More

    ಮಾನವೀಯತೆಯಿಂದ ನಡೆದುಕೊಳ್ಳಿ

    ಹೊಸಪೇಟೆ: ಸರಿಯಾಗಿ ಚಿಕಿತ್ಸೆ ಸಿಗದೇ ಖಾಸಗಿ ಆಸ್ಪತ್ರೆಗಳಲ್ಲಿ ಸಾವುಗಳು ಸಂಭವಿಸುತ್ತ್ತಿವೆ ಎನ್ನುವ ದೂರಿನ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಸೂಚನೆ ನೀಡಿದರು.

    ವೈದ್ಯರ ನಿರ್ಲಕ್ಷ್ಯಯದಿಂದ ಸಾವುಗಳಾಗುತ್ತಿವೆ ಎಂಬ ದೂರಿನ ಹಿನ್ನೆಲೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಖಾಸಗಿ ಆಸ್ಪತ್ರೆಗಳಿಗೆ ಬರುವ ಯಾವುದೇ ರೋಗಿಗಳು ಮತ್ತು ಆ ರೋಗಿಯ ಸಂಬAಧಿಕರೊAದಿಗೆ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯು ಸಹನೆ, ಸಂಯಮ ಮತ್ತು ತಾಳ್ಮೆಯಿಂದ ನಡೆದುಕೊಳ್ಳಬೇಕು. ದುರ್ವರ್ತನೆ ತೋರಬಾರದು. ಮಾನವೀಯತೆಯಿಂದ ನಡೆದುಕೊಳ್ಳಬೇಕು. ಲೋಪ ಎಸಗಿರುವುದು ಕಂಡುಬAದಲ್ಲಿ ಯಾರೇ ಆಗಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಎಸ್ಪಿ ಬಿ.ಎಲ್.ಶ್ರೀಹರಿಬಾಬು ಮಾತನಾಡಿ, ವೈದ್ಯರನ್ನು ದೇವರ ಸಮಾನ ಎಂದು ನಮ್ಮ ಸಮಾಜವು ಗೌರವಯುತ ಸ್ಥಾನ ನೀಡಿದೆ. ಕೆಲವು ವೈದ್ಯರು ಮತ್ತು ಅವರ ಆಸ್ಪತ್ರೆಗಳಲ್ಲಿನ ಸಿಬ್ಬಂದಿ ತೋರುವ ನಿರ್ಲಕ್ಷ್ಯಯದಿಂದಾಗಿ ಸಾವುಗಳು ಸಂಭವಿಸಿ ವೈದ್ಯ ಸಮೂಹವನ್ನೇ ಕೆಟ್ಟ ದೃಷ್ಟಿಯಿಂದ ನೋಡುವಂತಾಗುತ್ತದೆ. ವೈದ್ಯರು ಮತ್ತು ಸಾರ್ವಜನಿಕ ಮಧ್ಯೆ ಇರುವ ನಂಬಿಕೆಗೆ ಧಕ್ಕೆ ಬಾರದೇ ನೋಡಿಕೊಳ್ಳಬೇಕು ಎಂದರು.

    ಡಿಎಚ್‌ಒ ಶಂಕರ್‌ನಾಯ್ಕ ಮಾತನಾಡಿ, ಖಾಸಗಿ ಆಸ್ಪತ್ರೆಗಳು ಕೆಪಿಎಂಇ ಕಾಯ್ದೆಯನುಸಾರವೇ ಇರಬೇಕು. ನಿಯಮ ಮೀರದಂತೆ ಆಸ್ಪತ್ರೆ ನಿರ್ವಹಣೆಯಾಗಬೇಕು. ಇಲ್ಲದಿದ್ದರೆ ಪರವಾನಿಗೆ ರದ್ದುಪಡಿಸಲಾಗುವುದು. ಖಾಸಗಿ ಆಸ್ಪತ್ರೆಯ ಎಲ್ಲಾ ಕೋಣೆಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಬೇಕು. ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರವನ್ನು ಪ್ರದರ್ಶಿಸಿ ಅದೇ ರೀತಿ ಪಾಲನೆ ಮಾಡಬೇಕು. ನಿಗದಿಪಡಿಸಿದ ದರಕ್ಕಿಂತ ಅನವಶ್ಯಕವಾಗಿ ಹೆಚ್ಚಿನ ಹಣ ಪಡೆಯಬಾರದು ಎಂದರು.

    ಅಪ್ರಾಪ್ತ ವಯಸ್ಸಿನ ಮಹಿಳೆಯು ಗರ್ಭಿಣಿ ಎಂದು ಗೊತ್ತಾದಲ್ಲಿ ಮಾಹಿತಿ ನೀಡಿ. ಸಾಂಕ್ರಾಮಿಕ ರೋಗಗಳು, ನಾಯಿ ಕಡಿತ, ಹಾವು ಕಡಿತ ಪ್ರಕರಣಗಳ ಬಗ್ಗೆ ಸಹ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಹೆಣ್ಣು ಭ್ರೂಣ ಲಿಂಗ ಪತ್ತೆ ಹಾಗೂ ಭ್ರೂಣ ಹತ್ಯೆ ಪ್ರಕರಣಗಳು ಕಂಡುಬAದಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದರು. ಖಾಸಗಿ ಆಸ್ಪತ್ರೆಗಳ ಐಎಂಎ ಅಧ್ಯಕ್ಷ ಡಾ.ಶ್ರೀನಿವಾಸ ದೇಶಪಾಂಡೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts