More

  ಕೋಮಲ್​ಗೆ ಪ್ರಕಾಶ್​ ರೈ ಸಾಥ್​ … ‘ಕಾಲಾಯ ನಮಃ’ ಚಿತ್ರಕ್ಕೆ ಎಂಟ್ರಿ

  ಬೆಂಗಳೂರು: ಕೆಲವು ತಿಂಗಳುಗಳ ಹಿಂದೆ ‘ವೀರ ಕಂಬಳ’ ಚಿತ್ರದಲ್ಲೊಂದು ಪ್ರಮುಖ ಮತ್ತು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಬಹುಭಾಷಾ ನಟ ಪ್ರಕಾಶ್​ ರೈ, ಇದೀಗ ಮತ್ತೊಂದು ಕನ್ನಡ ಚಿತ್ರದ ಭಾಗವಾಗಿದ್ದಾರೆ. ಕೋಮಲ್​ ಅಭಿನಯದ ಹೊಸ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ.

  ಇದನ್ನೂ ಓದಿ: ರಹಸ್ಯವಾಗಿ ನಡೆದು ಹೋಯಿತಾ ರಾಖಿ ಸಾವಂತ್​ ಮದುವೆ?!

  ‘ಟ್ವೆಂಟಿ ಟ್ವೆಂಟಿ’ ನಂತರ ಕೋಮಲ್​ ಅಭಿನಯಿಸುತ್ತಿರುವ ಹೊಸ ಚಿತ್ರವೇ ‘ಕಾಲಾಯಾ ನಮಃ’. ಹೆಸರೇ ಹೇಳುವಂತೆ ಕಾಲದ ಮಹಿಮೆಯ ಕುರಿತ ಚಿತ್ರ ಇದ್ದಾಗಿದ್ದು, ಈ ಚಿತ್ರಕ್ಕೆ ಪ್ರಕಾಶ್​ ರೈ ಅವರ ಎಂಟ್ರಿಯಾಗಿದೆ. ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಈ ಚಿತ್ರದ ಚಿತ್ರೀಕರಣದಲ್ಲಿ ಪ್ರಕಾಶ್​ ರೈ ಭಾಗವಹಿಸಿದ್ದು, ಅವರೊಂದಿಗೆ ಕೋಮಲ್​ ಮತ್ತು ಶೈನ್​ ಶೆಟ್ಟಿ ಸಹ ನಟಿಸಿದ್ದಾರೆ.

  ಸಮಯ ಯಾರ ಮಾತೂ ಕೇಳುವುದಿಲ್ಲ, ಯಾವಾಗ ಏನಾಗಬೇಕೋ ಅದೇ ಆಗುತ್ತದೆ ಎಂಬ ಸಂದೇಶ ಸಾರುವ ಈ ಚಿತ್ರವನ್ನು ಕೋಮಲ್​ ಪತ್ನಿ ಅನುಸೂಯ ಕೋಮಲ್​ ನಿರ್ಮಿಸುತ್ತಿದ್ದು, ತಮಿಳಿನ ಮತಿವಣ್ಣನ್​ ನಿರ್ದೇಶನ ಮಾಡತ್ತಿದ್ದಾರೆ. ಎಮಿಲ್ ಸಂಗೀತ ನಿರ್ದೇಶನ ಹಾಗೂ ರಾಕೇಶ್ ಸಿ ತಿಲಕ್ ಛಾಯಾಗ್ರಹಣ ಈ ಚಿತ್ರಕ್ಕಿದೆ.

  ಇದನ್ನೂ ಓದಿ: RRR​ ಐತಿಹಾಸಿಕ ಸಾಧನೆ: ನಾಟು ನಾಟು ಹಾಡಿಗೆ ಅಂತಾರಾಷ್ಟ್ರೀಯ ಗೋಲ್ಡನ್​ ಗ್ಲೋಬ್ಸ್​-2023 ಗೌರವ

  ‘ಕಾಲಾಯ ನಮಃ’ ಚಿತ್ರದಲ್ಲಿ ಕೋಮಲ್ ಕುಮಾರ್, ಆಸಿಯಾ ಫಿರ್ದೋಸ್, ಪ್ರಕಾಶ್ ರೈ, ಸುಚೀಂದ್ರ ಪ್ರಸಾದ್, ತಿಲಕ್, ಯತಿರಾಜ್ ಜಗ್ಗೇಶ್ ಮುಂತಾದವರು ನಟಿಸುತ್ತಿದ್ದಾರೆ.

  ‘ಪಠಾಣ್​’ ವಿವಾದ: ರಾಜಕಾರಣಿಗಳು ನಟಿಯರ ಬಟ್ಟೆಗಳ ಬಗ್ಗೆ ಯೋಚಿಸುವುದನ್ನು ಬಿಡಲಿ ಎಂದ ಸ್ವರಾ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts