More

    ಮದುವೆಗೂ ಮುನ್ನ ಒಪ್ಪಂದ ಈಗಿನ ಟ್ರೆಂಡ್​! ನಿದ್ದೆಗೆಟ್ಟ ವಕೀಲರು…

    ಬೆಂಗಳೂರು: ಮದುವೆ ಮಾಡು ತಮಾಷೆ ನೋಡು ಎನ್ನುವ ಮಾತನ್ನು ಕೇಳಿರಬಹುದು. ಈಗಿನ ಕಾಲದ ಯುವಜನತೆ ಬೇರೆಯವರಿಗೆ ತಮಾಷೆಯ ವಸ್ತುಗಳಾಗಲು ತಯಾರಿಲ್ಲ. ಅವರು ಯಾವುದೇ ಸಮಸ್ಯೆ ಬರಬಾರದು ಎಂದು ಫುಲ್​ ಪ್ರೂಫ್​ ಪ್ಲಾನ್​ ಸಿದ್ಧವಾಗಿಟ್ಟುಕೊಂಡೇ ಮದುವೆಯಾಗುತ್ತಿದ್ದಾರೆ. ಇದೀಗ ಹೊಸ ಟ್ರೆಂಡ್​ ಹುಟ್ಟಿಕೊಂಡಿದ್ದು ಮದುವೆಗೂ ಮುನ್ನವೇ ಒಪ್ಪಂದ ಮಾಡಿಕೊಂಡು ಭವಿಷ್ಯದಲ್ಲಿ ಎದುರಾಗಬಹುದಾದ ಎಲ್ಲಾ ಸಮಸ್ಯೆಗಳಿಗೂ ಕರಾರು ಪತ್ರದಲ್ಲೇ ಪರಿಹಾರ ಹುಡುಕಲು ಮುಂದಾಗಿದ್ದಾರೆ!

    ನಗರದಲ್ಲಿ ಇದೀಗ ಮದುವೆಗೂ ಮುಂಚೆಯೇ ಕಾಂಟ್ರಕ್ಟ್ ಪೇಪರ್​ಗಳ ಅಬ್ಬರ ಹೆಚ್ಚಾಗಿದೆ. ಈ ಸಂಸ್ಕೃತಿ ಈಗಾಗಲೇ ವಿದೇಶದಲ್ಲಿ ಚಾಲ್ತಿಯಲ್ಲಿದ್ದು ಇದೀಗ ಬೆಂಗಳೂರಿಗೂ ಕಾಲಿಟ್ಟು ವಕೀಲರ ನಿದ್ದೆಗೆಡಿಸಿದೆ.

    ಈ ರೀತಿಯ ವಿಚಿತ್ರ ಒಪ್ಪಂದಗಳನ್ನು ಭಾವಿ ದಂಪತಿಗಳು ಮಾಡಿಕೊಳ್ಳುತ್ತಿದ್ದು ಇದು ಬೆಂಗಳೂರಿನಲ್ಲಿ ಫೇಮಸ್ ಆಗುತ್ತಿದೆ. ಈ ಆಗ್ರಿಮೆಂಟ್ ಕಾಟಕ್ಕೆ ಬೆಂಗಳೂರು ವಕೀಲರೇ ಕಂಗಾಲಾಗಿದ್ದಾರೆ.

    ಏನಿದು ಸಪ್ತಪದಿ ತುಳಿಯೋ ಮೊದಲು ಮಾಡುವ ಕಾಂಟ್ರಕ್ಟ್?
    ಮಾಂಗಲ್ಯಧಾರಣೆಗೂ ಮುನ್ನವೇ ಆಗ್ರಿಮೆಂಟ್ ಪೇಪರ್‌ಗೆ ವಧು-ವರರು ಸಹಿ ಹಾಕುತ್ತಿದ್ದು ಈ ಮೂಲಕ ಮುದುವೆಯಾದ ಮೇಲೆ ಗಂಡ ಹಿಗಿರಬೇಕು, ಹೆಂಡತಿ ಹೀಗಿರಬೇಕು ಎಂದು ನಿರ್ಧರಿಸಲಾಗುತ್ತದೆ.

    ಈ ರೀತಿಯ ಒಪ್ಪಂದಗಳಿಗೆ ಭಾರತದಲ್ಲಿ ಮಾನ್ಯತೆ ಇಲ್ಲದೇ ಇದ್ದರೂ ವಿಚಿತ್ರ ಟ್ರೆಂಡ್ ಹೆಚ್ಚಳವಾಗುತ್ತಿದೆ. ವಿವಾಹಕ್ಕೂ ಮುನ್ನ ಪತಿ ಅಥವಾ ಪತ್ನಿ ಹೀಗೆ ಇರಬೇಕು ಎನ್ನುವುದರ ಬಗ್ಗೆ ಕರಾರು ಪತ್ರ ಮಾಡಿಕೊಳ್ಳುತ್ತಾರೆ. ಅದರಲ್ಲೂ ಒಂದು ವೇಳೆ ಸಂಸಾರದಲ್ಲಿ ಸಾಮರಸ್ಯ ಮೂಡದೇ ಇದ್ದಲ್ಲಿ ಡಿವೋರ್ಸ್ ಆದ ಬಳಿಕ ಜೀವನಾಂಶ ಎಷ್ಟು ಕೊಡಬೇಕು ಅನ್ನುವುದರ ಬಗ್ಗೆಯೂ ಮುಂಚಿತವಾಗಿಯೇ ಪ್ರಸ್ತಾಪ ಮಾಡಿರಲಾಗುತ್ತದೆ.

    ಪತಿಯ ಮನೆಯವರಿಂದ ಪ್ರತ್ಯೇಕ ವಾಸದ ಬಗ್ಗೆಯೂ ಆಗ್ರಿಮೆಂಟ್ ಮಾಡಿಕೊಳ್ಳಲಾಗುತ್ತದೆ. ಮಕ್ಕಳಾಗದೇ ಇದ್ದರೆ ಬೇರೆ ಮದ್ವೆಯಾಗುವುದರ ಬಗ್ಗೆಯೂ ಪ್ರಸ್ತಾಪವನ್ನು ಮಾಡಲಾಗುತ್ತದೆ. ಹೀಗೆ ಸಂವೇದನಾಶೀಲತೆಯನ್ನೇ ಕಳೆದುಕೊಂಡವರ ರೀತಿಯಲ್ಲಿ ಮದುವೆಗೂ ಮುನ್ನವೇ ಒಪ್ಪಂದಗಳಿಗೆ ಸಹಿ ಹಾಕಿಕೊಂಡು ಮದುಮಕ್ಕಳು ಹೊಸ ಟ್ರೆಂಡ್​ ಸೃಷ್ಟಿಸುತ್ತಿದ್ದಾರೆ. ಸದ್ಯಕ್ಕೆ ಈ ರೀತಿಯ ವಿಚಿತ್ರ ಒಪ್ಪಂದಗಳ ಬೇಡಿಕೆ ವಕೀಲರಿಗೆ ತಲೆನೋವು ತಂದಿಟ್ಟಿರುವುದು ಮಾತ್ರ ಸುಳ್ಳಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts