More

    ಗರ್ಭಿಣಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪತಿ- ವಿಡಿಯೋ ಸೆರೆಹಿಡಿದ ಪತ್ನಿ…ಇಬ್ಬರೂ ಅರೆಸ್ಟ್​

    ಭುವನೇಶ್ವರ: ಕೆಲವೊಮ್ಮೆ ವಿಚಿತ್ರ ಮತ್ತು ವಿಕೃತ ಪ್ರಕರಣಗಳನ್ನು ನಾವು ಕೇಳಿರುತ್ತೇವೆ. ವ್ಯಕ್ತಿಯೊಬ್ಬ ತನ್ನ ಮನೆಯ ಪಕ್ಕದಲ್ಲೇ ವಾಸವಾಗಿರುವ ಗರ್ಭಿಣಿ ಮೇಲೆ ಅತ್ಯಾಚಾರವೆಸಗಿದ್ದು, ಇದಕ್ಕೆ ಆತನ ಪತ್ನಿಯೂ ಸಾಥ್ ನೀಡಿದ್ದಾಳೆ. ಈ ಘಟನೆ ಒಡಿಶಾದ ನಬರಂಗಪುರ ಜಿಲ್ಲೆಯಲ್ಲಿ ನಡೆದಿದೆ.

    ಜಗನ್ನಾತ್‍ಪುರ ಗ್ರಾಮದ ಖಾಟಿಗುಡ್ಡ ಪ್ರದೇಶದ ನಿವಾಸಿಯಾಗಿರುವ ಗರ್ಭಿಣಿ, ಪದ್ಮ ರುಂಜಿಕರ್ ಅವರ ಬಳಿ ರೆಗ್ಯಲುರ್ ಚೆಕಪ್ ಮಾಡಿಸಿಕೊಳ್ಳುತ್ತಿದ್ದರು. ಅಂತೆಯೇ ಇತ್ತೀಚೆಗೆ ಕೂಡ ಸಂತ್ರಸ್ತೆ ಚೆಕಪ್‍ಗೆಂದು ತೆರಳಿದ್ದರು. ಈ ವೇಳೆ ಪದ್ಮ ಅವರ ಪತಿ ಗರ್ಭಿಣಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಪತಿಗೆ ಪತ್ನಿ ಪದ್ಮ ರುಂಜಿಕರ್ ಕೂಡ ಸಹಾಯ ಮಾಡಿದ್ದಾಳೆ. ಅಲ್ಲದೆ ಪತಿ ರೇಪ್ ಮಾಡುತ್ತಿರುವುದನ್ನು ತನ್ನ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾಳೆ. ಮತ್ತು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾಳೆ.

    ಇದನ್ನೂ ಓದಿ: ಮೊಮ್ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ 10ರೂ. ನೀಡಿದ 60 ವರ್ಷದ ಅಜ್ಜ!

    ಅತ್ಯಾಚಾರವೆಸಗಿದ ಬಳಿಕ ದಂಪತಿ ಸಂತ್ರಸ್ತೆಯನ್ನು ಸ್ಥಳೀಯ ದೇವಸ್ಥಾನಕ್ಕೆ ಕರೆದೊಯ್ದು ಘಟನೆಯನ್ನು ಯಾರಿಗೂ ವಿವರಿಸದಂತೆ ಆಣೆ ಪ್ರಮಾಣ ಮಾಡಿಸಿ ಬೆದರಿಕೆ ಹಾಕಿದ್ದಾರೆ. ಆದರೆ ಮಹಿಳೆ ಪೊಲೀಸರಿಗೆ ಈ ಬಗ್ಗೆ ದೂರು ನಿಡಿದ್ದು, ಸದ್ಯ ಆರೋಪಿ ಹಾಗೂ ಆತನ ಪತ್ನಿಯನ್ನು ಬಂಧಿಸಲಾಗಿದೆ.

    ಇದನ್ನೂ ಓದಿ:  ವಿಶ್ವ ನಿದ್ರಾ ದಿನ 2023; ನಿದ್ದೆ ಮಾಡಲು ಉದ್ಯೋಗಿಗಳಿಗೆ ಇಂದು ರಜೆ ನೀಡಿದ ಕಂಪನಿ!

    ವೈಯಕ್ತಿಕ ಕಾರಣದಿಂದಲೇ ಈ ಕೃತ್ಯ ಎಸಗಿರುವುದಾಗಿ ಪ್ರಾಥಮಿಕ ತನಿಖೆ ವೇಳೆ ಬೆಳಕಿಗೆ ಬಂದಿದೆ. ದಂಪತಿ ಹಾಗೂ ಕೃತ್ಯಕ್ಕೆ ಬಳಸಿದ ಮೊಬೈಲ್​​ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    100ಕ್ಕೂ ಹೆಚ್ಚು ಬಾರಿ ಇರಿದು ಈತನ ಕಥೆ ಮುಗಿಸಿದ್ರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts