More

    ವೈದ್ಯಕೀಯ ವೆಚ್ಚ ಭರಿಸುವ ಯೋಜನೆ ; ರಾಜ್ಯ ಸರ್ಕಾರಿ ನೌಕರರ ಸಂದ ಅಧ್ಯಕ್ಷ ಸಿ.ಎ.ಷಡಾಕ್ಷರಿ ಭರವಸೆ

    ರಾಮನಗರ: ರಾಜ್ಯ ಸರ್ಕಾರಿ ನೌಕರರಿಗೆ ಆರೋಗ್ಯ ಯೋಜನೆ, ಉತ್ತಮ ವೇತನ ಅನುಷ್ಠಾನ ಕಾರ್ಯಕ್ರಮಗಳು ಜಾರಿಗೆ ಬರಲಿವೆ ಎಂದು ಸರ್ಕಾರಿ ನೌಕರರ ಸಂದ ರಾಜ್ಯ ಅಧ್ಯಕ್ಷ ಸಿ.ಎ.ಷಡಾಕ್ಷರಿ ವಿಶ್ವಾಸ ವ್ಯಕ್ತಪಡಿಸಿದರು.

    ನಗರದ ಸ್ಫೂರ್ತಿ ಭವನದ ಆವರಣದಲ್ಲಿ ಸರ್ಕಾರಿ ನೌಕರರ ಸಂದ ಜಿಲ್ಲಾ ಘಟಕದಿಂದ ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಮತ್ತು ಸೇವಾ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ರಾಜ್ಯ ಸರ್ಕಾರಿ ನೌಕರರು ಮತ್ತು ಅವಲಂಬಿತರಿಗೆ 50 ಲಕ್ಷ ರೂ.ವರೆಗೆ ಆರೋಗ್ಯ ವೆಚ್ಚ ಸೌಲಭ್ಯ ಸಿಗುವಂತೆ ಕಾರ್ಯಕ್ರಮ ರೂಪಿಸಲಾಗಿದೆ. ಈ ಬಗ್ಗೆ ಸರ್ಕಾರ ಮತ್ತು ಸುವರ್ಣ ಆರೋಗ್ಯ ಟ್ರಸ್ಟ್ ಜತೆ ಚರ್ಚೆ ನಡೆಸಿದ್ದು, ಸರ್ಕಾರ ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಘೋಷಣೆಯಷ್ಟೆ ಬಾಕಿ ಇದೆ. ದೇಶದಲ್ಲಿಯೇ ಇಂತಹ ಕಾರ್ಯಕ್ರಮ ಕರ್ನಾಟಕದಲ್ಲಿ ಮೊದಲು ಅನುಷ್ಠಾನವಾಗಲಿದ್ದು, ಇದರಿಂದ ನೌಕರರು ಸ್ವಾಭಿವಾನದಿಂದ ಬದುಕಲು ಸಾಧ್ಯವಾಗುತ್ತದೆ ಎಂದರು.

    ರಾಜ್ಯ ಸರ್ಕಾರಿ ನೌಕರರು, ಕೇಂದ್ರ ಸರ್ಕಾರಿ ನೌಕರರ ರೀತಿಯಲ್ಲಿ ಕನಿಷ್ಠ ವೇತನ ಹೆಚ್ಚಿಸಲು ಒತ್ತಾಯ ಮಾಡುತ್ತಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರ ಸ್ಪಂದಿಸದಿದ್ದರೆ ಹೋರಾಟಕ್ಕೆ ಇಳಿಯುವ ಕೆಲಸ ಮಾಡೋಣ ಎಂದರು. ಪ್ರತಿಭಾ ಪುರಸ್ಕಾರ, ಸೇವಾರತ್ನ ಪ್ರಶಸ್ತಿ ನೀಡುತ್ತಿರುವುದು ಸ್ಫೂರ್ತಿದಾಯಕ ಕಾರ್ಯಕ್ರಮವಾಗಿದೆ. ಸೇವಾರತ್ನ ಪ್ರಶಸ್ತಿ ಪಡೆದ ನೌಕರರು ಜವಾಬ್ದಾರಿಯನ್ನು ಅರಿತು ಸರ್ಕಾರಿ ಸೌಲಭ್ಯಗಳನ್ನು ಸಾರ್ವಜನಿಕರಿಗೆ ತಲುಪಿಸುವ ಕೆಲಸ ಮಾಡಬೇಕು. ವಿದ್ಯಾರ್ಥಿಗಳು ಉತ್ತಮವಾಗಿ ಅಧ್ಯಯನ ಮಾಡಿ ಶೈಕ್ಷಣಿಕ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.

    ಎಂಎಲ್‌ಸಿ ಪುಟ್ಟಣ್ಣ ಮಾತನಾಡಿ, ರಾಜಕಾರಣವೇ ಬೇರೇ ಸಂಟನೆಯೇ ಬೇರೆ. ಸಂಘಟನೆಗೆ ಬಂದ ಮೇಲೆ ಸೇವಾ ಮನೋಭಾವ ಇರುವವರಿಗೆ ಅವಕಾಶಗಳು ಹೆಚ್ಚು ಸಿಗಲಿವೆ. ಅಂತವರಿಗೆ ಮಾತ್ರ ನನ್ನ ಬೆಂಬಲವಿದೆ. ಆ ನಿಟ್ಟಿನಲ್ಲಿ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಮತ್ತು ಜಿಲ್ಲಾಧ್ಯಕ್ಷ ಬೈರಲಿಂಗಯ್ಯ ನೌಕರರರ ಪರವಾಗಿ ಉತ್ತಮ ಕೆಲಸ ವಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಸರ್ಕಾರಿ ನೌಕರರ ಸಂದ ಜಿಲ್ಲಾಧ್ಯಕ್ಷ ಆರ್.ಕೆ.ಬೈರಲಿಂಗಯ್ಯ ಮಾತನಾಡಿ, ಪ್ರತಿವರ್ಷ ಸರ್ಕಾರಿ ಶಾಲೆಗಳ 250 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು 45 ನೌಕರರಿಗೆ ಸೇವಾರತ್ನ ಪ್ರಶಸ್ತಿ ನೀಡಲಾಗುತ್ತಿದೆ ಎಂದರು.
    ಸರ್ಕಾರಿ ನೌಕರರ ವಿರುದ್ಧದ ಅನಾಮದೇಯ ಪತ್ರಗಳಿಗೆ ಮಾನ್ಯತೆ ಕೊಡುವುದಕ್ಕೆ ಕಡಿವಾಣ ಹಾಕಿ, ಶವ ಸಂಸ್ಕಾರಕ್ಕೆ ನೀಡುತ್ತಿದ್ದ 5 ಸಾವಿರ ರೂಪಾಯಿ ಸಹಾಯಧನವನ್ನು 15 ಸಾವಿರ ರೂಗಳಿಗೆ ಹೆಚ್ಚಳ, ಜಿಲ್ಲಾ ಕ್ರೀಡಾಕೂಟಕ್ಕೆ ನೀಡುತ್ತಿರುವ ಸಹಾಯಧನ 50 ಸಾವಿರ ರೂ.ಗಳಿಂದ 1.5 ಲಕ್ಷ ರೂ.ಗಳಿಗೆ ಏರಿಕೆ, ಆರು ತಿಂಗಳ ಶಿಶುಪಾಲನಾ ರಜೆ ವಿಸ್ತರಣೆಯಂತಹ ಹಲವು ಆದೇಶಗಳನ್ನು ಮಾಡಿಸಿದ ಕೀರ್ತಿ ಷಡಾಕ್ಷರಿಯವರಿಗೆ ಸಲ್ಲುತ್ತದೆ ಎಂದು ಬೈರಲಿಂಗಯ್ಯ ಹೇಳಿದರು.

    ಇದೇ ವೇಳೆ ನಾಲ್ಕು ತಾಲೂಕುಗಳ ಎಸ್‌ಎಸ್‌ಎಲ್‌ಸಿ, ಪಿಯುಸಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ತಾಪಂ ವಾಜಿ ಅಧ್ಯಕ್ಷ ಜಿ.ಎನ್.ನಟರಾಜು ಮಾತನಾಡಿದರು. ರಾಜ್ಯ ಸಂಘದ ಪದಾಧಿಕಾರಿಗಳಾದ ಶ್ರೀನಿವಾಸ್, ವೆಂಕಟೇಶ್, ಲಕ್ಷ್ಮಣ್, ರಾಜ್ಯ ಪರಿಷತ್ತು ಸದಸ್ಯ ಸತೀಶ್, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ರಾಜೇಗೌಡ, ಖಜಾಂಚಿ ನರಸಯ್ಯ, ಸಹ ಕಾರ್ಯದರ್ಶಿ ಶಿವಸ್ವಾಮಿ, ಗೌರವಾಧ್ಯಕ್ಷ ಕಾಂತರಾಜು, ಉಪನ್ಯಾಸಕ ಮಂಜುನಾಥ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರಮೇಶ್, ಪ್ರಾಂಶುಪಾಲರ ಸಂಘದ ಅಧ್ಯಕ್ಷ ರಾಧಾಕೃಷ್ಣ, ಡಿಡಿಪಿಐ ಸೋಮಶೇಖರಯ್ಯ, ಡಿಸಿಎ್ ದೇವರಾಜು, ಬಿಡದಿ ಕೈಗಾರಿಕಾ ಸಂಘದ ಕಾರ್ಯದರ್ಶಿ ಮುರುಳಿ, ತಾಲೂಕು ಅಧ್ಯಕ್ಷರಾದ ಶಿವರಾಮಯ್ಯ, ಚಿಕ್ಕೆಂಪೇಗೌಡ, ಚಂದ್ರಶೇಖರ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts