More

    ಲಸಿಕೆ ಹಾಕಿಸಿಕೊಂಡ ಕೆಜಿಎಫ್​ ನಿರ್ದೇಶಕ; ಇದೇನು ನಾಚಿಕೇನಾ? ಭಯಾನಾ? ಎಂದು ಪ್ರಶ್ನಿಸ್ತಿದಾರೆ ಅಭಿಮಾನಿಗಳು

    ಬೆಂಗಳೂರು: ಕೆಜಿಎಫ್, ಉಗ್ರಂನಂತಹ ಟಾಪ್​ ಸಿನಿಮಾಗಳನ್ನು ನಿರ್ದೇಶಿಸಿರುವ ನಿರ್ದೇಶಕ ಪ್ರಶಾಂತ್​ ನೀಲ್​ ಕರೊನಾ ಲಸಿಕೆ ಪಡೆದುಕೊಂಡಿದ್ದಾರೆ. ನಾನು ಲಸಿಕೆ ಪಡೆದೆ, ನೀವೂ ನಿಮ್ಮ ಕುಟುಂಬದೊಂದಿಗೆ ಲಸಿಕೆ ಪಡೆದು ಸುರಕ್ಷಿತವಾಗಿರಿ ಎಂದು ಅವರು ಮಾಡಿರುವ ಟ್ವೀಟ್​ ಇದೀಗ ಭಾರೀ ವೈರಲ್​ ಆಗಿದೆ.

    ಪ್ರಶಾಂತ್ ನೀಲ್ ತಾವು ಲಸಿಕೆ ಪಡೆಯುತ್ತಿರುವ ಫೋಟೋವನ್ನೂ ಟ್ವೀಟ್​ ಮಾಡಿದ್ದಾರೆ. ಅದರಲ್ಲಿ ಅವರ ಎಡಗೈಗೆ ನರ್ಸ್​ ಇಂಜೆಕ್ಷನ್​ ಕೊಡುತ್ತಿದ್ದರೆ, ಅವರು ಬಲಗಡೆ ತಿರುಗಿಕೊಂಡು ಕೈನಿಂದ ಕಣ್ಣು ಮುಚ್ಚಿಕೊಂಡಿರುವುದನ್ನು ಕಾಣಬಹುದು. ಮಾಸ್​ ಸಿನಿಮಾಗಳನ್ನು ನಿರ್ದೇಶಿಸಿರುವ ಮಾಸ್ ಡೈರೆಕ್ಟರ್​ ಈ ರೀತಿ ಕಣ್ಣು ಮುಚ್ಚಿ ಕುಳಿತಿದ್ದನ್ನು ನೋಡಿ ಅನೇಕ ಸೆಲೆಬ್ರಿಟಿಗಳು ಸೇರಿ ಅಭಿಮಾನಿಗಳು ಪ್ರತಿಕ್ರಿಯಿಸಲಾರಂಭಿಸಿದ್ದಾರೆ.

    ಬಾಲಿವುಡ್ ನಟಿ ರವಿನಾ ಟೆಂಡನ್ ಕೂಡ ಪ್ರಶಾಂತ್ ಅವರ ಟ್ವೀಟ್​ಗೆ ರಿಪ್ಲೇ ಮಾಡಿದ್ದಾರೆ. ಪ್ರಶಾಂತ್​ ಇದು ತುಂಬಾ ಕ್ಯೂಟ್ ಆಗಿದೆ. ನಾನು ಲಸಿಕೆ ಪಡೆದ ವಿಡಿಯೋವನ್ನು ನೀವು ನೋಡಬೇಕಿತ್ತು ಎಂದು ಕಾಮೆಂಟ್ ಮಾಡಿದ್ದಾರೆ. ಸಾಕಷ್ಟು ಅಭಿಮಾನಿಗಳು ಕೂಡ ಪ್ರಶಾಂತ್​ ಟ್ವೀಟ್​ಗೆ ಪ್ರತಿಕ್ರಿಯಿಸಿದ್ದಾರೆ. ಇಂಜೆಕ್ಷನ್ ಕೊಡುತ್ತಿದ್ದರೆ ಕಣ್ಣು ಮುಚ್ಚಿಕೊಂಡಿದ್ದು ಏಕೆ? ಇದೇನು ಭಯವೋ ಅಥವಾ ನಾಚಿಕೆಯೋ? ಉಗ್ರಂ, ಕೆಜಿಎಫ್​ನಂತಹ ಸಿನಿಮಾ ನಿರ್ದೇಶಿಸಿದವರಿಗೆ ಭಯವಿರಲು ಸಾಧ್ಯವಿಲ್ಲ, ಇದು ನಾಚಿಕೆಯೇ ಇರಬೇಕು ಎಂದು ಕಾಮೆಂಟ್ ಮಾಡಲಾರಂಭಿಸಿದ್ದಾರೆ. (ಏಜೆನ್ಸೀಸ್)

    ಮತ್ತೆ ರಸ್ತೆ ಪಾಲಾದ ಬಾಬಾ ಕಾ ಡಾಬಾ! ರೆಸ್ಟೋರೆಂಟ್​ ಕಥೆ ಏನಾಯಿತು?

    17 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿಹೋದ ಶಿಕ್ಷಕಿ! ದಿನಕ್ಕೆ ನಾಲ್ಕು ತಾಸು ಒಟ್ಟಿಗೇ ಕುಳಿತಿರುತ್ತಿದ್ದರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts