More

    ಗಂಡನೊಂದಿಗೆ ಜಗಳ ಆಡಿಕೊಂಡು ಆಟೋದಿಂದ ಹೊರ ಜಿಗಿದಿದ್ದ ಗರ್ಭಿಣಿ ದುರಂತ ಅಂತ್ಯ

    ಕೊಚ್ಚಿ: ಚಲಿಸುವ ಆಟೋದಿಂದ ಜಿಗಿದು ತಲೆಗೆ ಪೆಟ್ಟು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಗರ್ಭಿಣಿ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಕೇರಳದ ಕಳ್ಳಂಬಲಂನಲ್ಲಿ ನಡೆದಿದೆ.

    ಸುಬಿನಾ (22) ಮೃತಪಟ್ಟ ಮಹಿಳೆ. ಈ ಘಟನೆ ಒಟ್ಟೂರು ಥೊಪ್ಪುವಿಲಾ ಜಂಕ್ಷನ್ ಬಳಿ ನಿನ್ನೆ ಮಧ್ಯಾಹ್ನ 3 ಗಂಟೆಗೆ ನಡೆದಿದೆ. ನಿಯಮಿತ ತಪಾಸಣೆಗೆಂದು ಆಸ್ಪತ್ರೆ ಹೋಗಿ ಗಂಡನ ಜತೆ ಮನೆಗೆ ಮರಳುವಾಗ ದುರ್ಘಟನೆ ಸಂಭವಿಸಿದೆ.

    ಇದನ್ನೂ ಓದಿ: ಕೇರಳದ ಮೊದಲ ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲಿಗೆ ಪ್ರಧಾನಿ ಮೋದಿ ಚಾಲನೆ

    ಆಟೋ ಒಳಗೆ ಸುಬಿನಾ ಮತ್ತು ಆಕೆಯ ಗಂಡನ ನಡುವೆ ಯಾವುದೇ ವಿಚಾರಕ್ಕೆ ವಾಗ್ವಾದ ಶುರುವಾಗಿದೆ. ಮಾತಿಗೆ ಮಾತಿಗೆ ಬೆಳೆದು ತಾಳ್ಮೆ ಕಳೆದುಕೊಂಡು ಸುಬಿನಾ, ಕೋಪದಿಂದ ಆಟೋದಿಂದ ಹೊರಗೆ ಜಿಗಿದ್ದಾಳೆ. ಈ ವೇಳೆ ರಸ್ತೆ ಪಕ್ಕದ ವಿದ್ಯುತ್​ ಕಂಬಕ್ಕೆ ತಲೆ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದಳು.

    ತಕ್ಷಣ ಸುಬಿನಾಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. (ಏಜೆನ್ಸೀಸ್​)

    ಬಿಎಸ್​ವೈ ಭೇಟಿ ಮಾಡಿದ ಬಿ.ಎಲ್ ಸಂತೋಷ್; ಸಿದ್ದರಾಮಯ್ಯ ಸೋಲಿಸಲು ಕಾರ್ಯತಂತ್ರ!

    ನಗರದಲ್ಲಿ ಮತ್ತೆ ಪುಂಡರ ಅಟ್ಟಹಾಸ: ಮಹಿಳೆ ಮೇಲೆ ಹಲ್ಲೆ ಮಾಡಿ ಬೇಕರಿ ತಿನಿಸು ಬಿಸಾಡಿದ ಪುಡಿರೌಡಿಗಳು

    37.80 ಕೋಟಿ ರೂ. ಬೆಲೆ ಬಾಳುವ ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ ಆಲಿಯಾ ಭಟ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts