More

    ಎಚ್​ಆರ್​ಡಿ ಸಚಿವಾಲಯ ಇನ್ನು ಶಿಕ್ಷಣ ಸಚಿವಾಲಯ

    ನವದೆಹಲಿ: ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ಶಿಕ್ಷಣ ಸಚಿವಾಲಯ ಎಂದು ಕೇಂದ್ರ ಸರ್ಕಾರ ಮರುನಾಮಕರಣ ಮಾಡಿದೆ. ಈ ಸಂಬಂಧ ಅಧಿಸೂಚನೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಅಂಕಿತ ಹಾಕಿದ್ದಾರೆ. ಡಾ.ಕೆ.ಕಸ್ತೂರಿ ರಂಗನ್ ನೇತೃತ್ವದ ಸಮಿತಿ ಸಿದ್ಧಪಡಿಸಿದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ 2020ರಲ್ಲಿ ಈ ಮರುನಾಮಕರಣದ ಸಲಹೆಯನ್ನು ನೀಡಲಾಗಿತ್ತು. ಅದೀಗ ಅನುಷ್ಠಾನಗೊಂಡಂತಾಗಿದೆ.

    ಶಿಕ್ಷಣ ಸಚಿವಾಲಯ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಯನ್ನು ಕೇಂದ್ರ ಸಚಿವ ಸಂಪುಟ ಜುಲೈ 29ರ ಸಭೆಯಲ್ಲಿ ಅನುಮೋದಿಸಿತ್ತು. ಸಚಿವಾಲಯದ ವೆಬ್​ಸೈಟ್ ಮತ್ತು ಶಿಕ್ಷಣ ಸಚಿವರ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಈ ಬದಲಾವಣೆ ಆಗಸ್ಟ್ 4ರಂದೇ ಆಗಿತ್ತು. ಸರ್ಕಾರಿ ಯಂತ್ರಕ್ಕೆ ಸಂಬಂಧಿಸಿದ ಬದಲಾವಣೆಗಳಿಗೆ ಕ್ಯಾಬಿನೆಟ್ ತೀರ್ಮಾನವಾದರೂ ಅದಕ್ಕೆ ರಾಷ್ಟ್ರಪತಿಯವರ ಅಂಕಿತ ಬೀಳಬೇಕಾದುದು ಅತ್ಯಂತ ಅಗತ್ಯವಾದುದಾಗಿದೆ. ಇದರಂತೆ, ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಆಗಸ್ಟ್ 14ರಂದು ಈ ಮರುನಾಮಕರಣಕ್ಕೆ ಸಮ್ಮತಿ ಸೂಚಿಸಿದರು. ಈ ಸಂಬಂಧಿತ ಗಝೆಟ್​ ನೋಟಿಫಿಕೇಶನ್​ ಸೋಮವಾರ ಪ್ರಕಟವಾಗಿದೆ.

    ಇದನ್ನೂ ಓದಿ: ಡಿಜೆಹಳ್ಳಿ ಗಲಭೆ: ಪಾಷಾಗೆ ಐಸಿಸ್‌ ನಂಟು? ಕಾರ್ಪೋರೇಟರ್‌ಗಳ ಮೇಲೂ ಪೊಲೀಸರ ಕಣ್ಣು- ನೋಟಿಸ್‌ ಜಾರಿ

    ಇಸ್ರೋದ ಮಾಜಿ ಚೇರ್ಮನ್​ ಕೆ.ಕಸ್ತೂರಿ ರಂಗನ್ ನೇತೃತ್ವದ ಸಮಿತಿಗೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸುವ ಹೊಣೆಗಾರಿಕೆಯನ್ನು ಸರ್ಕಾರ ನೀಡಿತ್ತು. ಅದು ನೀಡಿದ ಮೊದಲ ಸಲಹೆಯೇ ಸಚಿವಾಲಯದ ಮರುನಾಮಕರಣವಾಗಿತ್ತು. 2018ರಲ್ಲಿ ಇಂಥದ್ದೇ ಚಿಂತನೆಯನ್ನು ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ಆರ್ಟ್ಸ್ ನ ಚೇರ್​ಮನ್​ ಆಗಿದ್ದ ರಾಮ್ ಬಹಾದುರ್ ರಾಯ್​ ಸರ್ಕಾರದ ಮುಂದೆ ಪ್ರಸ್ತಾಪಿಸಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು. (ಏಜೆನ್ಸೀಸ್)

    ಗೋವಾ ರಾಜ್ಯಪಾಲರು ಮೇಘಾಲಯಕ್ಕೆ, ಮಹಾ ರಾಜ್ಯಪಾಲರಿಗೆ ಗೋವಾ ಹೆಚ್ಚುವರಿ ಹೊಣೆಗಾರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts