ದೇಶದ ಆಸ್ತಿಯಾಗಿ ಮಕ್ಕಳನ್ನ ತಯಾರಿ ಮಾಡಿ: ಕಾಗಿನೆಲೆ ಕನಕ ಗುರು ಪೀಠದ ಶ್ರೀಗಳು ಸಲಹೆ

blank

ಬೆಂಗಳೂರು: ಪಾಲಕರು ತಮ್ಮ ಮಕ್ಕಳನ್ನು ಆಸ್ತಿಗಷ್ಟೇ ವಾರಸುದಾರರನ್ನಾಗಿ ಮಾಡುವ ಬದಲು ದೇಶ ಹಾಗೂ ವಿಶ್ವದ ಆಸ್ತಿಯಾಗಿ ತಯಾರಿ ಮಾಡಬೇಕು ಎಂದು ಕಾಗಿನೆಲೆ ಕನಕ ಗುರು ಪೀಠದ ದೇವದುರ್ಗ ಶಾಖಾ ಮಠದ ಶ್ರೀ ಸಿದ್ದರಾಮನಂದಪುರಿ ಸ್ವಾಮೀಜಿ ಕರೆ ನೀಡಿದ್ದಾರೆ.

ಕನಕ ಶ್ರೀ ಚಾರಿಟಬಲ್ ಟ್ರಸ್ಟ್ ವತಿಯಿಂದ ಭಾನುವಾರ ನಗರದಲ್ಲಿ ನಗರದಲ್ಲಿ ಆಯೋಜಿಸಲಾಗಿದ್ದ ‘ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮದಲ್ಲಿ ಶ್ರೀಗಳು ಅಶೀವರ್ಚನ ನೀಡಿದರು.

ಇದನ್ನೂ ಓದಿ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವಾರ್ಷಿಕೋತ್ಸವ ಇಂದು

ಪಾಲಕರು ತಮ್ಮ ಮಕ್ಕಳ ಬೆಳವಣಿಗೆಗೆ ಸಹಾಯ ಮಾಡಬೇಕೇ ಹೊರತು ಜೀವನ ಪರ್ಯಂತ ಅವರಿಗೆ ಆಸರೆಯಾಗಿ ಇರಬಾರದು. ಅವರನ್ನು ಸ್ವತಂತ್ರವಾಗಿ ಬದುಕುವಂತೆ ಕಲಿಸಬೇಕು. ಮಕ್ಕಳಿಗೆ ಗುಣಮಟ್ಟ ಶಿಕ್ಷಣ ನೀಡಿ ಉತ್ತಮ ವ್ಯಕ್ತಿಯಾಗಿ ತಯಾರಿ ಮಾಡಬೇಕು. ಆಗ ಸಮಾಜದಲ್ಲಿ ಒಳ್ಳೆಯ ಪ್ರಜೆಗಳಾಗಿ ರೂಪಗೊಳ್ಳಲು ಸಾಧ್ಯವಾಗಲಿದೆ. ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ಅಸ್ತ್ರವಾಗಿಸಿಕೊಂಡಾಗ ಮಾತ್ರ ಅವಕಾಶಗಳು ದೊರೆಯುವುದು. ಕನಕಶ್ರೀ ಚಾರಿಟಬಲ್ ಟ್ರಸ್ಟ್ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಕಾರ್ಯ ಶ್ಲಾಘನೀಯ.ಇಂಥ ಸಂಸ್ಥೆಗಳು ಸಮಾಜಕ್ಕೆ ಅವಶ್ಯಕತೆ ಇದೆ ಎಂದು ಶ್ರೀಗಳು ಹೇಳಿದರು.

ಇದನ್ನೂ ಓದಿ: ಧರ್ಮವೊಂದೇ ಎಲ್ಲರ ಆಶಾಕಿರಣ – ರಂಭಾಪುರಿ ಶ್ರೀಗಳ ಅಭಿಮತ -ನಾಗರಸನಹಳ್ಳಿಯಲ್ಲಿ ಇಷ್ಟಲಿಂಗ ಮಹಾಪೂಜೆ 

ಮಾಜಿ ಸಚಿವ ಎಚ್.ಎಂ.ರೇವಣ್ಣ ಮಾತನಾಡಿ, ಮನುಷ್ಯ ಸಮಾಜಮುಖಿಯಾಗಿದ್ದಾಗ ಮಾತ್ರ ಸಮಯದಲ್ಲಿ ಉತ್ತಮ ಸ್ಥಾನ ಪಡೆಯಲು ಸಾಧ್ಯ. ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಅಧ್ಯಯನ ಮಾಡಿ ಉನ್ನತ ಸ್ಥಾನಕ್ಕೆ ಹೋಗಬೇಕು ಎಂದು ಕಿವಿ ಮಾತು ಹೇಳಿದರು. ಆಂಧ್ರಪ್ರದೇಶದ ಅನಂತಪುರ ಸಂಸದ ಗೋರಂಟ್ಲ ಮಾಧವ, ಅಕ್ಕಮಹಾದೇವಿ ವಿವಿಯ ವಿಶ್ರಾಂತ ಕುಲಸಚಿವೆ ಆರ್.ಸುನಂದಮ್ಮ, ನಿವೃತ್ತ ಐಆರ್‌ಎಸ್ ಅಧಿಕಾರಿ ಡಾ.ಜೆ.ಪಿ.ಪ್ರಕಾಶ್ ಮತ್ತಿತರರಿದ್ದರು.

Share This Article

ಬಿಸಿಲಲ್ಲಿ ಸೆಖೆ ತಾಳಲಾರದೆ ICE ನೀರು ಕುಡಿದ್ರೆ ಜೀವಕ್ಕೆ ಅಪಾಯ ಖಂಡಿತ! Summer Health

Summer Health: ನೀರು ಮನುಷ್ಯರಿಗೆ ಬಹಳ ಅವಶ್ಯಕ. ನಾವು ಅನ್ನ ತಿನ್ನದೆ ಬದುಕಬಹುದು, ಆದರೆ ನೀರು…

ತಾಳಲಾರದ ಬೇಗೆ, ತಡೆಯುವುದು ಹೇಗೆ? ಎಸಿ, ಕೂಲರ್ ಈ ಎರಡರಲ್ಲಿ ಯಾವುದು ಬೆಸ್ಟ್​? ಇಲ್ಲಿದೆ ನೋಡಿ ಉತ್ತರ | Summer

Summer: ಇದು ಬೇಸಿಗೆ ಕಾಲ. ಕೇವಲ ಬೇಸಿಗೆ ಅಲ್ಲ ಮುಂದಿನ ಎರಡು ತಿಂಗಳಲ್ಲಿ ಬಿರು ಬೇಸಿಗೆ…

ಒಂದು ಪ್ರೀತಿಯ ಅಪ್ಪುಗೆ ಸಾಕು! ವಾಸಿ ಮಾಡುತ್ತೆ ನಾನಾ ಕಾಯಿಲೆ… hugging

hugging : ಫೆಬ್ರವರಿ 12 ರಂದು ಅಪ್ಪುಗೆಯ ದಿನ, ಅಂದರೆ ಪ್ರೀತಿಪಾತ್ರರನ್ನು ಅಪ್ಪಿಕೊಳ್ಳುವ ಮೂಲಕ ಅವರ…