More

    ನಿತ್ಯವೂ ಜೆಡಿಎಸ್ ಜತೆ ನಾವು ಗುದ್ದಾಡಿದ್ರೆ, ಇನ್ನೊಬ್ರು ಅಡ್ಜಸ್ಟ್​ಮೆಂಟ್ ಮಾಡ್ಕೋತಾರೆ: ಸಿಎಂ ವಿರುದ್ಧ ಪ್ರೀತಂಗೌಡ ಗರಂ

    ಹಾಸನ: ಮುಖ್ಯಮಂತ್ರಿಯಾದ 24 ಗಂಟೆಯೊಳಗೆ ಮಾಜಿ ಪ್ರಧಾನಿ ದೇವೇಗೌಡರ ಮನೆಗೆ ಏಕೆ ಹೋಗಬೇಕಿತ್ತು ಎಂದು ಕಾರ್ಯಕರ್ತರು ನನ್ನನ್ನು ಪ್ರಶ್ನೆ ಮಾಡುತ್ತಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಿ ಚರ್ಚಿಸುತ್ತೇನೆಂದು ಬಿಜೆಪಿ ಶಾಸಕ ಪ್ರೀತಂಗೌಡ ಹೇಳಿದರು.

    ಹಾಸನದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಹೊಂದಾಣಿಕೆ ರಾಜಕಾರಣ ‌ಮಾಡಲ್ಲ. ಮುಂದೆ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ಇದೆ. ಮುಖ್ಯಮಂತ್ರಿಗಳೇ ನಮ್ಮ ಜೇಬಿನಲ್ಲಿದ್ದಾರೆ ಎಂದು ಫಸ್ಟ್ ಫ್ಯಾಮಿಲಿ ಆಫ್ ಹಾಸನ್ ಅವರು ಸ್ಟೇಟ್ ಮೆಂಟ್ ಕೊಡ್ತಿದ್ದಾರೆ. ಇದರಿಂದ ಕಾರ್ಯಕರ್ತರು ದೃಢಗೆಡಬೇಕಿಲ್ಲ, ನಾನು ನಿಮ್ಮ ಜೊತೆ ಇದ್ದೇನೆ ಎಂದರು.

    ಬಸವರಾಜ ಬೊಮ್ಮಾಯಿ ಅವರ ತಂದೆ ಎಸ್.ಆರ್.ಬೊಮ್ಮಾಯಿ ಸರ್ಕಾರ ಬೀಳಿಸದವರ ಮನೆಗೆ ಹೋಗಬಾರದಿತ್ತು ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ. ದಿನ ಬೆಳಿಗ್ಗೆ ನಾವು ಜೆಡಿಎಸ್ ಪಕ್ಷದ ಗುದ್ದಾಡಿದ್ರೆ, ಇನ್ನೊಬ್ಬರು ಹೋಗಿ ಅಡ್ಜಸ್ಟ್ ಮೆಂಟ್ ರಾಜಕಾರಣ ಮಾಡ್ತಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಜಿಲ್ಲೆಗೆ ಬರುವ ಯಾವುದೇ ಶಾಸಕರು ಜೆಡಿಎಸ್ ಶಾಸಕರ‌ ಮನೆಗೆ ಹೋಗಿ ಊಟ ಮಾಡಬಾರದು. ಇದರಿಂದ ಕಾರ್ಯಕರ್ತರಿಗೆ ನೋವಾಗಿದೆ ಎಂದು ಹೇಳಿದರು.

    ಮುಖ್ಯಮಂತ್ರಿಗಳೊಂದಿಗೆ ನೇರವಾಗಿ ಮಾತಾಡುತ್ತೇನೆ. ಕಾರ್ಯಕರ್ತರಿಗೆ ಹೇಳಲಿ ಅಡ್ಜಸ್ಟ್​ಮೆಂಟ್ ಮಾಡಿ ಎಂದು, ನಾನು ಅಡ್ಜಸ್ಟ್ ಮಾಡ್ಕೊತಿನಿ. ದೇವೇಗೌಡರ ಭೇಟಿ ತಾ.ಪಂ., ಜಿ.ಪಂ. ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ. ಸಿಎಂ ಬ್ಯೂಸಿ ಇದ್ದಾರೆ ನಮಗೆ ಟೈಂ ಕೊಟ್ಟಿಲ್ಲ. ಹೊಳೆನರಸೀಪುರದ ನಾಯಕರು ಇಡೀ ಜಿಲ್ಲೆ ನಮ್ಮ‌ ಜೇಬಿನಲ್ಲಿದೆ‌ ಅಂದುಕೊಂಡು ಓಡಾಡುತ್ತಿದ್ದಾರೆ. ಕಳೆದ ಕ್ಯಾಬಿನೆಟ್​ನಲ್ಲಿ ಹತ್ತು ಜನ ಒಕ್ಕಲಿಗರು ಇದ್ದರು. ಈ ಕ್ಯಾಬಿನೆಟ್​ನಲ್ಲಿ ಒಬ್ಬರು ಒಕ್ಕಲಿಗರಿಗೆ ಮಾತ್ರ ಮಂತ್ರಿ ಸ್ಥಾನ ಕೊಟ್ಟಿದ್ದಾರೆ. ಬಿಜೆಪಿ ನಾಯಕರು ಮುಂದಿನ ಚುನಾವಣೆಯಲ್ಲಿ ಬಂದು ಜವಾಬ್ದಾರಿ ತೆಗೆದುಕೊಂಡು ಎಷ್ಟು ಸ್ಥಾನ ತಂದುಕೊಡುತ್ತಾರೆ ನೋಡೋಣ ಎಂದು ಪರೋಕ್ಷವಾಗಿ ತಮ್ಮ ಪಕ್ಷವನ್ನೇ ಟೀಕಿಸಿದರು.

    ಮಂತ್ರಿಯಾಗಬೇಕೆಂದು ಆಸೆಯಿಲ್ಲ. ರಾಜಕೀಯ ಮಾಡಬೇಕೆಂಬ ಆಸೆಯಿದೆ ಎಂದು ಮುಖ್ಯಮಂತ್ರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಪ್ರೀತಂಗೌಡ, ಯಡಿಯೂರಪ್ಪ ಅವರು ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಟ್ಟಿದ್ದರು. ನಾನು ನೂರು ಮೀಟರ್ ಓಡಲಿಕ್ಕೆ ಬಂದಿಲ್ಲ, ಮ್ಯಾರಥಾನ್‌ ಓಡಲು ಬಂದಿದ್ದೇನೆ. ಯಾರ ಹತ್ರನು ಮಂತ್ರಿ ಮಾಡಿ ಎಂದು ಕೇಳಿಲ್ಲ. ಮಂತ್ರಿ ಮಾಡಿಲ್ಲ ಅನ್ನೊದಕ್ಕಿಂತ ನಾನು ಕೇಳೇ ಇಲ್ಲ. ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯದ ಶಾಸಕರಿಗೆ ಮಂತ್ರಿ ಸ್ಥಾನ ಕೊಡಬೇಕಿತ್ತು. ಹಳೇ ಮೈಸೂರು ಭಾಗಕ್ಕೆ ಮಂತ್ರಿ ಸ್ಥಾನ ಕೊಟ್ಟಿಲ್ಲ ಅನ್ನೋ ನೋವು ಕಾರ್ಯಕರ್ತರಿಗೆ ಇದೆ ಎಂದು ಹೇಳಿದರು.

    ಮುಖ್ಯಮಂತ್ರಿಯಾದ ಕೂಡಲೇ ಸುತ್ತೂರು, ಸಿರಿಗೆರೆ, ಸಿದ್ದಗಂಗಾ ಆದಿಚುಂಚನಗಿರಿ, ಮಠಕ್ಕೆ ಹೋಗ್ತಾರೆ ಅಂದುಕೊಂಡಿದ್ವಿ. ಆದರೆ, ದೇವೇಗೌಡರ ಮನೆಗೆ ಹೋಗಿರುವುದು ಕಾರ್ಯಕರ್ತರಿಗೆ ನೋವಾಗಿದೆ. ನಿಮ್ಮ ಮನೆಗೆ ಕಲ್ಲು ಹೊಡೆದವರ ಮನೆಗೆ ಕ್ಯಾಬಿನೆಟ್ ವಿಸ್ತರಣೆಗು ಮುನ್ನ ಹೋದರೆ ಹೇಗೆ ಎಂದು ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು. ನಾನು ಕಾರ್ಯಕರ್ತರನ್ನು ಸಮಾಧಾನ ಮಾಡಿದ್ದೀನಿ ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್​)

    ಪತ್ನಿಯಿಂದ ಲೈಂಗಿಕ ದೌರ್ಜನ್ಯ ಆರೋಪ: ಕೊನೆಗೂ ಮೌನ ಮುರಿದ ಗಾಯಕ ಯೋ ಯೋ ಹನಿ ಸಿಂಗ್

    ನನ್ನ ದಾರಿ ನಾನೇ ನೋಡಿಕೊಳ್ಳುವೆ… ಖಾತೆ ಹಂಚಿಕೆ ಬೆನ್ನಲ್ಲೇ ಅಸಮಾಧಾನ ಹೊರಹಾಕಿದ ಆನಂದ್​ ಸಿಂಗ್​!

    ಮೊದಲ ಚೆಂಡಿನಲ್ಲೇ ಬೌಂಡರಿ ಬಾರಿಸಿದ ಸಿಎಂ ಬೊಮ್ಮಾಯಿ: ಸಂಪುಟ ರಚನೆಯ ಇನ್​ಸೈಡ್​ ಸ್ಟೋರಿ ಇದು..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts