚಾರ ಸುಗಮವಾಗುವಂತೆ ಮಾಡಲಾಗುವುದು ಎಂದರು. ಶ್ರೀಶೈಲ ನಾಯಿಕ, ಎ.ಎನ್.ಪಾಟೀಲ, ಸಂಜೀವ ರಾಚಗೌಡರ, ಶಂಕರ ಠಕ್ಕಣ್ಣವರ, ಅಪ್ಪು ಮದಬಾವಿ, ಜಿ.ಎಂ.ತೇವರಮನಿ, ಕುಮಾರ ಮಠಪತಿ, ಶಂಕರಗೌಡ ಪಾಟೀಲ, ಸಹಾಯಕ ಅಭಿಯಂತ ಪ್ರವೀಣ ಹುಣಶೀಕಟ್ಟಿ, ಸಿದ್ದು ಲಾಂಡಗೆ, ಎನ್.ಸಿ.ಪವಾರ, ಅಯ್ಯನಗೌಡ ಪಾಟೀಲ, ಶಿವರುದ್ರ ಘೂಳಪ್ಪನವರ, ಹನುಮಂತ ಬಾಡಗಿ, ಮಹಾಂತೇಶ ಪಾಟೀಲ, ಅಲಗೌಡ ಮುದಿಗೌಡರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts