More

    ಜಾತಿಗಳನ್ನು ಹುಟ್ಟುಹಾಕಿದ್ದು ಪೂಜಾರಿಗಳೇ ಹೊರತು ದೇವರಲ್ಲ: RSS ಮುಖ್ಯಸ್ಥ ಮೋಹನ್​ ಭಾಗವತ್ ಹೇಳಿಕೆ​

    ಮುಂಬೈ: ದೇಶದಲ್ಲಿ ಆತ್ಮಸಾಕ್ಷಿ ಮತ್ತು ಪ್ರಜ್ಞೆ ಎಲ್ಲವೂ ಒಂದೇ ಆದರೆ, ಅಭಿಪ್ರಾಯಗಳು ವಿಭಿನ್ನ ಎಂದು ರಾಷ್ಟ್ರೀಯ ಸ್ವೇವಕ ಸಂಘ (ಆರ್​ಎಸ್​ಎಸ್​)ದ ಮುಖ್ಯಸ್ಥ ಮೋಹನ್​ ಭಾಗವತ್​ ಭಾನುವಾರ (ಫೆ.5) ತಿಳಿಸಿದರು.

    ಮುಂಬೈನ ರವೀಂದ್ರ ನಾಟ್ಯ ಮಂದಿರದ ಸಭಾಂಗಣದಲ್ಲಿ ಸಂತ ಶಿರೋಮಣಿ ರೋಹಿದಾಸರ 647ನೇ ಜನ್ಮದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

    ನಾವು ನಮ್ಮ ಜೀವನಕ್ಕಾಗಿ ಸಂಪಾದನೆ ಮಾಡುವಾಗ ಸಮಾಜದ ಕಡೆಗೆ ನಮ್ಮ ಜವಾಬ್ದಾರಿಯು ಇರಬೇಕು. ಪ್ರತಿಯೊಂದು ಕೆಲಸವು ಕೂಡ ಸಮಾಜದ ಒಳಿತಿಗಾಗಿ ಇರುವಾಗ, ಯಾವುದೇ ಕೆಲಸವು ಹೇಗೆ ದೊಡ್ಡದಾಗಿದೆ ಮತ್ತು ಚಿಕ್ಕದಾಗಿದೆ ಅಥವಾ ವಿಭಿನ್ನವಾಗಿರುತ್ತದೆ? ಎಲ್ಲವು ಕೂಡ ಒಂದೇ ಎಂದರು.

    ದೇವರಿಗೆ ನಾವೆಲ್ಲ ಸಮಾನರು. ಇಲ್ಲಿ ಯಾವುದೇ ಜಾತಿ ಅಥವಾ ವರ್ಗ ಅಂತ ಇಲ್ಲ. ಇದನ್ನು ದೇವರು ಸೃಷ್ಟಿ ಮಾಡಿದ್ದಲ್ಲ, ಇಂತಹ ವ್ಯತ್ಯಾಸಗಳನ್ನು ನಮ್ಮ ಪುರೋಹಿತರು ಹುಟ್ಟುಹಾಕಿದರು. ಇದು ತಪ್ಪು ಎಂದು ಮೋಹನ್​ ಭಾಗವತ್​ ಅಭಿಪ್ರಾಯ ವ್ಯಕ್ತಪಡಿಸಿದರು. ಅಲ್ಲದೆ, ದೇಶದಲ್ಲಿ ದೇಶದಲ್ಲಿ ಆತ್ಮಸಾಕ್ಷಿ ಮತ್ತು ಪ್ರಜ್ಞೆ ಎಲ್ಲವೂ ಒಂದೇ ಆಗಿದ್ದು, ಪ್ರತಿಯೊಬ್ಬ ಅಭಿಪ್ರಾಯಗಳು ಭಿನ್ನವಾಗಿರುತ್ತದೆ ಎಂದರು.

    ತುಳಸಿದಾಸ್, ಕಬೀರ್ ಮತ್ತು ಸೂರದಾಸ್‌ಗಿಂತ ಸಂತ ರೋಹಿದಾಸ್ ಅವರು ಹೊಸ ಎತ್ತರವನ್ನು ಹೊಂದಿದ್ದಾರೆ. ಆದ್ದರಿಂದ ಅವರನ್ನು ಸಂತ ಶಿರೋಮಣಿ ಎಂದು ಪರಿಗಣಿಸಲಾಗಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥರು ಹೇಳಿದರು. ಶಾಸ್ತ್ರದಲ್ಲಿ ಬ್ರಾಹ್ಮಣರನ್ನು ಗೆಲ್ಲಲು ಸಾಧ್ಯವಾಗದಿದ್ದರೂ, ಸಂತ ರೋಹಿದಾಸ್ ಅವರು ಅನೇಕರ ಹೃದಯಗಳನ್ನು ಮುಟ್ಟಲು ಸಮರ್ಥರಾಗಿದ್ದರು ಎಂದರು. (ಏಜೆನ್ಸೀಸ್​)

    ಪ್ರಧಾನಿ ಮೋದಿ ಸ್ವಾಗತಿಸಲು ಗುಬ್ಬಿ ಜನತೆಯಿಂದ ತಯಾರಾಯ್ತು ಅಡಕೆ ಪೇಟ, ಅಡಕೆ ಹಾರ

    ಪಠಾಣ್​ ಸಿನಿಮಾ ಇಷ್ಟ ಆಗಲಿಲ್ಲ ಎಂದ ಮಗುವಿಗೆ ಶಾರುಖ್​ ಖಾನ್​ ಕೊಟ್ಟ ಉತ್ತರ ವೈರಲ್!​

    ರಾಜ್ಯದಲ್ಲಿ ಗುಜರಿ ನೀತಿ ಜಾರಿ ಅಧಿಕೃತ ಆರಂಭ: ವಾಹನ ಸ್ಕ್ರ್ಯಾಪಿಂಗ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ; ವಾರ್ಷಿಕ 10 ಕೋಟಿ ವಹಿವಾಟು ಇರೋರಿಗೆ ಅವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts