More

    ಪ್ರಧಾನಿ ನಿರ್ಧಾರ ಶ್ಲಾಘನೀಯ

    ಉಳ್ಳಾಗಡ್ಡಿ-ಖಾನಾಪುರ: ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡ ದೂರದೃಷ್ಟಿಯುಳ್ಳ ನಿರ್ಧಾರದಿಂದ ದೇಶದಲ್ಲಿ ಕರೊನಾ ಹಾವಳಿ ಮಿತಿ ಮೀರಿಲ್ಲ ಎಂದು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದ್ದಾರೆ.

    ಸಮೀಪದ ಇಸ್ಲಾಂಪುರ, ಶಹಾಬಂದರ, ಹಾಗೂ ಚಿಕ್ಕಲದಿನ್ನಿ ಗ್ರಾಮಗಳಲ್ಲಿ ಶುಕ್ರವಾರ ಕರೊನಾ ಜಾಗೃತಿ ಸಭೆ ಉದ್ದೇಶಿಸಿ ಮಾತನಾಡಿದರು. ಕೇಂದ್ರ ಸರ್ಕಾರ ಜನಧನ ಹಾಗೂ ಉಜ್ವಲಾ ಯೋಜನೆಯಡಿ ಗ್ಯಾಸ್ ಸಿಲಿಂಡರ್ ಪಡೆದ ಫಲಾನುಭವಿಗಳ ಖಾತೆಗಳಿಗೆ ಹಣ ವರ್ಗಾಯಿಸಿದ್ದು, ಸದುಪಯೋಗ ಪಡೆದುಕೊಳ್ಳ ಬೇಕು. ಬ್ಯಾಂಕ್ ಮತ್ತು ಪಡಿತರ ಧಾನ್ಯ ಪಡೆಯುವ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿಸಿದರು. ರಾಜ್ಯದಲ್ಲಿ ಕರೊನಾ ವೈರಸ್ ಹಾವಳಿಗೆ ಅಂತ್ಯ ಹಾಡುವುದು ಜನರ ಕೈಯಲ್ಲಿದೆ. ಹಾಗಾಗಿ ಮನೆಯಲ್ಲೇ ಇದ್ದು ಮುಂಜಾಗ್ರತೆ ವಹಿಸಿದರೆ ಕರೊನಾ ಸೋಂಕಿಗೆ ಅದೇ ಮದ್ದು ಎಂದು ತಿಳಿಸಿದರು. ಮಾಜಿ ಸಚಿವ ಶಶಿಕಾಂತ ನಾಯಿಕ, ಯುವ ಧುರೀಣರಾದ ರವಿ ಹಂಜಿ, ಡಾ.ರಾಜೇಂದ್ರ ನೇರ್ಲಿ, ಶ್ರೀಶೈಲ ಯಮಕನಮರಡಿ, ಬಸವರಾಜ ಕರಡಿ, ಗೌಡಪ್ಪ ಪಾಟೀಲ, ಅಪ್ಪಣ್ಣ ಬೊಮ್ಮನವರ, ಕಲಗೌಡ ಪಾಟೀಲ, ಬಸವರಾಜ ಪಾಟೀಲ, ಡಾ.ಎಸ್.ಎಸ್.ಸಾಯನ್ನವರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts