More

    ‘ಮಾಧ್ಯಮದವರ ಕಣ್ಣು ಮಾತ್ರ ಸಿನಿಮಾದವರ ಮೇಲಿದೆ, ನಾವು ಎಲ್ಲರ ಮೇಲೂ ಕಣ್ಣಿಟ್ಟಿದ್ದೇವೆ’

    ಕೊಡಗು: ಮಾಧ್ಯಮದವರ ಕಣ್ಣು ಮಾತ್ರ ಸಿನಿಮಾದವರ ಮೇಲಿದೆ. ಆದರೆ, ನಾವು ಎಲ್ಲರ ಮೇಲೆ ಕಣ್ಣಿಟ್ಟಿದ್ದೇವೆಂದು ಡಿಜಿಪಿ ಪ್ರವೀಣ್​ ಸೂದ್​ ಹೇಳಿದರು.

    'ಮಾಧ್ಯಮದವರ ಕಣ್ಣು ಮಾತ್ರ ಸಿನಿಮಾದವರ ಮೇಲಿದೆ, ನಾವು ಎಲ್ಲರ ಮೇಲೂ ಕಣ್ಣಿಟ್ಟಿದ್ದೇವೆ'ಕೊಡಗು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಡ್ರಗ್ಸ್​ ಎಲ್ಲಿಂದ ರವಾನೆ ಆಗುತ್ತಿದೆ? ಮಧ್ಯವರ್ತಿಗಳು ಯಾರಿದ್ದಾರೆ? ಎಂಬುವುದನ್ನು ನೋಡ್ತಿದ್ದೇವೆ. ಈ ವಿಚಾರವಾಗಿ ಸಮಗ್ರ ಕಾರ್ಯಾಚರಣೆ ನಡೆಯುತ್ತಿದೆ. ಸಿನಿಮಾದವರನ್ನು ಮಾತ್ರ ಗುರಿಯಾಗಿಸಿಕೊಂಡಿಲ್ಲ. ಎಲ್ಲರ ಮೇಲೂ ಕಣ್ಣಿದೆ ಎಂದು ತಿಳಿಸಿದರು.

    ಇದನ್ನೂ ಓದಿ: ಬೋಂಡಾ ತಿಂದು…ಮಹಿಳೆ ಮೇಲೆ ಬಿಸಿ ಎಣ್ಣೆ ಎರಚಿದ್ದವನಿಗೆ ತಕ್ಕ ಶಾಸ್ತಿ ಮಾಡಿದ ಪೊಲೀಸರು

    ಪೊಲೀಸರು ಮಾಮೂಲಿ ತೆಗೆದುಕೊಂಡು ದಂಧೆಗೆ ಸಹಕರಿಸುತ್ತಾರೆಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಆರೋಪ ಮಾಡುವ ಹಕ್ಕಿದೆ. ನಾವು ನಮ್ಮ ಕೆಲಸ ಮಾಡುತ್ತಿದ್ದೇವೆ. ಯಾರ ಮೇಲೆ ಆರೋಪ ಮಾಡಿದ್ದಾರೋ ಅದೇ ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದರು.

    ಪೊಲೀಸರು ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್‌ಗೆ ಒಳಗಾಗಿದ್ದಾರೆ. 8 ಸಾವಿರ ಪೊಲೀಸರಿಗೆ ಕೋವಿಡ್ ಬಂದಿದೆ. 1500 ಆ್ಯಕ್ಟಿವ್ ಕೇಸ್ ಇದೆ. 73 ಮಂದಿ ಮೃತಪಟ್ಟಿದ್ದಾರೆಂದು ಇದೇ ವೇಳೆ ತಿಳಿಸಿದರು. (ದಿಗ್ವಿಜಯ ನ್ಯೂಸ್​)

    ಬಂಧನ ಭೀತಿಯಲ್ಲಿ ತನಗೆ ಕರೊನಾ ಇದೆಯೆಂದು ಅನುಶ್ರೀ ಡ್ರಾಮ ಮಾಡ್ತಾರಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts