More

    ಮನೆಯಲ್ಲೇ ಕೇಕ್ ಮಾಡಿ ಹೆಂಡ್ತಿ ಹುಟ್ಟುಹಬ್ಬ ಆಚರಿಸಿದ ಪ್ರೇಮ್ …

    ಇಂದು ನಟಿ-ನಿರ್ಮಾಪಕಿ ರಕ್ಷಿತಾ ಅವರ ಹುಟ್ಟುಹಬ್ಬ. ಪ್ರತೀ ವರ್ಷ ಗ್ರಾಂಡ್ ಆಗಿಯೇ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದ ರಕ್ಷಿತಾ, ಈ ಬಾರಿ ಬಹಳ ಲೋಪ್ರೊಫೈಲ್‌ನಲ್ಲಿ ಆಚರಿಸಿಕೊಳ್ಳಬೇಕಿದೆ. ಅದಕ್ಕೆ ಕಾರಣ ಕರೊನಾ ಎಂದು ಬಿಡಿಸಿ ಹೇಳಬೇಕಿಲ್ಲ. ಆದರೆ, ಈ ಹುಟ್ಟುಹಬ್ಬವನ್ನು ಸಖತ್ ಸ್ಪೆಷಲ್ ಮತ್ತು ಮೆಮೊರಬಲ್ ಆಗಿ ಮಾಡಿದ್ದಾರೆ ಅವರ ಪತಿ ಪ್ರೇಮ್.

    ಈ ಬಾರಿ ಪ್ರೇಮ್ ತಮ್ಮ ಪತ್ನಿಗೆ ಒಂದು ವಿಶೇಷ ಗ್‌ಟಿ ಕೊಟ್ಟಿದ್ದಾರೆ. ಏನು ಗೊತ್ತಾ? ಕೇಕ್. ತಮ್ಮ ಹೆಂಡತಿಯ ಹುಟ್ಟುಹಬ್ಬವನ್ನು ಸ್ಪೆಷಲ್ ಮಾಡಬೇಕು ಎಂಬ ಕಾರಣಕ್ಕೆ, ಕೇಕ್ ಮಾಡುವುದನ್ನು ಕಲಿತು, ಅದನ್ನು ರಕ್ಷಿತಾ ಅವರಿಗೆ ಗ್‌ಟಿ ಆಗಿ ಕೊಟ್ಟಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಪ್ರತಿ ವರ್ಷ ಅವರ ಬರ್ತ್‌ಡೇನಾ ಹೊರಗಡೆ ಸೆಲೆಬ್ರೇಟ್ ಮಾಡ್ತಿದ್ವಿ. ಆದರೆ, ಈ ವರ್ಷ ಸ್ಟೇಹೋಮ್, ಸ್ಟೇಸೇಫ್​ ಎನ್ನುವ ಕಾರಣಕ್ಕೆ ಎಲ್ರೂ ಮನೆ ಒಳಗಿದ್ದೇ ಸೆಲೆಬ್ರೇಟ್ ಮಾಡ್ತಿದ್ದೀವಿ ಮತ್ತು ಸ್ಟ್ ಟೈಮ್ ಅವರ ಬರ್ತ್‌ಡೇಗೋಸ್ಕರ್ ನಾವ್ ಕೇಕ್ ಮಾಡೋದನ್ನ ಕಲ್ತಿದ್ದೀವಿ. ಹಾಗಾಗಿ ಇದು ವೆರಿ ಸ್ಪೆಷಲ್’ ಎಂದಿದ್ದಾರೆ ಪ್ರೇಮ್. ಹಾಗೆಯೇ ರಕ್ಷಿತಾ ಅವರಿಂದ ಆ ಕೇಕ್ ಕತ್ತರಿಸಿ, ಖುಷಿಪಟ್ಟಿದ್ದಾರೆ.

    ಮುಖ್ಯಮಂತ್ರಿ ಪರಿಹಾರ ನಿಧಿಗೆ 50 ಲಕ್ಷ ಕೊಟ್ಟ ಪುನೀತ್


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts