More

    ಪುರೋಹಿತರ ಸಂಘ ಜಿಲ್ಲಾ ಘಟಕ ಅಸ್ತಿತ್ವಕ್ಕೆ ನಾಳೆ ಪಣಂಬೂರು ದೇವಳದಲ್ಲಿ ಉದ್ಘಾಟನೆ

    ಮಂಗಳೂರು: ತ್ರಿಮತಸ್ತ ಬ್ರಾಹ್ಮಣ ಸಮುದಾಯದ ಅರ್ಚಕರು, ಪುರೋಹಿತರು ಮತ್ತು ಸಹಾಯಕರನ್ನೊಳಗೊಂಡ ರಾಜ್ಯ ಅಸಂಘಟಿತ ಪುರೋಹಿತ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಘಟಕ ರಚನೆಯಾಗಿದೆ. ಸಂಘದ ಉದ್ಘಾಟನೆ ಜುಲೈ 25ರಂದು ಪಣಂಬೂರಿನ ಶ್ರೀ ನಂದನೇಶ್ವರ ದೇವಸ್ಥಾದಲ್ಲಿ ಜರುಗಲಿದೆ.

    ಕರ್ನಾಟಕ ಪ್ರದೇಶ ಅಸಂಘಟಿತ ಕಾರ್ಮಿಕ ಪರಿಷತ್ ಅಡಿಯಲ್ಲಿ ರಾಜ್ಯ ಅಸಂಘಟಿತ ಪುರೋಹಿತ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ ನೋಂದಣಿಯಾಗಿದ್ದು, ಡಾ.ಬಿ.ಎಂ.ಅನಂತ ಮೂರ್ತಿ ಸ್ಥಾಪಕಾಧ್ಯಕ್ಷ. ಅವರ ಸೂಚನೆಯಂತೆ ಜಿಲ್ಲಾ ಸಂಘ ರಚಿಸಲಾಗಿದ್ದು, ಈಗಾಗಲೇ 500ಕ್ಕೂ ಹೆಚ್ಚು ಮಂದಿ ನೋಂದಾಯಿಸಿದ್ದಾರೆ. ಉಭಯ ಜಿಲ್ಲೆಗಳಲ್ಲಿ 3000ಕ್ಕೂ ಅಧಿಕ ಅಸಂಘಟಿತ ಪುರೋಹಿತರಿದ್ದು, ಎಲ್ಲರನ್ನೂ ಸೇರಿಸಲಾಗುವುದು ಎಂದು ಸಂಘದ ಅಧ್ಯಕ್ಷ ಪ್ರಕಾಶ ಹೊಳ್ಳ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

    2 ವರ್ಷಗಳ ಕರೊನಾ ಸಂಕಷ್ಟ ಅಸಂಘಟಿತ ಪುರೋಹಿತ ವರ್ಗವನ್ನೂ ಅಸಹಾಯಕರನ್ನಾಗಿಸಿದೆ. ಸರ್ಕಾರವೂ ಸಾಂತ್ವನ ಅಥವಾ ಆರ್ಥಿಕವಾಗಿ ಸಹಾಯ ನೀಡಲು ಸಾಧ್ಯವಾಗದ ಪರಿಸ್ಥಿತಿ ಎದುರಾದ ಹಿನ್ನೆಲೆಯಲ್ಲಿ ಸರ್ಕಾರದ ಸವಲತ್ತು ಪಡೆಯುವ ಉದ್ದೇಶದಿಂದ ಸಂಘ ಸ್ಥಾಪಿಸಲಾಗಿದೆ. ಆಕಸ್ಮಿಕ ಅಪಘಾತ, ತುರ್ತು ಅಥವಾ ವೃದ್ಧಾಪ್ಯ ಸಂದರ್ಭ ಸರ್ಕಾರದಿಂದ ಪಿಂಚಣಿ ರೂಪದಲ್ಲಾದರೂ ನೆರವು ಪಡೆಯುವ ಮೂಲಕ ಅಭದ್ರತೆ ಹೋಗಲಾಡಿಸುವುದು ಎಂದರು.

    ಸಂಘದ ಉಪಾಧ್ಯಕ್ಷ ಸುಭಾಷ್ ಪರಾಂಜಪೆ, ಗೌರವಾಧ್ಯಕ್ಷ ರಘುರಾಮ ರಾವ್ ಕೆ., ಸುಬ್ರಹ್ಮಣ್ಯ ಮಯ್ಯ, ಸೂರ್ಯ ನಾರಾಯಣ ಐತಾಳ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts