More

    ದೇಶದ ಪ್ರತಿಮೂಲೆಗೂ ಆರೋಗ್ಯ ಸೇವೆ ವಿಸ್ತರಣೆ ಅತ್ಯಗತ್ಯ; ಕನ್ನಡದಲ್ಲೇ ಭಾಷಣ ಆರಂಭಿಸಿದ ರಾಷ್ಟ್ರಪತಿ ಕೋವಿಂದ..

    ಚಾಮರಾಜನಗರ: ಸಾಮಾನ್ಯವಾಗಿ ಕರ್ನಾಟಕದ ಮುಖ್ಯಮಂತ್ರಿಗಳು ಹೋಗಲು ಹಿಂಜರಿಯುವ ಚಾಮರಾಜನಗರಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಇಂದು ಆಗಮಿಸಿದ್ದಲ್ಲದೆ, ಕನ್ನಡದಲ್ಲೇ ತಮ್ಮ ಭಾಷಣವನ್ನು ಆರಂಭಿಸಿ, ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.

    ಚಾಮರಾಜನಗರದಲ್ಲಿನ ಚಾಮರಾಜನಗರ ಇನ್​ಸ್ಟಿಟ್ಯೂಟ್​ ಆಫ್​ ಮೆಡಿಕಲ್​ ಸೈನ್ಸಸ್​ (ಸಿಮ್ಸ್​) ಉದ್ಘಾಟನೆ ಮಾಡಿದ ರಾಷ್ಟ್ರಪತಿ ರಾಮನಾಥ ಕೋವಿಂದ, ಕನ್ನಡದಲ್ಲೇ ಮಾತು ಆರಂಭಿಸಿದರು. ನನಗೆ ಕರ್ನಾಟಕಕ್ಕೆ ಬರುವುದು ತುಂಬಾ ಇಷ್ಟ ಎಂದ ಅವರು, ನವರಾತ್ರಿ ಹಬ್ಬದಂದೇ ಸಿಮ್ಸ್​ ಉದ್ಘಾಟನೆ ಆಗುತ್ತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು.

    ಇದನ್ನೂ ಓದಿ: ಮೈಮನ ಪುಳಕಗೊಳಿಸುವ ಚಾರಣ: ಎಲ್ಲಿ, ಹೇಗೆ? ಏನಿರಬೇಕು, ಯಾರಿರಬಾರದು..; ಇಲ್ಲಿದೆ ಮಾಹಿತಿಗಳ ಸಂಪೂರ್ಣ ಹೂರಣ.

    ಚಾಮರಾಜನಗರದಲ್ಲಿ‌ ಮೆಡಿಕಲ್ ಕಾಲೇಜ್ ಆರಂಭವಾಗಿರುವುದು ಖುಷಿಯ ವಿಚಾರ. ಕರೊನಾ ಸಂದರ್ಭದಲ್ಲಿ ವೈದ್ಯರು, ವೈದ್ಯಕೀಯ ಸಿಬ್ಬಂದಿ ಕರೊನಾ‌ ವಾರಿಯರ್ಸ್ ಆಗಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ನಮ್ಮ ದೇಶದ ಹೆಮ್ಮೆಯನ್ನು ಹೆಚ್ಚಿಸಿದ್ದಾರೆ. ದೇಶದ ಅಭಿವೃದ್ಧಿಯಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳು ಭದ್ರ ಬುನಾದಿ ಎಂದ ಅವರು ದೇಶದ ಪ್ರತಿ ಮೂಲೆಗೂ ಆರೋಗ್ಯ ಸೇವೆ ವಿಸ್ತರಿಸುವುದು ಅತ್ಯಂತ ಅಗತ್ಯ ಎಂದು ಅಭಿಪ್ರಾಯಪಟ್ಟರು.

    ಇದನ್ನೂ ಓದಿ: ನಟ ಶಾರುಖ್​ ಖಾನ್​ ಪುತ್ರನ ಜತೆ ಮತ್ತಲ್ಲಿ ಸಿಕ್ಕಿಬಿದ್ದ ಆಕೆ ಯಾರು, ಎಲ್ಲಿಯವಳು?

    ಈ ಸಂದರ್ಭದಲ್ಲಿ ರಾಜ್ಯಪಾಲ ಥಾವರ್​ಚಂದ್ ಗೆಹ್ಲೋತ್​, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರು, ಶಾಸಕರು ಸೇರಿ ಹಲವಾರು ಗಣ್ಯರು ಉಪಸ್ಥಿತರಿದ್ದರು.

    ರಾಜ್ಯದಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ; ನೇಣಿಗೆ ಕೊರಳೊಡ್ಡಿದ ಸಹಾಯಕ ಸಬ್​ ಇನ್​​ಸ್ಪೆಕ್ಟರ್!​

    ಐನೂರು ವರ್ಷದ ಸೊಸೆಯಂದಿರ ಬಾವಿಯಲ್ಲಿ ಈಜಲು ಹೋಗಿ ಸಾವಿಗೀಡಾದ ಬಾಲಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts