More

    ಜಗದಿಂದ ಕಣ್ಮರೆಯಾಗೆಂದು ‘ಕರೊನಾದೇವಿ’ಗೆ ಆಸ್ಸಾಂನಲ್ಲಿ ಪ್ರಾರ್ಥನೆ

    ಗುವಾಹಟಿ: ಕರೊನಾ ವೈರಸ್ ಮಹಾಮಾರಿಯನ್ನು ನಾಶಗೊಳಿಸಲು ಏನೆಲ್ಲ ಮೂಢನಂಬಿಕೆ, ಆಚರಣೆಗಳು ನಡೆಯುತ್ತಿವೆ ನೋಡಿ..!
    ಅರ್ಚಕನೊಬ್ಬ ಭಕ್ತನ ಶಿರಚ್ಛೇದ ಮಾಡಿದ್ದಾಯಿತು. ಈಗ ‘ಕರೊನಾ ದೇವಿ’ಯನ್ನು ಶಾಂತಗೊಳಿಸಲು ಇಲ್ಲಿಯ ಕೆಲವು ಭಾಗದಲ್ಲಿ ಮಹಿಳೆಯರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

    ಇದನ್ನೂ ಓದಿ: ಲಾಕ್​ಡೌನ್​ನಿಂದಾಗಿ ಹಾಸ್ಟೆಲ್​ನಲ್ಲೇ ಉಳಿದ 9 ವರ್ಷದ ಬಾಲಕ ಅನುಭವಿಸಿದ ನರಕಯಾತನೆ…!

    ಜಗತ್ತನ್ನು ರಕ್ಷಿಸಲು ದೇವರಿಗೆ ಕೋರಿ ಪ್ರಾರ್ಥನೆ ಸಲ್ಲಿಸುವುದ ವಾಡಿಕೆ. ಆದರೆ ಆ ಪರಿಕಲ್ಪನೆ ಇಲ್ಲಿ ಬದಲಾಗಿದೆ. ಕರೊನಾದಿಂದ ಜಗತ್ತನ್ನು ಮುಕ್ತವಾಗಿಸಲು ಕೋರಿ ರಾಜ್ಯದ ಕೆಲವು ಭಾಗಗಳಲ್ಲಿ ಮಹಿಳೆಯರು “ಕರೋನಾ ದೇವಿ ಪೂಜೆ” ಮಾಡಲು ಪ್ರಾರಂಭಿಸಿದ್ದಾರೆ.ಉತ್ತರ ಅಸ್ಸಾಂನ ಬಿಸ್ವಾನಾಥ್ ಜಿಲ್ಲೆಯಲ್ಲಿ ಶನಿವಾರ ಕೆಲವು ಮಹಿಳೆಯರು ನದಿಯ ದಡದಲ್ಲಿ ಪೂಜೆ ನಡೆಸಿದ್ದರು. “ಕರೋನಾ ದೇವಿ” ಪ್ರಾರ್ಥನೆಯ ಮೂಲಕ ಶಾಂತಗೊಂಡರೆ ಮಾತ್ರ ವೈರಸ್ ಪ್ರಪಂಚದಿಂದ ದೂರವಾಗುತ್ತದೆ ಎಂದು ಅವರು ನಂಬಿದ್ದಾರಂತೆ.

    ಇದನ್ನೂ ಓದಿ: ಲಾಕ್​ಡೌನ್ ಅವಧಿಯಲ್ಲಿ ಚೆನ್ನೈ ಪೊಲೀಸರು ಬರೊಬ್ಬರಿ 11 ಕೋಟಿ ರೂ.ದಂಡ ಸಂಗ್ರಹಿಸಿದ್ದಾರಂತೆ…

    “ನಾವು ಕರೋನಾ ದೇವಿಗೆ ಪೂಜೆ ಅರ್ಪಿಸುತ್ತಿದ್ದೇವೆ. ಪೂಜೆ ಮುಗಿದ ನಂತರ, ಗಾಳಿ ಬೀಸುತ್ತದೆ ಮತ್ತು ವೈರಸ್ ಅನ್ನು ನಾಶಪಡಿಸುತ್ತದಂತೆ, ಮಹಿಳೆಯೊಬ್ಬರು ಸುದ್ದಿಗಾರರಿಗೆ ತಿಳಿಸಿದ್ದಾರೆ. “ವೈರಸ್ ಪ್ರಪಂಚದಿಂದ ಕಣ್ಮರೆಯಾಗುವಂತೆ ನಾವು ಎಲ್ಲರಿಗೂ ಪ್ರಾರ್ಥಿಸಲು ಇಲ್ಲಿದ್ದೇವೆ ಎನ್ನುತ್ತಾರಂತೆ ಇಲ್ಲಿಯ ಮಹಿಳೆಯರು.
    COVID-19 “ಶೀತಲಾ” ದೇವಿಯ ಸೃಷ್ಟಿ ಎಂದು ಕೆಲವರು ನಂಬಿದ್ದಾರೆ. ಭಾರತದ ಕೆಲವೆಡೆ, ಜನರು ಸಿಡುಬು ಮುಂತಾದ ಕಾಯಿಲೆಯಿಂದ ಬಳಲುತ್ತಿರುವವರು ರೋಗಮುಕ್ತರಾಗಲು ದೇವಿಗೆ ಪ್ರಾರ್ಥನೆ ಸಲ್ಲಿಸುತ್ತಾರಂತೆ. COVID-19 ಒಂದು “ದೇವತೆ”ಯ ಸೃಷ್ಟಿ ಎಂದು ಸಾಮಾಜಿಕ ಜಾಲತಾಣ ವೈರಲ್ ಆಗುತ್ತಿದ್ದಂತೆ ಬಿಸ್ವಾನಾಥದಲ್ಲಿ ಮಾತ್ರವಲ್ಲ, ಗುವಾಹಟಿ ಸೇರಿದಂತೆ ಆಸ್ಸಾಂನ ಇತರ ಕೆಲವು ಭಾಗಗಳಲ್ಲಿ ಜನರು ಪೂಜೆಯನ್ನು ಅರ್ಪಿಸುತ್ತಿದ್ದಾರೆಂದು ಹೇಳಲಾಗುತ್ತಿದೆ.

    20 ನಿಮಿಷಗಳಲ್ಲಿ ತಿಳಿಯಬಹುದು ಕರೊನಾ ಸೋಂಕು ಪರೀಕ್ಷೆ ಫಲಿತಾಂಶ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts