More

    ಮೆದುಳು ಜ್ವರ ತಡೆಗೆ ಮುನ್ನೆಚ್ಚರಿಗೆ ಅಗತ್ಯ

    ಬೇಲೂರು: ಮೆದುಳು ಜ್ವರ ಅಡ್ವೋಕೆಸಿ ಕಾರ್ಯಾಗಾರ ಹಾಗೂ ವಿಶ್ವ ರೇಬಿಸ್ ದಿನವನ್ನು ಪಟ್ಟಣದ ಸಾರ್ವಜನಿಕರ ಸರ್ಕಾರಿ ಅಸ್ಪತ್ರೆಯ ತಾಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ಪುರಸಭೆ ಉಪಾಧ್ಯಕ್ಷೆ ಸೌಮ್ಯ ಸುಬ್ರಹ್ಮಣ್ಯ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಸಲಾಯಿತು.

    ಜಿಲ್ಲಾ ಕೀಟ ಶಾಸ್ತ್ರಜ್ಞ ರಾಜೇಶ್ ಕುಲಕರ್ಣಿ ಮಾತನಾಡಿ, ಸೋಂಕಿತ ಹಂದಿ ಅಥವಾ ಬೆಳ್ಳಕ್ಕಿಯನ್ನು ಕಚ್ಚಿದ ಸೊಳ್ಳೆ ಮನುಷ್ಯರನ್ನು ಕಚ್ಚುವುದರಿಂದ ಆರೋಗ್ಯವಂತ ವ್ಯಕ್ತಿಗೆ ಮೆದುಳು ಜ್ವರವು ಬರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕಿದೆ. ಮೆದುಳು ಜ್ವರಕ್ಕೆ ತಡೆಗಟ್ಟಲು ಮೊದಲಿಗೆ ಸೊಳ್ಳೆ ನಿಯಂತ್ರಿಸುವುದು ಮತ್ತು ಅವುಗಳ ಉತ್ಪತ್ತಿಯ ತಾಣಗಳನ್ನು ನಿರ್ಮೂಲನೆ ಮಾಡುವುದು ಮುಖ್ಯವಾಗಿದೆ. ಸೊಳ್ಳೆಗಳ ಕಚ್ಚುವಿಕೆಯಿಂದ ಪಾರಾಗಲು ಹಂದಿ ಸಾಕಾಣಿಕೆ ಗೂಡುಗಳಿಗೆ ಕೀಟನಾಶಕ ಸಿಂಪಡಿಸುವುದು ಮತ್ತು ಸೊಳ್ಳೆ ನಿರೋಧಕ ಜಾಲರಿಯನ್ನು ಹಾಕಬೇಕು. ಸಂಜೆ ಸಮಯದಲ್ಲಿ ಮೈತುಂಬ ಬಟ್ಟೆ ಧರಿಸುವುದು, ನಿಂತ ನೀರಿನ ಸ್ಥಳಗಳಲ್ಲಿ ಲಾರ್ವ ಹಾರಿ ಮೀನು ಬಿಡುಬೇಕೆಂದು ತಿಳಿಸಿದರು.

    ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ನಾಗಪ್ಪ ಮಾತನಾಡಿ, ಮೆದುಳು ಜ್ವರದ ಲಕ್ಷಣಗಳಾದ ಜ್ವರ, ತಲೆ ನೋವು ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡು ಬಂದಲ್ಲಿ ತಕ್ಷಣವೇ ವೈದ್ಯರಲ್ಲಿ ಚಿಕಿತ್ಸೆ ಪಡೆಯಬೇಕು. ಮೆದುಳು ರೋಗವು ಶೇ.30ರಷ್ಟು ಮಾರಣಾಂತಿಕವಾಗಿದೆ. ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ಕ್ರಮ ಅನುಸರಿಸಿದರೆ ಈ ರೋಗದಿಂದ ದೂರವಿರಬಹುದು ಎಂದರು.

    ಮಕ್ಕಳ ತಜ್ಞ ಡಾ.ಅಕ್ಷಿತ್ ಮಾತನಾಡಿ, ಸಾಮಾನ್ಯವಾಗಿ ಮಕ್ಕಳಲ್ಲಿ ಹೆಚ್ಚು ಮೆದುಳು ಜ್ವರ ಕಂಡು ಬರುವ ಸಾಧ್ಯತೆ ಇದೆ. ಮೆದುಳು ಜ್ವರವನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದರ ಜತೆಗೆ ಮಕ್ಕಳಿಗೆ 9ನೇ ತಿಂಗಳಲ್ಲಿ ಹಾಗೂ ಒಂದೂವರೆ ವರ್ಷದಲ್ಲಿ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು ಎಂದರು.

    ಹಿರಿಯ ಆರೋಗ್ಯ ನಿರೀಕ್ಷಕ ದಯಾನಂದ್, ಆರೋಗ್ಯ ಶಿಕ್ಷಣಾಧಿಕಾರಿ ಉಷಾ, ಆರೋಗ್ಯ, ಸುರಕ್ಷಣಾಧಿಕಾರಿ ಮಂಗಳಮ್ಮ,, ಬಿಆರ್‌ಸಿ ಶಿವಮರಿಯಪ್ಪ, ಪುರಸಭೆ ಆರೋಗ್ಯ ನಿರೀಕ್ಷಕಿ ಜ್ಯೋತಿ, ಪಿಡಿಒ ನಾಗಬೂಷಣ್, ಮಹಿಳಾ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಚಂದ್ರಶೇಖರ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts