More

    ಅತ್ಯಾಚಾರಕ್ಕೊಳಗಾಗಿದ್ದ ಗರ್ಭಿಣಿ ಮಹಿಳೆಗೆ ಕರೊನಾ: ಪೊಲೀಸ್​, ವೈದ್ಯ, ಜಡ್ಜ್​ಗೂ ಕ್ವಾರಂಟೈನ್ ಸಂಕಷ್ಟ

    ಚಿತ್ರದುರ್ಗ: ಅತ್ಯಾಚಾರಕ್ಕೊಳಗಾಗಿದ್ದ ಗರ್ಭಿಣಿ ಮಹಿಳೆಗೆ ಕೊರೊನಾ ಪಾಸಿಟಿವ್ ವರದಿಯಾಗಿದ್ದು, ಸಂತಸ್ತೆ ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

    ಚಿತ್ರದುರ್ಗ ತಾಲೂಕು ಭರಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮದ ಗರ್ಭಿಣಿ ಮಹಿಳೆಯಲ್ಲಿ ಕರೊನಾ ಪಾಸಿಟಿವ್ ಬಂದಿರುವುದರಿಂದ ಭರಮಸಾಗರ ಪೊಲೀಸ್ ಠಾಣೆಯ 9 ಸಿಬ್ಬಂದಿ, ಗ್ರಾಮಾಂತರ ಠಾಣೆಯ ಓರ್ವ ಸಿಬ್ಬಂದಿ, ಮಹಿಳಾ ಠಾಣೆಯ ಇಬ್ಬರು ಮಹಿಳಾ ಸಿಬ್ಬಂದಿ ಹಾಗೂ ಜಿಲ್ಲಾಸ್ಪತ್ರೆಯ ಇಬ್ಬರು ವೈದ್ಯರು ಹಾಗು ಓರ್ವ ನ್ಯಾಯಾಧೀಶರಿಗೆ ಇದೀಗ ಕ್ವಾರೆಂಟೈನ್ ಸಂಕಷ್ಟ ಎದುರಾಗಿದೆ. ಇದನ್ನೂ ಓದಿ: ಡ್ಯಾಂಗಳಲ್ಲಿ ನೀರಿಗಿಳಿಯೋ ಮುನ್ನ ಈ ವಿಡಿಯೋ ನೋಡಿ: ಈಜುತ್ತಿದ್ದವನನ್ನು ಎಳೆದೊಯ್ದ ಮೊಸಳೆ, ಬದುಕಿದ್ದೆ ಅಚ್ಚರಿ!

    ಮಹರಾಷ್ಟ್ರಕ್ಕೆ ಹೋಗಿ ಬಂದಿದ್ದ ವಿವಾಹಿತ ವ್ಯಕ್ತಿಯ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿದ್ದು, ಚಾಲಕನಾಗಿರುವ ಆತ ಗರ್ಭಿಣಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದವರನ್ನು ಕ್ವಾರೆಂಟೈನ್ ಮಾಡಲಾಗಿದೆ.

    ಗರ್ಭಿಣಿ ಮಹಿಳೆಯಿಂದ ಮತ್ತಷ್ಟು ಜನರಿಗೆ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದ್ದು, ನಿನ್ನೆ ಕೊರೊನಾ ಮುಕ್ತವಾಗಿದ್ದ ಜಿಲ್ಲೆಗೆ ಮತ್ತೆ ವಕ್ಕರಿಸಿದಂತಾಗಿದೆ. ಸ್ಥಳ ಮಹಜರ್​ಗೆ ಕರೆದುಕೊಂಡು ಹೋಗಿದ್ದ ಪೊಲೀಸರಿಗೂ ಕ್ವಾರಂಟೈನ್ ಎದುರಾಗಿದೆ. (ದಿಗ್ವಿಜಯ ನ್ಯೂಸ್​) ಇದನ್ನೂ ಓದಿ: ಹೆಣ್ಣುಮಗುವೆಂದು ಆರು ಭ್ರೂಣ ಕೊಂದ ಅಪ್ಪ! ಏಳನೇ ಗರ್ಭದಲ್ಲಿ ನಡೆಯಿತೊಂದು ಪವಾಡ

    ಗಡಿ ವಿವಾದ: ಭಾರತದೊಂದಿಗೆ ಸಂಘರ್ಷಕ್ಕೆ ಸಿದ್ಧವಾದ ನೇಪಾಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts