More

    ಖಾಲಿ ಹುದ್ದೆ ಭರ್ತಿಗೆ ಸರ್ಕಾರದ ಮೇಲೆ ಒತ್ತಡ

    ಮುಂಡರಗಿ: ಶಿಕ್ಷಣ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬುವಂತೆ ಸರ್ಕಾರದ ಮೇಲೆ ಒತ್ತಡ ತರಲಾಗುತ್ತದೆ. ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ನನಗೆ ಸ್ಪೂರ್ತಿ ನೀಡಿದ್ದಕ್ಕೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.

    ವಿಧಾನ ಪರಿಷತ್ ಸದಸ್ಯರಾಗಿ ಎರಡನೇ ಬಾರಿಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಹೊಸ ಪಿಂಚಣಿ ಯೋಜನೆ ರದ್ದುಪಡಿಸುವ ಪ್ರಯತ್ನ ಮುಂದುವರಿಸುತ್ತೇನೆ. ಅನುದಾನಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ ಪಿಂಚಣಿ ಯೋಜನೆ ಜಾರಿಗೊಳಿಸುವುದು, ಕಾಲ್ಪನಿಕ ವೇತನ ಸಮಸ್ಯೆ ಬಗೆಹರಿಸಲು ಯತ್ನಿಸುತ್ತೇನೆ. 1995ರ ನಂತರ ಪ್ರಾರಂಭವಾದ ಶಾಲೆ, ಕಾಲೇಜ್​ಗಳಿಗೆ ಅನುದಾನ ಕೊಡಿಸುವ ಪ್ರಯತ್ನ ಮಾಡಲಾಗುತ್ತದೆ’ ಎಂದರು.

    ಪುರಸಭೆ ನೂತನ ಅಧ್ಯಕ್ಷೆ ಕವಿತಾ ಉಳ್ಳಾಗಡ್ಡಿ, ಉಪಾಧ್ಯಕ್ಷ ಶಿವಪ್ಪ ಚಿಕ್ಕಣ್ಣವರ ಅವರನ್ನು ಸನ್ಮಾನಿಸಲಾಯಿತು. ಬಿಜೆಪಿ ಮುಂಡರಗಿ ಮಂಡಳ ಅಧ್ಯಕ್ಷ ಹೇಮಗಿರೀಶ ಹಾವಿನಾಳ, ಡಂಬಳ ಮಂಡಳ ಅಧ್ಯಕ್ಷ ರವಿ ಕರಿಗಾರ, ಬಿಜೆಪಿ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಪವಿತ್ರಾ ಕಲ್ಲಕುಟಗರ್, ಮುಖಂಡರಾದ ಕೆ.ವಿ. ಹಂಚಿನಾಳ, ಎಸ್.ವಿ. ಪಾಟೀಲ, ದೇವಪ್ಪ ಕಂಬಳಿ, ರಜನಿಕಾಂತ ದೇಸಾಯಿ, ಡಾ.ಕುಮಾರಸ್ವಾಮಿ ಹಿರೇಮಠ, ಲಿಂಗರಾಜಗೌಡ ಪಾಟೀಲ, ಬಸವರಾಜ ಬಿಳಿಮಗ್ಗದ, ಎ.ವಿ. ಹಳ್ಳಿಕೇರಿ, ನಾಗೇಶ ಹುಬ್ಬಳ್ಳಿ, ರಾಘವೇಂದ್ರ ಚಿನ್ನಿ, ಎಸ್.ಆರ್.ಚಿಗರಿ, ಎಂ.ಎಂ. ಹೆಬ್ಬಾಳ, ಎಂ.ಜಿ. ಗಚ್ಚಣ್ಣವರ, ಎಸ್.ಬಿ. ಹಿರೇಮಠ, ಟಿ.ಬಿ. ದಂಡಿನ, ಎಸ್.ಆರ್. ಚಿಗರಿ, ಪವನ ಮೇಟಿ, ರುಕ್ಮಿಣಿ ಸುಣ್ಣಗಾರ, ಜ್ಯೋತಿ ಹಾನಗಲ್ಲ, ಪ್ರಲ್ಹಾದ ಹೊಸಮನಿ, ಪ್ರಶಾಂತಗೌಡ ಪಾಟೀಲ, ದಸ್ತಗೀರಸಾಬ್ ಹೊಸಮನಿ, ನಾಗರಾಜ ಮುರಡಿ, ದೇವು ಹಡಪದ, ಬಸವರಾಜ ಸಂಗನಾಳ ಇತರರು ಇದ್ದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ದೇವಪ್ಪ ಇಟಗಿ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts