ಪ್ರಾಥಮಿಕ ಶಾಲೆಗಳಲ್ಲಿ ಸ್ಕೌಟ್, ಗೈಡ್ಸ್ ಆರಂಭಿಸಲು ಶಿಕ್ಷಕರಿಗೆ ತರಬೇತಿ

ಚನ್ನಗಿರಿ: ಪ್ರಾಥಮಿಕ ಶಾಲಾ ಹಂತದಲ್ಲಿ ಸ್ಕೌಟ್ ಮತ್ತು ಗೈಡ್ಸ್ ಘಟಕ ಪ್ರಾರಂಭಿಸಲು ಶಿಕ್ಷಕರಿಗೆ ವಿಶೇಷ ತರಬೇತಿ ಕೊಟ್ಟು, ಸೂಚನೆ ನೀಡಲಾಗಿದೆ ಎಂದು ಶಿಕ್ಷಣ ಸಂಯೋಜಕ ಬಿ.ಯು. ಕುಬೇರಪ್ಪ ತಿಳಿಸಿದರು.

ತಾಲೂಕಿನ ಸಂತೇಬೆನ್ನೂರು ಸಮೀಪದ ಎಸ್‌ಬಿಅರ್ ಕಾಲನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಸಂತೇಬೆನ್ನೂರು 1 ಮತ್ತು 2 ಹಾಗೂ ಹಿರೇಕೊಗಲೂರು ಕ್ಲಸ್ಟರ್‌ನ ಪ್ರಾಥಮಿಕ ಶಿಕ್ಷಕರಿಗೆ ಏರ್ಪಡಿಸಿದ್ದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

ಕಲಿಕಾ ಕ್ಲಷ್ಟಾಂಶಗಳ ಬಗ್ಗೆ ಶಿಕ್ಷಕರೊಂದಿಗೆ ಚರ್ಚಿಸಿ ಇಲಾಖೆಯ ಯುಡೈ ಪ್ಲಸ್ ಆನ್‌ಲೈನ್ ಮಾಹಿತಿ ನೀಡಲಾಗಿದೆ. ಇನ್‌ಸ್ಪೈರ್ ಅವಾರ್ಡ್ ಆಯ್ಕೆಯಾದ ಮಕ್ಕಳು ಮಾದರಿಗಳನ್ನು ಆನ್‌ಲೈನ್ ಪೋರ್ಟಲ್‌ನಲ್ಲಿ ಶಿಕ್ಷಕರು ಅಪ್‌ಡೆಟ್ ಮಾಡಬೇಕು ಎಂದರು.

ಐದರಿಂದ 9ನೇ ತರಗತಿ ಮೌಲ್ಯಾಂಕನ ಪರೀಕ್ಷೆಯ ಪೂರ್ವ ಸಿದ್ಧತೆ ಮಕ್ಕಳಿಗೆ ಮಾಡಬೇಕು. ಪರೀಕ್ಷೆ 6 ಮತ್ತು 12ನೇ ತರಗತಿ ಮಕ್ಕಳು ಭಾಗವಹಿಸಿ, ಅಭಿನಂದನಾ ಪತ್ರ ಪಡೆಯಬೇಕು. ಜನವರಿ 5ರಂದು ತಾಲೂಕಿನಲ್ಲಿ ಆಯ್ದ ಗ್ರಾಪಂಗಳಲ್ಲಿ 5ನೇ ತರಗತಿ ಮಕ್ಕಳಿಗೆ ಗಣಿತ ಪರೀಕ್ಷೆಯನ್ನು ಗ್ರಾಪಂ ಸಹಯೊಗದೊಂದಿಗೆ ನಡೆಸಬೇಕು ಎಂದು ಹೇಳಿದರು.

ಮಕ್ಕಳಿಗೆ ಆಂಗ್ಲ ಭಾಷಾ ಕೌಶಲ ರೂಢಿಸಬೇಕು. ಕಲಿಕಾ ಬಲವರ್ಧನೆಗೆ ಕೈಪಿಡಿ ಪುಸ್ತಕ ಶಿಕ್ಷರಿಗೆ ನೀಡಲಾಗಿದೆ. ತರಗತಿಯಲ್ಲಿ ನಿಯಮ ಪ್ರಕಾರ ಅನುಷ್ಠಾನ ಮಾಡಬೇಕು. ಶಾಲೆಯಿಂದ ಹೊರಗೆ ಉಳಿದ ಮಕ್ಕಳನ್ನು ಶಾಲೆಗೆ ಕರೆತರುವಂತೆ ಸೂಚಿಸಿದರು.

ಸಿಆರ್‌ಪಿ ಶಂಕರ್‌ಗೌಡ, ತಿಮ್ಮೇಶ್, ಕುಸುಮಾ, ಮುಖ್ಯಶಿಕ್ಷಕ ನಾಗರಾಜ್, ಶರಣಪ್ಪ, ಸಂಪನ್ಮೂಲ ವ್ಯಕ್ತಿ ನರಸಿಂಹ ಮೂರ್ತಿ ಇತರರಿದ್ದರು.

Share This Article

ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಇಷ್ಟೆಲ್ಲ ಪ್ರಯೋಜನಗಳಿವೆಯಾ? ಇಲ್ಲಿದೆ ಉಪಯುಕ್ತ ಮಾಹಿತಿ….

ಇಂದು ಬಹುತೇಕರು ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಮಾಡುತ್ತಿದ್ದಾರೆ. ಆದರೆ, ಮೊದ ಮೊದಲು ಹೆಚ್ಚಿನ…

ನೀವು ಎಷ್ಟು ಆರೋಗ್ಯವಂತರೆಂದು ತಿಳಿಯಲು ನಿಮ್ಮ ನಾಲಿಗೆ ಬಣ್ಣ ಚೆಕ್​ ಮಾಡಿ! ಈ ಬಣ್ಣದಲ್ಲಿದ್ರೆ ತುಂಬಾ ಡೇಂಜರ್​!

ಪ್ರತಿಯೊಬ್ಬರೂ ಆರೋಗ್ಯವಾಗಿರಲು ಬಯಸುತ್ತಾರೆ. ಏಕೆಂದರೆ, ಆರೋಗ್ಯವೇ ಭಾಗ್ಯ. ಎಲ್ಲ ಇದ್ದು ಆರೋಗ್ಯವೇ ಇಲ್ಲದಿದ್ದರೆ ಏನು ಪ್ರಯೋಜನಾ?…

ನಿಮ್ಮ ಜೀವಕ್ಕೆ ಅಪಾಯವನ್ನುಂಟುಮಾಡುವ ಈ 5 ಜನರ ಬಳಿ ನೀವು ಎಂದಿಗೂ ಹೋಗಬೇಡಿ

ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಚಾಣಕ್ಯ ತಿಳಿಯದ ವಿಷಯವು…