More

    ಜ್ಞಾನ ಬೆಲೆ ಕಟ್ಟಲಾಗದ ಸಂಪತ್ತು: ಸಹಾಯಕ ಪ್ರಾಧ್ಯಾಪಕ ಡಾ.ಪಿ.ಮಣಿ ಹೇಳಿಕೆ

    ಮಂಡ್ಯ: ಜ್ಞಾನ ಅಮೂಲ್ಯವಾದ ಸಂಪತ್ತು. ಇದಕ್ಕೆ ಬೆಲೆ ಕಟ್ಟಲಾಗದು ಎಂದು ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ಪಿ.ಮಣಿ ಹೇಳಿದರು.
    ನಗರದ ಪಿಇಎಸ್ ಕಾಲೇಜಿನ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಕನ್ನಿಕಶಿಲ್ಪ ನವೋದಯ ತರಬೇತಿ ಕೇಂದ್ರದ ವತಿಯಿಂದ ಆಯೋಜಿಸಿದ್ದ ಯುವ ಲೇಖಕಿ ಡಾ.ಎಚ್.ಆರ್.ಕನ್ನಿಕಾ ರಚಿತ ಆರು ಕೃತಿಗಳ ಬಿಡುಗಡೆ, ಗುರುವಂದನೆ, ಪ್ರತಿಭಾ ಪುರಸ್ಕಾರ ಹಾಗೂ ಕನ್ನಿಕಾಶಿಲ್ಪ ಸಾಹಿತ್ಯ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕಲು ಜ್ಞಾನ ತುಂಬಾ ಅಗತ್ಯ. ವಿಶಾಲವಾದ ಪ್ರಪಂಚದಲ್ಲಿ ಉನ್ನತ ಹುದ್ದೆ ಲಭಿಸಲು, ಸಾಧನೆ ಮಾಡಲು, ಗೌರವ ಸಂಪಾದಿಸಲು ಜ್ಞಾನ ಅತ್ಯಗತ್ಯ ಎಂದರು.
    ಆರು ಕೃತಿಗಳನ್ನು ಕುರಿತು ಮಾತನಾಡಿದ ಜಿಲ್ಲಾ ಯುವ ಬರಹಗಾರರ ಬಳಗದ ಅಧ್ಯಕ್ಷ ಟಿ.ಸತೀಶ್ ಜವರೇಗೌಡ, ಪಠ್ಯ ಪುಸ್ತಕಗಳ ಓದು ಮತ್ತು ಅಂಕಗಳ ಗಳಿಕೆಯ ವಿಪರೀತ ಒತ್ತಡಕ್ಕೆ ಒಳಗಾಗಿರುವ ವಿದ್ಯಾರ್ಥಿಗಳು ಸಾಹಿತ್ಯ ಪುಸ್ತಕಗಳಿಂದ ದೂರ ಉಳಿದಿದ್ದಾರೆ. ನಿಜವಾದ ಜ್ಞಾನ ಮತ್ತು ಅನುಭವ ಸಿಗುವುದು, ವ್ಯಕ್ತಿತ್ವ ವಿಕಾಸವಾಗುವುದು ಸಾಹಿತ್ಯದ ಪುಸ್ತಕಗಳ ಓದಿನಿಂದ ಮಾತ್ರ. ಆದ್ದರಿಂದ ವಿದ್ಯಾರ್ಥಿಗಳು ಸಾಹಿತ್ಯದತ್ತಲೂ ಆಸಕ್ತಿ ವಹಿಸಬೇಕು ಎಂದರು.
    ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಡಾ.ಎಚ್.ಎಸ್.ಮುದ್ದೇಗೌಡ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಸಾಪ ಅಧ್ಯಕ್ಷ ಸಿ.ಕೆ.ರವಿಕುಮಾರ ಚಾಮಲಾಪುರ ಕೃತಿಗಳನ್ನು ಬಿಡುಗಡೆ ಮಾಡಿದರು. ಪಿಇಎಸ್ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ.ರಾಮಲಿಂಗಯ್ಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಿದರು. ನಗರ ಕಸಾಪ ಅಧ್ಯಕ್ಷೆ ಸುಜಾತಾ ಕೃಷ್ಣ, ಲೇಖಕಿ ಡಾ.ಎಚ್.ಆರ್.ಕನ್ನಿಕಾ, ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲೆ ಎಚ್.ಆರ್.ಶಿಲ್ಪಾ ಇತರರಿದ್ದರು.
    ಇದೇ ವೇಳೆ ಬಿ.ಪ್ರಕಾಶ್, ಡಾ.ವಿ.ಕೆ.ಕೃಷ್ಣಪ್ಪ, ಡಾ.ಎಸ್.ಬಿ.ಶಂಕರೇಗೌಡ, ಡಾ.ಕೆ.ಚನ್ನಕೃಷ್ಣಯ್ಯ, ಡಾ.ಟಿ.ಕೆ.ರವಿ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಸಾಹಿತಿಗಳಾದ ಡಾ.ಡಿ.ಸಿ.ರಾಮಚಂದ್ರ ಆದಿಚುಂಚನಗಿರಿ, ಕೆ.ಪಿ.ಪದ್ಮಾ, ಶಿಲ್ಪಾ, ದೀಕ್ಷಿತ್ ನಾಯರ್ ಅವರಿಗೆ ’ಕನ್ನಿಕಾಶಿಲ್ಪ ಸಾಹಿತ್ಯ ಪುರಸ್ಕಾರ’ ನೀಡಿ ಗೌರವಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts