More

    2.94 ಲಕ್ಷ ರೈತರ ಖಾತೆಗೆ ಕಿಸಾನ್ ಸಮ್ಮಾನ್

    ಶಿವಮೊಗ್ಗ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಇದುವರೆಗೆ 1,51,614 ರೈತರಿಗೆ
    ಕೇಂದ್ರದಿಂದ 22,960.26 ಲಕ್ಷ ರೂ. ಹಾಗೂ ರಾಜ್ಯದಿಂದ 1,42,770 ರೈತರಿಗೆ 8,239.32 ಲಕ್ಷ ರೂ. ಜಮಾ
    ಆಗಿದೆ ಎಂದು ಕೃಷಿ ಜಂಟಿ ನಿರ್ದೇಶಕ ಡಾ. ಎಂ.ಕಿರಣ್‌ಕುಮಾರ್ ತಿಳಿಸಿದ್ದಾರೆ.
    ಕೇಂದ್ರ ಸರ್ಕಾರ ರೈತರ ಆದಾಯ ವೃದ್ಧಿಸಲು 2019ರ ಫೆ.1ರಂದು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನು
    ರಾಜ್ಯದಲ್ಲಿ ಜಾರಿಗೊಳಿಸಿದ್ದು, ಈ ಯೋಜನೆಯು ಜಮೀನು ಹೊಂದಿರುವ ರೈತರ ಕುಟುಂಬಗಳ ಆರ್ಥಿಕ ಅಗತ್ಯಗಳನ್ನು ಪೂರೈಸುವ
    ಗುರಿ ಹೊಂದಿದೆ ಎಂದಿದ್ದಾರೆ.
    ಯೋಜನೆಯ ಮಾರ್ಗಸೂಚಿಯಂತೆ ಭೂ ಒಡೆತನ ಹೊಂದಿರುವ ಪ್ರತಿ ಅರ್ಹ ರೈತ(ಸಣ್ಣ, ಅತಿಸಣ್ಣ, ಮಧ್ಯಮ, ದೊಡ್ಡ ರೈತರು)
    ಕುಟುಂಬಕ್ಕೆ ಒಂದು ವರ್ಷಕ್ಕೆ 6 ಸಾವಿರ ರೂ.ಗಳನ್ನು ಪ್ರತಿ 4 ತಿಂಗಳಿಗೊಮ್ಮೆ 3 ಕಂತುಗಳಲ್ಲಿ ಕೇಂದ್ರ ಸರ್ಕಾರದಿಂದ ಹಾಗೂ 2
    ಕಂತುಗಳಲ್ಲಿ ನಾಲ್ಕು ಸಾವಿರ ರೂ. ರಾಜ್ಯ ಸರ್ಕಾರದಿಂದ ನೇರವಾಗಿ ರೈತರ ಖಾತೆಗೆ ಜಮಾ ಮಾಡಲಾಗುತ್ತಿದೆ. ಈಗಾಗಲೇ
    ಜಿಲ್ಲೆಯಲ್ಲಿ ರೈತರ ಖಾತೆಗೆ 10 ಕಂತುಗಳ ಹಣ ಜಮೆ ಆಗಿದೆ ಎಂದು ತಿಳಿಸಿದ್ದಾರೆ.
    ಅರ್ಹರಿಗೆ ವಿಶಿಷ್ಟ ಗುರುತಿನ ಸಂಖ್ಯೆ: ಅರ್ಹ ರೈತರ ಪಟ್ಟಿಯನ್ನು ಫ್ರೂಟ್ಸ್ ಪೋರ್ಟಲ್ನಲ್ಲಿ ಪಿಎಂ ಎನ್ನುವ ವಿಶಿಷ್ಟ ಗುರುತಿನ
    ಸಂಖ್ಯೆಯನ್ನು ನೀಡಲಾಗುವುದು. ನೋಂದಣಿಯಾದ ಅರ್ಹ ರೈತರ ಘೋಷಣೆಗಳಿಗೆ ರಾಜ್ಯ ಸರ್ಕಾರದಿಂದ ಎಕ್ಸ್‌ಎಂಎಲ್
    ರಚನೆಯಾಗಿ ಕೇಂದ್ರ ಸರ್ಕಾರದ ಪಿಎಫ್‌ಎಂಎಸ್ ಮೂಲಕ ರೈತರ ಖಾತೆಗೆ ನೇರವಾಗಿ ಮೂರು ಸಮ ಕಂತುಗಳಲ್ಲಿ 6 ಸಾವಿರ
    ರೂ. ಜಮೆಯಾಗುವುದು. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ವಾರ್ಷಿಕವಾಗಿ 10 ಸಾವಿರ ರೂ. ರೈತರ ಖಾತೆಗೆ ಜಮಾ
    ಆಗುವುದು. ಜಿಲ್ಲೆಯ ಅರ್ಹ ರೈತರು ಈ ಯೋಜನೆಯ ಸದುಪಯೋಗ ಪಡೆಯಬೇಕೆಂದು ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts