More

    ದೇಶದಲ್ಲಿ ರೈಲ್ವೇ ಹಾಗೂ ಕೃಷಿ ಕ್ಷೇತ್ರವನ್ನು ಶಕ್ತಿಯುಗೊಳಿಸುತ್ತಿದ್ದೇವೆ; ಪ್ರಧಾನಿ ಮೋದಿ

    ಬೆಳಗಾವಿ: ಸಬ್​ ಕಾ ಸಾಥ್ – ಸಬ್​ ಕಾ ವಿಕಾಸ್ ಮಂತ್ರದ ಸ್ಫೂರ್ತಿಯಾದ ಭಗವಾನ್ ಬಸವೇಶ್ವರ ಅವರಿಗೆ ನಮಸ್ಕಾರಗಳು ಎಂದು ಹೇಳುತ್ತಾ ಕನ್ನಡದಲ್ಲೇ ಮಾತು ಆರಂಭಿಸಿದ ಪ್ರಧಾನಿ ಮೋದಿ, ಇದು ಕಿತ್ತೂರು ರಾಣಿ ಚೆನ್ನಮ್ಮ, ಕ್ರಾಂತಿವೀರ ಸಂಗೋಳ್ಳಿ ರಾಯಣ್ಣರ ನಾಡು. ಇಲ್ಲಿ ಭೇಟಿ ನೀಡುವುದೆಂದರೆ ತೀರ್ಥಯಾತ್ರೆ ಕೈಗೊಂಡಂತೆ ಎಂದು ಹೇಳಿದರು.

    ಅವರು ಕುಂದಾನಗರಿಯ ಮಾಲಿನಿ ಸಿಟಿಯಲ್ಲಿ ನಡೆದ ಸಮಾವೇಶದಲ್ಲಿ ಪಿಎಂ ಕಿಸಾನ್ ಯೋಜನೆಯ ಹಣ ಬಿಡುಗಡೆ, ವಿವಿಧ ಯೋಜನೆಗೆಳು ಲೋಕಾರ್ಪಣೆ ಹಾಗೂ ಶಂಕಸ್ಥಾಪನೆಗೊಳಿಸಿ ಮಾತನಾಡುತ್ತಾ, ಇನ್ನು ಮುಂದಿನ ದಿನಗಳಲ್ಲಿ ಬೆಳಗಾವಿಯ ಜಿಲ್ಲೆಯ ಅಭಿವೃದ್ಧಿಗೆ ಹೊಸ ಗತಿ ಸಿಗಲಿದೆ ಎಂದು ಹೇಳಿದರು.

    ಇದನ್ನೂ ಓದಿ: ನನ್ನ ಜನ್ಮದಿನದಂದು ವಿಮಾನ ನಿಲ್ದಾಣ ಉದ್ಘಾಟನೆಗೆ ಪ್ರಧಾನಿ ಬಂದಿರುವುದು ಸಂತಸ ತಂದಿದೆ; ಬಿಎಸ್​ವೈ

    ಭಾರತದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸಣ್ಣ ರೈತರಿದ್ದಾರೆ. ಇದೀಗ ಪಿಎಂ ಕಿಸಾನ್ ಹಣದ ಮೂಲಕ ಸಣ್ಣ ರೈತರಿಗೆ ಹೆಚ್ಚಿನ ಸಹಾಯ ಆಗುತ್ತಿದೆ. ಜನರ ಮುಂದೆ ಕೈಚಾಚುವ ಪರಿಸ್ಥಿತಿ ರೈತರಿಗೆ ಬರುವುದಿಲ್ಲ. ಭಾರತದ ಭವಿಷ್ಯದ ದೃಷ್ಟಿಯಿಂದ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ಕಿಸಾನ್ ಕ್ರೆಡಿಟ್ ಕಾರ್ಡ್​ನಿಂದ ರೈತರಿಗೆ ಅನುಕೂಲ ಆಗುತ್ತಿದೆ ಎಂದು ಹೇಳಿದರು.

    ಇದೇ ವೇಳೆ ಕಾಂಗ್ರೆಸ್ ಸರ್ಕಾರವನ್ನು ಟೀಕಿಸುತ್ತಾ, ಕಾಂಗ್ರೆಸ್ ಬಿಡುಗಡೆ ಮಾಡಿದ ಹಣ ಯಾರಿಗೂ ಪೂರ್ಣವಾಗಿ ತಲುಪುತ್ತಿರಲಿಲ್ಲ. ಆದರೆ ಪಿಎಂ ಕಿಸಾನ್ ಯೋಜನೆಯ ಹಣ ರೈತರ ಖಾತೆಗೆ ನೇರವಾಗಿ ಜಮೆ ಆಗುತ್ತಿದೆ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ರೈತರನ್ನು ಕಡೆಗಣಿಸಿತ್ತು ಎಂದರು.

    ಎಥೆನಾಲ್ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ಬಜೆಟ್​ನಲ್ಲಿ ವಿಶೇಷ ಅನುದಾನ ಘೋಷಿಸಿದ್ದರಿಂದ ಕಬ್ಬು ಬೆಳಗಾರರಿಗೆ ಹೆಚ್ಚಿನ ಸಹಾಯ ಆಗುತ್ತಿದೆ. ಹೆಚ್ಚು ಕಬ್ಬು ಬೆಳೆ ಬೆಳಯುವುದರಿಂದ ಎಥೆನಾಲ್ ಉತ್ಪಾದನೆಗೆ ಸಹಾಯವಾಗುತ್ತದೆ ಎಂದು ಹೇಳಿದರು.

    ಇದನ್ನೂ ಓದಿ: ಕುಂದಾನಗರಿಯಲ್ಲಿ ಪ್ರಧಾನಿ ರೋಡ್ ಷೋ; ದಾರಿಯುದ್ದಕ್ಕೂ ಕೇಳಿ ಬಂದ ಮೋದಿ… ಮೋದಿ ಜೈಕಾರ

    ಕರ್ನಾಟಕದ ಸಂಪರ್ಕ ವ್ಯವಸ್ಥೆಗೆ ಹೆಚ್ಚಿನ ಪಾಮುಖ್ಯತೆಯನ್ನು ನೀಡಿದ್ದೇವೆ. ಇಂದು ದೇಶದಲ್ಲಿ 45 ಸಾವಿರ ಕೋಟಿ ರೂ. ಮೌಲ್ಯದ ರೈಲ್ವೆ ಕಾಮಾಗಿರಿ ಪ್ರಗತಿಯಲ್ಲಿದೆ. ರೈಲ್ವೇ ನಿಲ್ದಾಣದ ಅಭಿವೃದ್ಧಿಯಿಂದ ಎಲ್ಲರ ಅಭಿವೃದ್ಧಿ ಆಗುತ್ತದೆ. ದೇಶದಲ್ಲಿ ರೈಲ್ವೇ ಸಂಪರ್ಕ ಶಕ್ತಿಯುತಗೊಳಿಸುತ್ತಿದ್ದು, ಅತ್ಯಾಧುನಿಕ ಸೌಲಭ್ಯದ ರೈಲ್ವೇ ನಿಲ್ದಾಣ ನಿರ್ಮಾಣ ಮಾಡುತ್ತಿದ್ದೇವೆ ಎಂದು ಮೋದಿ ಹೇಳಿದರು.

    ಮಾತಿನ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಉಲ್ಲೇಖಿಸಿ ಮಾತನಾಡಿದ ಮೋದಿ, ಛತ್ತೀಸಗಢ​ದಲ್ಲಿ ಕಾಂಗ್ರೆಸ್ ಅಧಿವೇಶನ ನಡೆಯುತ್ತಿದೆ. ಅಲ್ಲಿ ಖರ್ಗೆ ಭಾಗವಹಿಸಿದ್ದಾರೆ. ಅವರ ಬಗ್ಗೆ ನನಗೆ ಗೌರವ ಇದೆ. ಆದರೆ ಕಾಂಗ್ರೆಸ್ ಮಾತ್ರ ಹಿರಿಯ ನಾಯಕನಿಗೆ ಗೌರವ ನೀಡುತ್ತಿಲ್ಲ ಎಂದು ಟೀಕಿಸಿದರು.

    ವೇದಿಕೆಯಿಂದ ಪ್ರಧಾನಿ ಮೋದಿ ಹೆಲಿಕಾಪ್ಟರ್ ಮೂಲಕ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ತೆರಳಿ, ಅಲ್ಲಿಂದ ಸಾಂಬ್ರಾ ನಿಲ್ದಾಣದಿಂದ ದೆಹಲಿಯತ್ತ ಪ್ರಯಾಣ ಬೆಳೆಸಲಿದ್ದಾರೆ. ಇದನ್ನೂ ಓದಿ: ತಾಯಿ – ಮಗನನ್ನು ಬಲಿ ತೆಗೆದುಕೊಂಡ ವಾಟರ್ ಹೀಟರ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts