More

    ಪಕ್ಷಕ್ಕೂ, ಪಕ್ಕದಲ್ಲಿರುವವರಿಗೂ ದ್ರೋಹ ಬಗೆಯಲ್ಲ: ಸಂಸದ ಪ್ರತಾಪ್ ಸಿಂಹ

    ಮೈಸೂರು: ಲೋಕಸಭಾ ಚುನಾವಣೆ 2024ಕ್ಕೆ ಈಗಾಗಲೇ ಸಕಲ ತಯಾರಿ ನಡೆಯುತ್ತಿದ್ದು, ಇತ್ತೀಚೆಗಷ್ಟೇ ಬಿಜೆಪಿಯ ಎರಡನೇ ಪಟ್ಟಿ ಅಧಿಕೃತವಾಗಿ ಪ್ರಕಟವಾಯಿತು. ಕರ್ನಾಟಕದ 28 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಘೋಷಣೆ ಮಾಡಲಾಯಿತು. ಈ ಪಟ್ಟಿಯಲ್ಲಿ ಮೈಸೂರು-ಕೊಡುಗು ಕ್ಷೇತ್ರಕ್ಕೆ ಪ್ರತಾಪ್ ಸಿಂಹ ಬದಲಿಗೆ ಈ ಬಾರಿ ಮೈಸೂರು ರಾಜವಂಶಸ್ಥರಾದ ಯದುವೀರ್‌ ಒಡೆಯರ್‌ ಅವರಿಗೆ ಟಿಕೆಟ್ ಕೊಡಲಾಯಿತು. ಈ ಸಂಗತಿ ಪ್ರತಾಪ್ ಅಭಿಮಾನಿಗಳಿಗೆ ಭಾರೀ ಅಚ್ಚರಿ ತಂದಿದ್ದು ಎಲ್ಲರಿಗೂ ತಿಳಿದೇ ಇದೆ.

    ಇದನ್ನೂ ಓದಿ: ಯಶಸ್ವಿ ಯುವ ಉದ್ಯಮಿ ಸಿ.ಎಸ್​. ವೇಣುಗೋಪಾಲ್​​; ಕಟ್ಟಡ ವಿನ್ಯಾದಲ್ಲಿ ನೈಪುಣ್ಯ​

    ಯದುವೀರ್​ಗೆ ಟಿಕೆಟ್​ ಘೋಷಣೆಯಾದ ದಿನದಿಂದಲೂ ಪ್ರತಾಪ್ ಸಿಂಹ ಕಾರ್ಯಕರ್ತರಲ್ಲಿ ಹಾಗೂ ಅಭಿಮಾನಿಗಳಲ್ಲಿ ಸಾಕಷ್ಟು ಗೊಂದಲಗಳು ಭುಗಿಲೆದ್ದಿವೆ. ಈ ಕುರಿತು ಹಲವು ಬಾರಿ ಸ್ಪಷ್ಟನೆ ನೀಡಿದ ಸಂಸದರು, “ಮಹಾರಾಜ ಯದುವೀರ್‌ ಒಡೆಯರ್‌ ಅವರಿಗೆ ಅಭಿನಂದನೆಗಳು. ಕೂಡಲೇ ತಯಾರಿ ಆರಂಭಿಸೋಣ. ಪ್ರಚಾರಕ್ಕೆ ಇಳಿಯೋಣ, ದೇಶಕ್ಕಾಗಿ.. ಮೋದಿಗಾಗಿ” ಎಂದು ಹೇಳಿದ್ದರು. ಆದರೂ ಸಹ ಗೊಂದಲಗಳಿಗೂ ಇನ್ನೂ ತೆರೆಬಿದ್ದಿಲ್ಲ ಎಂಬಂತೆ ಕಾಣುತ್ತಿದೆ.

    ಇನ್ನು ನಿನ್ನೆ (ಮಾರ್ಚ್​​ 18) ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರತಾಪ್ ಸಿಂಹ, “2014ರಲ್ಲಿ ನನಗೆ ಟಿಕೆಟ್​ ಕೊಟ್ಟಿಲ್ಲ ಅಂದಿದ್ರೆ, ಇವತ್ತಿಗೆ ಅಲ್ಲೆಲ್ಲೋ ಬರೆದುಕೊಂಡು ಕುಳಿತಿರುತ್ತಿದ್ದೆ. ಇವತ್ತು ಬಂದು ಈ ಪಕ್ಷ ನನಗೆ ಟಿಕೆಟ್​ ಕೊಟ್ಟು 10 ವರ್ಷ ಎಂಪಿ ಮಾಡಿದೆ. ವೇದಿಕೆಗಳಲ್ಲಿ ಮಾತ್ರ ಪಕ್ಷ ನನ್ನ ತಾಯಿ ಎಂದು ಹೇಳೋದಲ್ಲ, ನಿಜವಾಗಿಯೂ ಬಿಜೆಪಿ ತಾಯಿಯೂ ಹೌದು. ಪಕ್ಷಕ್ಕೂ ಹಾಗೂ ಪಕ್ಕದಲ್ಲಿರುವವರಿಗೂ ದ್ರೋಹ ಬಗೆಯಲ್ಲ” ಎಂದರು.

    ಇದನ್ನೂ ಓದಿ: ಡಿಕೆಸು ಗಟ್ಟಿ ನೆಲೆಗೆ ಪೆಟ್ಟು ಕೊಡುವರೇ ಹೃದಯದ ಡಾಕ್ಟರ್? ಬೆಂ.ಗ್ರಾಮಾಂತರ ಕ್ಷೇತ್ರದಲ್ಲಿ ಮೈತ್ರಿ ಚಟುವಟಿಕೆ ಬಿರುಸು

    “ಇವತ್ತಿರೋ ಬಿಜೆಪಿ ಒಳಗಡೆ ಇರುವಂತವರಲ್ಲಿ ಯಾರು ಕೂಡ ಮೂಲ ಬಿಜೆಪಿ………” ಇನ್ನು ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ವಿಡಿಯೋ ಕ್ಲಿಕ್ ಮಾಡಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts