More

    10 ಕ್ಷೇತ್ರದಿಂದ ಶ್ರೀರಾಮ ಸೇನೆ ಕಾರ್ಯಕರ್ತರು ಚುನಾವಣೆಗೆ ನಿಲ್ಲುತ್ತಾರೆ; ನಾನು ಗೆದ್ದರೂ ಬೆಂಬಲಿಸುವುದೇ ಬಿಜೆಪಿಯನ್ನೇ!

    ಬಾಗಲಕೋಟೆ: ರಾಜ್ಯದ ಹತ್ತು ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಶ್ರೀರಾಮ ಸೇನೆ ಸ್ಪರ್ಧಿಸುವುದಾಗಿ ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

    ಬಾಗಲಕೋಟೆಯಲ್ಲಿ ಬಿಜೆಪಿ ವಿರುದ್ದ ಆಕ್ರೋಶ ಹೊರಹಾಕಿದ ಪ್ರಮೋದ ಮುತಾಲಿಕ್. ಬಿಜೆಪಿಯವರಿಗೆ ಪ್ರಮೋದ್​ ಮುತಾಲಿಕ್ ಅಥವಾ ಹಿಂದು ಹೋರಾಟಗಾರರಿಗೆ 224 ಕ್ಷೇತ್ರದಲ್ಲಿ ಟಿಕೆಟ್ ಕೊಡಲು ಒಂದೇ ಒಂದು ಸ್ಥಾನ ಕಾಣಲಿಲ್ಲವಾ? ನಿಮ್ಮನ್ನು ಅಧಿಕಾರದ ಗದ್ದುಗೆಗೆ ಏರಿಸಿದವರು ನಾವು. ನಮ್ಮ ರಕ್ತ, ನೀರು, ಬೆವರು ಹರಿಸಿ ಗೆಲ್ಲಿಸಿದ್ದೇವೆ. ಒಂದು ‌ಚೂರಾದರು ಕರುಣೆ ಬೇಡವಾ ಈ ಬಿಜೆಪಿ ಅವರಿಗೆ ಎಂದು ಪ್ರಶ್ನಿಸಿದ್ದಾರೆ.

    ಬಿಜೆಪಿಯನ್ನು ಬೆಳೆಸಿರುವುದರಲ್ಲಿ ನನ್ನದೂ ಪಾಲಿದೆ. ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೋರಿ ಕೇಳಲು ನನಗೆ ಹಕ್ಕಿದೆ. ಆ ಹಿನ್ನೆಲೆಯಲ್ಲಿ ಕೇಳುತ್ತಿದ್ದೇನೆ, ನೀವು ಹಿಂದು ಕಾರ್ಯಕರ್ತರಿಗೆ, ಹೋರಾಟಗಾರರಿಗೆ ದ್ರೋಹ ಮಾಡಿದ್ದೀರಿ. ಕಾರ್ಕಳದಲ್ಲಿ ವಿಜಯ ಸಾಧಿಸಿ ನನಗೆ ಯಾರ್ಯಾರು ದ್ರೋಹ ಮಾಡಿದವರಿಗೆ ನಾನು ಏನು ಅಂತ ತೋರಿಸ್ತಿನಿ ಎಂದು ಎಚ್ಚರಿಕೆ ನೀಡಿದರು.

    ಪ್ರಮೋದ್ ಮುತಾಲಿಕ್ ಮುಂದುವರಿದು ಮಾತನಾಡುತ್ತಾ, ಕಾರ್ಕಾಳದಲ್ಲಿ ನನ್ನ ಸ್ಪರ್ಧೆ ಬಿಜೆಪಿ ವಿರುದ್ದ ಅಲ್ಲ. ಆದರೆ, ಬಿಜೆಪಿಯಲ್ಲಿ ಇರುವ ವಿಕೃತಿಗಳು, ಹಿಂದು ದ್ರೋಹಿಗಳು, ಭ್ರಷ್ಟರು, ಹಿಂದು ಸಿದ್ಧಾಂತ ಹಾಳು ಮಾಡಿದವರ ವಿರುದ್ದ ನನ್ನ ಹೋರಾಟ ಎಂದರು.

    ಬಿಜೆಪಿಯಿಂದ ಹಿಂದು ಹೋರಾಟಗಾರರಿಗೆ 25 ಸೀಟು ಕೊಡುವಂತೆ ಹಿಂದು ಸಂಘಟನೆಗಳ ಒಕ್ಕೂಟದಿಂದ ಬಿಜೆಪಿ ಸರ್ಕಾರಕ್ಕೆ ಮನವಿ ಮಾಡಿದ್ದೆವು. ನಮ್ಮ ಮನವಿಗೆ ಬಿಜೆಪಿ ಸ್ಪಂದಿಸಿಲ್ಲ. ಹೀಗಾಗಿ ರಾಜ್ಯದ 25 ಕಡೆಗೆ ಹಿಂದು ಸಂಘಟನೆಗಳಿಂದ ಅಭ್ಯರ್ಥಿಯನ್ನು ಚುನಾವಣೆಗೆ ನಿಲ್ಲಿಸುತ್ತೇವೆ. ನೂರಕ್ಕೆ ನೂರರಷ್ಟು ಚುನಾವಣೆಯಲ್ಲಿ ಗೆದ್ದು ಹಿಂದುತ್ವದ ಪತಾಕೆ ಕಾರ್ಕಾಳದ ಮೂಲಕ ಹಾರಿಸುತ್ತೇನೆ.

    ನಮ್ಮ ಆದರ್ಶ ನರೇಂದ್ರ ಮೋದಿಯಾಗಿದ್ದು, ಅವರ ವಿಚಾರಧಾರೆಯನ್ನು ಕಾರ್ಕಾಳದ ಮೂಲಕ ತರುಲು ಕಣಕ್ಕೆ ಇಳಿದಿದ್ದೇನೆ. ನಾನು ಗೆದ್ದರೂ ಬೆಂಬಲಿಸುವುದೇ ಬಿಜೆಪಿಯನ್ನು. ಕಾರ್ಕಾಳದಲ್ಲಿ ಸಚಿವ ಸುನೀಲ್ ಕುಮಾರ್ ಸುತ್ತಲೂ ಇರುವವರೆಲ್ಲ ಕಾಂಗ್ರೆಸ್ಸಿನವರು. ಬಿಜೆಪಿ ಕಾರ್ಯಕರ್ತರು, ಸಿದ್ಧಾಂತ ಕಡೆಗಣಿಸಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts