More

    ಪಾಕ್​ ವಿಮಾನ ದುರಂತಕ್ಕೆ ಪೈಲಟ್​ ಕಾರಣಾದನೇ?

    ನವದೆಹಲಿ: ಪಾಕಿಸ್ತಾನದ ಲಾಹೋರ್​ನಿಂದ ಕರಾಚಿಗೆ ಬರುತ್ತಿದ್ದ ಪಾಕಿಸ್ತಾನ್​ ಇಂಟರ್​ನ್ಯಾಷನಲ್​ ಏರ್​ಲೈನ್ಸ್​ ವಿಮಾನ ದುರಂತಕ್ಕೆ ಪೈಲಟ್​ನನ್ನೇ ಹೊಣೆಯಾಗಿಸಲಾಗುತ್ತಿದೆ.

    ಕರಾಚಿಯ ಜಿನ್ನಾ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿಸುವುದು ಸಾಧ್ಯವಾಗದಿದ್ದಾಗ, ಮತ್ತೊಮ್ಮೆ ಸುತ್ತು ಹಾಕಲು ಪೈಲಟ್​ ತಾನೇ ನಿರ್ಧಾರ ಕೈಗೊಂಡಿದ್ದ ಎನ್ನಲಾಗಿದೆ. ಈ ವೇಳೆ ನಿಗದಿತ ಎತ್ತರಕ್ಕೆ ತಲುಪಲು ಸಾಧ್ಯವಾಗದೇ ವಿಮಾನ ಪತನಗೊಂಡಿದೆ ಎಂದು ಪಾಕಿಸ್ತಾನದ ನಾಗರಿಕ ವಿಮಾನ ಯಾನ ಪ್ರಾಧಿಕಾರ ಆರಂಭಿಕ ವರದಿಯಲ್ಲಿ ತಿಳಿಸಿದೆ. ದುರಂತಕ್ಕೆ ತಾಂತ್ರಿಕ ವೈಫಲ್ಯ ಕಾರಣವಾಗಿದೆಯೋ ಅಥವಾ ಇದು ಪೈಲಟ್​ನಿಂದಾದ ತಪ್ಪೋ ಎಂಬ ಬಗ್ಗೆ ಉನ್ನತ ಮಟ್ಟದ ಸಮಿತಿ ತನಿಖೆ ಮುಂದುವರಿಸಿದೆ.

    ಇದನ್ನೂ ಓದಿ; ಸೊಕ್ಕಿನ ಬೆಕ್ಕಲ್ಲ…, ಗ್ರೀಕ್​ ದೇವತೆಯ ಅಪರಾವತಾರವಂತೆ…!

    ಏರ್​ಬಸ್​ ಎ-320 ಮಾದರಿಯ ಪಿಕೆ 8303 ವಿಮಾನ ಕರಾಚಿಯಲ್ಲಿ ಇಳಿಯುವಾಗ ಮೂರು ಬಾರಿ ವಿಮಾನದ ಇಂಜಿನ್​ ಘರ್ಷಣೆಗೆ ಒಳಗಾಗಿದೆ. ಈ ವೇಳೆ ಇಂಜಿನ್​ ಆಯಿಲ್​ ಟ್ಯಾಂಕ್​ ಹಾಗೂ ಇಂಧನ ಪಂಪ್​ಗೆ ಹಾನಿಯಾಗಿ ಸೋರಿಕೆ ಉಂಟಾಗಿರಬಹುದು. ಇದರಿಂದಾಗಿ ವಿಮಾನವನ್ನು ಮತ್ತೆ ನಿಗದಿತ ಎತ್ತರಕ್ಕೆ ಕೊಂಡೊಯ್ಯುವುದು ಸಾಧ್ಯವಾಗಿರಲಿಕ್ಕಿಲ್ಲ. ಹೀಗಾಗಿ ದುರಂತ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

    ಇದನ್ನೂ ಓದಿ; ಪ್ರಯಾಣಕ್ಕೆ ‘ಆರೋಗ್ಯ ಸೇತು’ ವೇ ಹೊಸ ಪಾಸ್​ಪೋರ್ಟ್​ 

    ಅಲ್ಲದೇ, ವಿಮಾನವನ್ನು ಇಳಿಸಲು ಸಾಧ್ಯವಾಗದಿರುವ ಬಗ್ಗೆ ಪೈಲಟ್ ಆರಂಭದಲ್ಲಿಯೇ ಕಂಟ್ರೋಲ್​ ರೂಮ್​ಗೆ ತಿಳಿಸಿರಲಿಲ್ಲ ಎನ್ನಲಾಗಿದೆ. ಮತ್ತೊಮ್ಮೆ ವಿಮಾನ ಮೇಲೆರಲು ಯತ್ನಿಸುತ್ತಿದ್ದಾಗ ವಿಮಾನದ ಲ್ಯಾಂಡಿಂಗ್​ ಗಿಯರ್​ನಲ್ಲಿ ದೋಷ ಕಂಡುಬಂದಿದೆ ಎಂದು ಪೈಲಟ್​ ಹೇಳಿದ್ದಾನೆ. ಆಗ ಆತನಿಗೆ 3,000 ಅಡಿ ಎತ್ತರಕ್ಕೆ ವಿಮಾನ ಕೊಂಡೊಯ್ಯಲು ತಿಳಿಸಲಾಗಿತ್ತು. ಆದರೆ, ವಿಮಾನವನ್ನು ಅಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಾಧ್ಯವಾಗದೇ ದುರಂತ ಸಂಭವಿಸಿದೆ ಎಂದು ವಿಶ್ಲೇಷಿಸಲಾಗಿದೆ.
    ಲಾಹೋರ್​ನಿಂದ ಕರಾಚಿಗೆ ಬರುತ್ತಿದ್ದ ವಿಮಾನ ಕಡೇ ಕ್ಷಣದಲ್ಲಿ ನೆಲಕ್ಕೆ ಅಪ್ಪಳಿಸಿತ್ತು. ಘಟನೆಯಲ್ಲಿ 97 ಮಂದಿ ಮೃತಪಟ್ಟಿದ್ದರು.

    ವುಹಾನ್​ ವೈರಸ್ ಕರೊನಾ​ಗೆ ಚೀನಿಯರಿಂದಲೇ ಮದ್ದು, ಲಸಿಕೆ ಯಶಸ್ವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts