More

    ಕರೊನಾ ನಿಗ್ರಹಕ್ಕೆ ‘ಮಾನವ’ ಬಲಿ; ದೇವಿಯ ಇಷ್ಟಾರ್ಥ ಪೂರೈಸಿದೆ ಎಂದ ಅರ್ಚಕ

    ಕಟಕ್: ಮನುಷ್ಯನ ಬಲಿ ನೀಡಿದರೆ ಕರೊನಾ ವೈರಸ್ ನಾಶವಾಗುತ್ತದೆ ಎಂದು ದೇವಿ ಕನಸಿನಲ್ಲಿ ಹೇಳಿದಳೆಂದು ದೇವಾಲಯದ ಅರ್ಚಕನೋರ್ವ ವ್ಯಕ್ತಿಯ ತಲೆಯನ್ನೇ ಕತ್ತರಿಸಿದ ವಿಲಕ್ಷಣ ಘಟನೆಯೊಂದು ಒಡಿಶಾದ ಕಟಕ್‌ನಲ್ಲಿನ ನಡೆದಿದೆ.
    ದೇವರನ್ನು ಸಮಾಧಾನಪಡಿಸಲು ಅರ್ಚಕ ಬುಧವಾರ ರಾತ್ರಿ ದೇವಾಲಯದ ಆವರಣದಲ್ಲಿ ಸ್ಥಳೀಯನ ತಲೆಯನ್ನು ಕತ್ತರಿಸಿದ ನಂತರ ಪೊಲೀಸರಿಗೆ ಶರಣಾಗಿದ್ದಾನೆ. ಒಡಿಶಾದ ಕಟಕ್ ಜಿಲ್ಲೆಯ ನರಸಿಂಗ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬಂಧಹುಡ ಬಳಿಯ ದೇವಾಲಯವೊಂದರಲ್ಲಿ ಈ ಘಟನೆ ನಡೆದಿದೆ.
    ಆರೋಪಿ ಅರ್ಚಕನನ್ನು ಬಂಧಾ ಮಾ ಬುದ್ಧ ಬ್ರಾಹ್ಮಣಿ ದೇವಾಲಯದ ಅರ್ಚಕ ಸಂಸಾರಿ ಓಜಾ (72) ಎಂದು ಗುರುತಿಸಲಾಗಿದೆ. ಮೃತನನ್ನು ಸರೋಜ್​​ಕುಮಾರ್ ಪ್ರಧಾನ್ (52) ಎಂದು ಗುರುತಿಸಲಾಗಿದೆ. ಆರೋಪಿ ಪ್ರಕಾರ, ‘ಬಲಿದಾನ’ ಕುರಿತು ದೇವಸ್ಥಾನದಲ್ಲಿ ಆತನ ಮತ್ತು ಪ್ರಧಾನ್ ನಡುವೆ ವಾಗ್ವಾದ ನಡೆದಿದೆ. ವಾದವು ತಾರಕಕ್ಕೇರುತ್ತಿದ್ದಂತೆ, ಓಜಾ ಆತನಿಗೆ ತೀಕ್ಷ್ಣವಾದ ಆಯುಧದಿಂದ ಹೊಡೆದಿದ್ದಾನೆ. ತಲೆಗೆ ಹೊಡೆತ ಬಿದ್ದ ನಂತರ ಆ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

    ಇದನ್ನೂ ಓದಿ: ಮಿಡತೆ ದಾಳಿ ತಡೆಗೆ ಡ್ರೋನ್ ಬಳಕೆ

    ವಿಚಾರಣೆ ವೇಳೆ ಅರ್ಚಕ ತನ್ನ ಕನಸಿನಲ್ಲಿ ದೇವರು ಬಂದು ಮಾನವ ಬಲಿ ಕೇಳಿದ್ದರಿಂದ ತಾನು ದೇವರಿಂದ ಆದೇಶ ಪಡೆದ ನಂತರ ಕೊಲೆ ಮಾಡಿರುವುದಾಗಿ ಹೇಳಿದ್ದಾನೆ, ಕರೊನಾ ವೈರಸ್ ನಾಶಕ್ಕೆ ದೇವರು ಮಾನವ ಬಲಿದಾನ ಕೇಳಿತ್ತು ಎಂದು ಹೇಳಿದ್ದಾನೆ.
    ಕೊಲೆಗೆ ಬಳಸಿದ ಮಚ್ಚನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಘಟನೆ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಗ್ರಾಮದ ವ್ಯಾಪ್ತಿಯಲ್ಲಿರುವ ಮಾವಿನ ತೋಟಕ್ಕೆ ಸಂಬಂಧಿಸಿದಂತೆ ಅರ್ಚಕ ಮತ್ತು ಮೃತ ವ್ಯಕ್ತಿಯ ಮಧ್ಯೆ ದೀರ್ಘಕಾಲದ ಜಗಳವಿತ್ತು ಎಂದೂ ಗ್ರಾಮಸ್ಥರು ತಿಳಿಸಿದ್ದಾರೆ.
    ಘಟನೆ ನಡೆದ ಸಂದರ್ಭದಲ್ಲಿ ಆರೋಪಿ ಅತಿಯಾಗಿ ಪಾನಮತ್ತನಾಗಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮರುದಿನ ಬೆಳಗ್ಗೆ ಅವನಿಗೆ ಕುಡಿದ ಅಮಲು ಇಳಿದಾಗ ತಪ್ಪನ್ನು ಒಪ್ಪಿಕೊಂಡು ಪೊಲೀಸರಿಗೆ ಶರಣಾಗಿದ್ದಾನೆ ಎಂದು ಡಿಐಜಿ ಆಶಿಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
    ದೇವರಿಗೆ ಮಾನವ ಬಲಿ ನೀಡುವುದರಿಂದ ಕರೊನಾ ವೈರಸ್ ನಾಶವಾಗುತ್ತೆ ಎನ್ನುವ ಅರ್ಚಕನ ಮಾತು ಕೇಳಿದರೆ ಆತ ಮಾನಸಿಕ ಅಸ್ವಸ್ಥನಾಗಿರುವಂತೆ ಕಂಡುಬರುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

    ಎಸ್​ಇಬಿಐನಲ್ಲಿ ಇಂಟರ್ನ್​​ಷಿಪ್ ಮಾಡಲು ಅರ್ಹತೆಗಳೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts